ಕೇಂದ್ರ ಸರಕಾರದ‌ ಸಾಧನೆ ಶೂನ್ಯ: ಗುಂಡೂರಾವ್

0
26

ಚಿಕ್ಕೋಡಿ
ಐದು‌ವರ್ಷದಲ್ಲಿ ಕೇಂದ್ರ ಸರಕಾರದ ಸಾಧನೆ ಶೂನ್ಯ. ಬಿಜೆಪಿ ಅವರಿಗೆ ನಿಮ್ಮ ಸಾಧನೆಯ ಬಗ್ಗೆ ಹೇಳಿ‌ ಎಂದರೆ ನಾವು ರಾಷ್ಟ್ರವಾದಿಗಳು ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದರು.
ಶುಕ್ರವಾರ ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಪ್ರಕಾಶ ಹುಕ್ಕೇರಿ ಅವರ ಪ್ರಚಾರ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಕೇಂದ್ರದಲ್ಲಿ ಆಡಳಿತ ನಡೆಸಿದ ನರೇಂದ್ರ ಮೋದಿ ಅವರು ಪ್ರಧಾನಿಯಲ್ಲ ಪ್ರಚಾರಕರು ಎಂದು ಲೇವಡಿ ಮಾಡಿದರು.
ಇತ್ತೀಚಿಗೆ ಬಾಗಲಕೋಟ ನಲ್ಲಿ ನರೇಂದ್ರ ಮೋದಿ ಅವರು ಸಮ್ಮಿಶ್ರ ಸರಕಾರದ ವಿರುದ್ದ ವಾಗ್ದಾಳಿ ನಡೆಸಿದರು. ಆದರೆ ಕೇಂದ್ರದಲ್ಲಿ ನಿಮ್ಮ ಸಾಧನೆ ಏನು ಎಂದು ಪ್ರಶ್ನಿಸಿದರು.
ಕಳೆದ ಲೋಕಸಭಾ ಚುನಾವಣೆಯಲ್ಲಿ ಕಪ್ಪು ಹಣ ತಂದು ದೇಶದ ಜನರ ಖಾತೆಗೆ 15 ಲಕ್ಷ ರು. ಹಣ ಹಾಕುತ್ತೇವೆ ಎಂದಿದ್ದರು. ಎಲ್ಲಿ ಯಾರ ಖಾತೆಗೆ ನಯಾಪೈಸೆ ಬಂದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಮ್ಮಿಶ್ರ ಸರಕಾರದ ವಿರುದ್ದ ಟಿಕೆ ಮಾಡುವ ಪ್ರಧಾನಿ ನರೇಂದ್ರ ಮೋದಿ ಅವರು ಇದು ಲೋಕಸಭಾ ಚುನಾವಣೆ ಕೇಂದ್ರ ಸರಕಾರದ ರಿಪೋರ್ಟ್‌ ಕೊಟ್ಟು ಮಾತನಾಡಿ, ವಿಧಾನಸಭಾ ಚುನಾವಣೆಯಲ್ಲಿ ರಾಜ್ಯ ಸರಕಾರದ ಸಾಧನೆಯ ಬಗ್ಗೆ ಮಾತನಾಡಿ ಎಂದರು.
