ಕೇರಳದಲ್ಲಿ ಏರ್ ಇಂಡಿಯಾ ವಿಮಾನ ಅವಘಡ:ಮೃತರ ಸಂಖ್ಯೆ 18 ಕ್ಕೆ ಏರಿಕೆ: ವಿಮಾನ ನಿಲ್ದಾಣಕ್ಕೆ ಸಚಿವರ ದಂಡು

0
13

ತಿರುವನಂತಪುರಂ:- ಕರಿಪುರ ವಿಮಾನ ನಿಲ್ದಾಣಕ್ಕೆ ಇಂದು ಸಚಿವರ ದಂಡೆ ಹರಿದು ಬರುತ್ತಿದೆ.
ರಾಜ್ಯದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕೇಂದ್ರ ವಿಮಾನಯಾನ ಸಚಿವ ಹರ್ ದೀಪ್ ಸಿಂಗ್ ಪುರಿ ಮತ್ತೊಬ್ಬ , ಕೇಂದ್ರ ವಿದೇಶಾಂಗ ಖಾತೆ ಸಹಾಯಕ ಸಚಿವ ವಿ. ಮುರಲೀಧರನ್ ಬೇಟಿ ನೀಡುತ್ತಿದ್ದಾರೆ.
ಈ ನಡುವೆ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 18 ಕ್ಕೆ ಏರಿಕೆಯಾಗಿದೆ ಎಂಬ ಸಂಗತಿಯನ್ನು ವಿಮಾನಯಾನ ಸಚಿವರೆ ಬಹಿರಂಗಪಡಿಸಿದ್ದಾರೆ.
ಇಬ್ಬರು ಪೈಲಟ್ ಸೇರಿದಂತೆ ಒಟ್ಟು 18 ಪ್ರಯಾಣಿಕರು ದುರಂತ ಸಾವನ್ನಪ್ಪಿದ್ದಾರೆ. ಇದಕ್ಕೂ ಮೊದಲು ಈ ಹಿಂದೆ ವಿಮಾನ ನಿಲ್ದಾಣದಲ್ಲಿ ರಕ್ಷಣಾ ಕಾರ್ಯಗಳ ಉಸ್ತುವಾರಿ ಸಂಘಟಿಸಲು ಮುಖ್ಯಮಂತ್ರಿಯ ನಿರ್ದೇಶನದಂತೆ ಸ್ಥಳೀಯ ಆಡಳಿತ ಸಚಿವ ಎಸಿ ಮೊಯ್ದೀನ್ ಈಗಾಗಲೆ ಕರಿಪುರ ತಲುಪಿ ಮೊಕ್ಕಂ ಹೂಡಿ ಮೇಲು ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ.
ದುಬೈ-ಕ್ಯಾಲಿಕಟ್ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನವು ನಿಲ್ದಾಣದಲ್ಲಿ ಇಳಿಯುವಾಗ ರನ್ ವೇನಿಂದ ಜಾರಿ ನಂತರ 30 ಆಳದ ಕಣಿವೆಗೆ ಬಿದ್ದು ನಂತರ ಎರಡು ಹೋಳಾಗಿತ್ತು ಈ ಘಟನೆಯ ಬಗ್ಗೆ ರಾಷ್ಟ್ರಪತಿ ರಾಂ ನಾಥ್ ಕೋವಿಂದ್ , ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಮೊದಲಾದ ಗಣ್ಯರು ತೀವ್ರ ಆಘಾತ ವ್ಯಕ್ತಪಡಿಸಿ, ಗಾಯಾಳುಗಳು ಬೇಗ ಗುಣಮುಖರಾಗಲಿ ಎಂದು ಹಾರೈಸಿದ್ದಾರೆ.
ಯುವ ನಾಯಕ ರಾಹುಲ್ ಗಾಂಧಿ ಹಾಗೂ ಕೇರಳದ ಸಂಸದ, ಕೇಂದ್ರದ ಮಾಜಿ ಸಚಿವ ಶಶಿತರೂರ್ ಸಹ ತೀವ್ರ ದಿಗ್ಬ್ರಮೆ ವ್ಯಕ್ತಪಡಿಸಿದ್ದಾರೆ.

loading...