ಕೈ ಕುಟುಂಬ ರಾಜಕಾರಣಕ್ಕೆ ಬೇಸತ್ತು ಕಮಲ‌ ಹಿಡಿದ ವಾಸಿಂ

0
361


ಕನ್ನಡಮ್ಮ ಸುದ್ದಿ
ಬೆಳಗಾವಿ:12 ಜಿಲ್ಲೆಯಲ್ಲಿನ ಕಾಂಗ್ರೆಸ್ ಕುಟುಂಬ ರಾಜಕಾರಣಕ್ಕೆ ಬೇಸತ್ತು ಕಾಂಗ್ರೆಸ್ ನ ಹಿರಿಯ ಮುಖಂಡರಾದ ಇಬ್ರಾಹಿಂ ಮಸ್ತಿವಾಲೆ ಪುತ್ರ ವಾಸಿಂ ಮಸ್ತಿವಾಲೆ ಬುಧವಾರ ಬಿಜೆಪಿಗೆ ಸೇಪ೯ಡೆಗೊಂಡರು.
ಬೆಂಗಳೂರಿನ ಬಿಜೆಪಿ ಪ್ರಧಾನ ಕಚೇರಿಯಲ್ಲಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪನವರ ಸಮ್ಮುಖದಲ್ ವಾಸಿಂ‌ ಮಸ್ತಿವಾಲೆ ಬಿಜೆಪಿಗೆ ಸೇಪ೯ಡೆಗೊಂಡರು.
ರಾಜ್ಯದಲ್ಲಿರುವ ಕಾಂಗ್ರೆಸ್‌ ನ ದುರಾಡಳಿತ ಹಾಗೂ ಬೆಳಗಾವಿ ಜಿಲ್ಲೆಯ ಕುಟುಂಬ ರಾಜಕಾರಣಕ್ಕೆ ಬೇಸತ್ತು ವಾಸಿಂ ಬೆಂಗಳೂರಿನ ಬಿಜೆಪಿ‌ಕಚೇರಿಯಲ್ಲಿ ಬೃಹತ ಪ್ರಮಾಣದ ಕಾಯ೯ಕತ೯ರೊಂದಿಗೆ ಬಿಜೆಪಿಗೆ ಸೇಪ೯ಡೆಗೊಂಡರು. ವಾಸಿಂ ಅವರನ್ನು‌ ಬಿಜೆಪಿ‌ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪನವರು ಪಕ್ಷದ ಶಾಲನ್ನು ಹೊದಿಸಿ ಸ್ವಾಗತಿಸಿಕೊಂಡರು.
ಬೆಳಗಾವಿಯ ಕಾಂಗ್ರೆಸ್ ಪಕ್ಷದಲ್ಲಿ ಇಬ್ರಾಹಿಂ‌ ಮಸ್ಕೇವಾಲೆ ಅವರು ನಗರದ 20 ವಷ೯ದ ವರೆಗೆ ಕಾಂಗ್ರೆಸ್ ನ ನಗರಾಧ್ಯಕ್ಷರಾಗಿ ಕಾಂಗ್ರೆಸ್ ಪಕ್ಷವನ್ನು ಕಟ್ಟಿದ್ದರು. ಆದರೆ ನಗರ ಕಾಂಗ್ರೆಸ್ ಪಕ್ಷದಲ್ಲಿ ಕುಟುಂಬ ರಾಜಕಾರಣಕ್ಕೆ ಬೇಸತ್ತ ಇಬ್ರಾಹಿಂ ಅವರ ಪುತ್ರ ವಾಸಿಂ ಮಸ್ಕೀವಾಲೆ ಯಡಿಯೂರಪ್ಪನವರ ನೇತೃತ್ವದಲ್ಲಿ ಬಿಜೆಪಿಗೆ ಪಕ್ಷಕ್ಕೆ ಸೇರಿದರು.
ಉತ್ತರ ಕ್ಷೇತ್ರದ ಶಾಸಕ ಸೇಠ್ ಗೆ ಶಾಕ್: ಉತ್ತರ ಕ್ಷೇತ್ರದಲ್ಲಿ ಎರಡೂ ಚುನಾವಣೆ ಗೆದ್ದು ಬಿಗುತ್ತಿರುವ ಶಾಸಕ‌ ಸೇಠ್ ಗೆ ಬಿಸಿ ಮುಟ್ಟಿಸಲು ಮತಬ್ಯಾಂಕ್ ಸೆಳೆದುಕೊಳ್ಳಲು ಬಿಜೆಪಿ ಹೊಸ‌ ತಂತ್ರ ರೂಪಿಸುತ್ತಿರುವ ಬಿಜೆಪಿಗೆ ವಾಸಿಂ ಬಿಜೆಪಿ ಸೇಪ೯ಡೆಯಿಂದ ಹೊಸ‌ ಅಸ್ತ್ರ ಸಿಕ್ಕಂತಾಗಿದೆ.

loading...