ಪ್ರಧಾನಿ ನರೇಂದ್ರ ಮೋದಿ ಒಬ್ಬ ಬ್ಪಫ್ ಮಾಸ್ಟರ್ ಸುರೇಶ ಅಂಗಡಿ, ನಳಿನಕುಮಾರ ಕಟಿಳ, ಶೋಭ, ಗದ್ದಿಗೌಡರ ಕೊಡುಗೆ ಏನಿದೆ. ಮಹದಾಯಿ ನದಿ ನೀರು ಹರಿಸುವಂತೆ ಯಾವೊಬ್ಬ ಬಿಜೆಪಿಯ ಸಂಸದರು ಮಾಡಲಿಲ್ಲ. ಮತ್ತೇ ಪ್ರಚೋದನೆ ‌ಮಾಡಿ ಮತ ಕೇಳುವುದನ್ನು ಕೈ ಬಿಡಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ನರೇಂದ್ರ ಮೋದಿ ಯಾವೊಬ್ಬ ರೈತ, ಬಡವರ, ಸಮಾನ್ಯ ಜನರ ಜತೆ ಫೋಟೋ ಇಲ್ಲ. ಆದರೆ ಅನಿಲ್ ಅಂಬಾನಿ, ಲಲಿತ ಮೋದಿ ಅವರೊಂದಿಗೆ ಫೋಟೋ ತೆಗೆಸಿಕೊಂಡು ಸುಟು ಬೂಟು ಹಾಕಿಕೊಂಡು ದಿನಕ್ಕೆ ನಾಲ್ಕೈದು ಬಾರಿ ಬಟ್ಟೆಗಳನ್ನು ಧರಿಸಿ ಸಂಚರಿಸಿಕೊಂಡು ಓಡಾಡುತ್ತಿದ್ದಾರೆ ಎಂದು ಆರೋಪಿಸಿದರು.
ಅರಣ್ಯ ಸಚಿವ ಸತೀಶ ಜಾರಕಿಹೊಳಿ ಮಾತನಾಡಿ,
ಕಳೆದ ಲೋಕಸಭಾ ಚುನಾವಣೆಯಲ್ಲಿ ಮೋದಿ ಅವರ ಅಲೆ ಸಾವಿರ ಕಿಲೋಮೀಟರ್ ನಲ್ಲಿತ್ತು. ಆ ಸಂದರ್ಭದಲ್ಲಿಯೇ ಪ್ರಕಾಶ ಹುಕ್ಕೇರಿ ಅವರನ್ನು ಆಯ್ಕೆ ಮಾಡಿದ್ದೀರಿ. ಆದರೆ ಈ ಸಲ ಮೂವತ್ತು ನಾಲ್ವತ್ತು ಕಿಲೋಮೀಟರ್ ಮಾತ್ರ ಮೋದಿ ಅಲೆ ಇದೆ ಎಂದು ವ್ಯಂಗ್ಯವಾಡಿದರು.
ಪ್ರಕಾಶ ಹುಕ್ಕೇರಿ ಅವರು ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯವನ್ನು ಮಾಡಿದ್ದಾರೆ‌.
ಕಳೆದ ಬಾರಿ ಲೋಕಸಭಾ ಚುನಾವಣೆಯಲ್ಲಿ ಮೋದಿ ನೀಡಿದ ಭರವಸೆಯ ಭಾಷಣ ಈ ಸಲ ಮಾಡುತ್ತಿಲ್ಲ.  ಕೇವಲ ಕೋಮುವಾದ, ಜಾತಿ ಜಾತಿ, ಕಾಶ್ಮೀರ, ಸೈನಿಕರ ವಿಷಯವನ್ನು ಮುಂದಿಟ್ಟುಕೊಂಡು ಪ್ರಚಾರ ನಡೆಸಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಬಹಳಷ್ಟು ಸುಳ್ಳು ಹೇಳಿ ಅಧಿಕಾರ ಹಿಡಿದ ಬಿಜೆಪಿ 18 ರಿಂದ 25 ವರ್ಷದ ಯುವಕರಿಗೆ ತಮ್ಮ ಐದು ವರ್ಷದಲ್ಲಿ ಸಾಕಷ್ಟು ಅಭಿವೃದ್ಧಿ ಮಾಡಿದ್ದೇವೆ ಎಂದು ತೋರಿಸುತ್ತಾರೆ. ಮೋದಿ, ಶಾ ದೇಶದಲ್ಲಿ ತಮ್ಮ ಐದು ವರ್ಷದ ಅಧಿಕಾರದಲ್ಲಿ ಸಾಕಷ್ಟು ಅಭಿವೃದ್ಧಿ ಮಾಡಿದ್ದೇವೆ ಎಂದು ಸುಳ್ಳು ಹೇಳಿದ್ದಾರೆ ಎಂದು ಆರೋಪಿಸಿದರು.
ಸದ್ಯ ದೇಶದಲ್ಲಿ ಸೈನ್ಯ ಸದೃಢವಾಗಿದೆ. ಅದಕ್ಕೆ ಹಿಂದಿನ ಯುಪಿಎ ಸರಕಾರವೇ ಕಾರಣ. ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರಕಾಶ ಹುಕ್ಕೇರಿ ಅವರನ್ನು ಒಂದು ಲಕ್ಷದ ಮತದಿಂದ ಆಯ್ಕೆ ಮಾಡುವಂತೆ ವಿನಂತಿಸಿಕೊಂಡರು.
—————
ಕೈಕೊಟ್ಟ ರಮೇಶ ಜಾರಕಿಹೊಳಿ
ಚಿಕ್ಕೋಡಿ
ಸಮ್ಮಿಶ್ರ ಸರಕಾರದ ಸಚಿವ ಸಂಪುಟ ವಿಸ್ತರಣೆಯಲ್ಲಿ ಸಚಿವ ಸ್ಥಾನ ಕಳೆದುಕೊಂಡು ಕಾಂಗ್ರೆಸ್ ವಿರುದ್ದ ಬಂಡಾಯದ ಬಾವುಟ ಹಾರಿಸಿರುವ ಗೋಕಾಕ ರೆಬಲ್ ಶಾಸಕ ರಮೇಶ ಜಾರಕಿಹೊಳಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಪ್ರಕಾಶ ಹುಕ್ಕೇರಿ ಅವರ ಬೃಹತ್ ಪ್ರಚಾರ ಸಮಾವೇಶಕ್ಕೆ ರಮೇಶ ಬಾರದೆ ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ.
ಮಾಜಿ ಸಚಿವ ರಮೇಶ ಜಾರಕಿಹೊಳಿ ಈ ಹಿಂದೆಯೇ ಬಿಜೆಪಿಗೆ ಸೇರ್ಪಡೆಗೊಳ್ಳಲಿದ್ದಾರೆ ಎನ್ನುವ ಚರ್ಚೆಗಳು ರಾಜ್ಯ ರಾಜಕಾರಣದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಆದರೆ ಕೊನೆಯ ಗಳಿಗೆಯಲ್ಲಿ ಸಿಎಂ ಕುಮಾರಸ್ವಾಮಿ ನೇತೃತ್ವದಲ್ಲಿ ಮಂಡಿಸಿದ ರಾಜ್ಯ ಬಜೆಟ್ ಅಧಿವೇಶನಕ್ಕೆ ಹಾಜರಾಗಿ ಕಾಂಗ್ರೆಸ್‍ನಲ್ಲಿಯೇ ಇರುತ್ತೇನೆ ಎಂದು ಹೇಳಿದ್ದ ರಮೇಶ ಜಾರಕಿಹೊಳಿ ಬೆಳಗಾವಿ ಲೋಕಸಭಾ ಚುನಾವಣೆಯಲ್ಲಿ ಎಲ್ಲಿಯೂ ಕಾಣಿಸಿಕೊಳ್ಳದೆ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಗೊಂದಲ ಮೂಡಿಸಿದ್ದರು. 
ಲೋಕಸಭಾ ಚುನಾವಣೆ ಬೆರಳಣಿಕೆಯ ದಿನಷ್ಟು ಉಳಿದಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಗೋಕಾಕನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ನಡೆಸಲು ಇನ್ನೊರ್ವ ಸಹೋದರ ಲಖನ್ ಜಾರಕಿಹೊಳಿ ಅವರಿಗೆ ಜವಾಬ್ದಾರಿ ನೀಡಿದ ಹಿನ್ನೆಲೆಯ ಕಾಂಗ್ರೆಸ್ ವಿರುದ್ದ ಮುನಿಸಿಕೊಂಡು ಎಐಸಿಸಿ ಅಧ್ಯಕ್ಷ  ರಾಹುಲ್ ಗಾಂಧಿ ಅವರಿಗೆ ಭೇಟಿಯಾಗದೆ ಇರುವುದು ಹಲವು ಅನುಮಾನಕ್ಕೆ ಕಾರಣವಾಗಿದೆ.
loading...