ಕೊಡಗಿಗೆ ಪರಿಹಾರ ಸಾಮಗ್ರಿ ಜತೆ ವೈದ್ಯಕೀಯ ಸೇವೆ

0
10

ಕನ್ನಡಮ್ಮ ಸುದ್ದಿ-ರಾಣೇಬೆನ್ನೂರ: ನೆರೆ ಹಾವಳಿಯಿಂದ ಸಾಕಷ್ಟು ತತ್ತರಿಸುವ ಕೊಡಗಿನ ಜನತೆಗೆ ಅಗತ್ಯ ಪರಿಹಾರ ಸಾಮಗ್ರಿ ನೀಡುವ ಜತೆಗೆ ವೈದ್ಯಕೀಯ ಸೇವೆ ಒದಗಿಸಲು ಅಖಿಲ ಭಾರತೀಯ ವೈದ್ಯಕೀಯ ಸಂಘ(ಐಎಂಎ) ತಾಲೂಕ ಘಟಕ ನಿರ್ಧರಿಸಿದೆ ಎಂದು ಅಧ್ಯಕ್ಷೆ ಡಾ.ವಿದ್ಯಾ ವಾಸುದೇವಮೂರ್ತಿ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ವಿವಿಧ ಭಾಗಗಳಿಂದ ಈಗಾಗಲೇ ಕೊಡಗಿಗೆ ಆಹಾರ ಪದಾರ್ಥಗಳು ಹಾಗೂ ಬಟ್ಟೆಗಳು ಸೇರಿದಂತೆ ಸಾಕಷ್ಟು ನೆರವು ಹರಿದು ಬಂದಿದೆ. ಈ ನಿಟ್ಟಿನಲ್ಲಿ ಐಎಂಎ ರಾಜ್ಯ ಘಟಕದ ನಿರ್ದೇಶನದ ಮೇರೆಗೆ ಅಲ್ಲಿ ಅತ್ಯಗತ್ಯವಾಗಿರುವ ದೈನಂದಿನ ಬಳಕೆಯ ವಸ್ತುಗಳನ್ನು ಒಳಗೊಂಡ ಸುಮಾರು 1.50 ಲಕ್ಷ ರೂ. ಮೌಲ್ಯದ 100 ಕೀಟ್‍ಗಳನ್ನು ಗುರುವಾರ (ಆ.23) ಅಲ್ಲಿಗೆ ತೆಗೆದುಕೊಂಡು ಹೋಗಲಾಗುತ್ತಿದೆ. ಕಿಟ್‍ನಲ್ಲಿ ಒಳ ಉಡುಪುಗಳು, ಸೋಪುಗಳು, ಟೂಥ್‍ಪೇಸ್ಟ್‍ಗಳು, ಬ್ರಷ್‍ಗಳು, ಹೊದಿಕೆಗಳು, ಚಪ್ಪಲಿಗಳು ಮುಂತಾದ ಸಾಮಗ್ರಿಗಳಿವೆ. ಇದಲ್ಲದೆ ಅಲ್ಲಿನ ಜನರಿಗೆ ವೈದ್ಯಕೀಯ ಸೇವೆ ನೀಡಲು ಡಾ.ವಿದ್ಯಾ ವಾಸುದೇವಮೂರ್ತಿ, ಡಾ. ರವಿ ಕುಲಕರ್ಣಿ, ಡಾ. ವಿರುಪಾಕ್ಷಪ್ಪ, ಡಾ. ಮನೋಜ ಸಾವಕಾರ, ಡಾ. ವಾಸುದೇವಮೂರ್ತಿ, ಡಾ. ಅಭಿನಂದನ ಸಾವಕಾರ, ಡಾ. ನಾಗರಾಜ ದೊಡ್ಮನಿ ಇವರುಗಳನ್ನು ಒಳಗೊಂಡ ಏಳು ಜನ ವೈದ್ಯರ ತಂಡ ತೆರಳುತ್ತಿದೆ. ವೈದ್ಯರ ತಂಡವು ಎರಡ್ಮೂರು ದಿನಗಳ ಕಾಲ ಅಲ್ಲಿ ತಂಗಿದ್ದು ರೋಗಿಗಳ ಯೋಗಕ್ಷೇಮ ನೋಡಿಕೊಳ್ಳುವುದು. ನಂತರದ ದಿನಗಳಲ್ಲಿ ಬೇರೆ ಬೇರೆ ವೈದ್ಯರ ತಂಡಗಳು ಅಲ್ಲಿಗೆ ತೆರಳಿ ಸೇವೆ ಸಲ್ಲಿಸಲಿವೆ ಎಂದರು. ಡಾ.ಮನೋಜ ಸಾವಕಾರ, ಡಾ. ವಾಸುದೇವಮೂರ್ತಿ, ಡಾ. ರಾಜೇಶ್ವರಿ ಕದರಮಂಡಲಗಿ, ಡಾ. ಶಿವಪ್ರಕಾಶ ತಂಡಿ, ಡಾ. ಸುಷ್ಮಾ ಸಾವಕಾರ, ಡಾ. ಅನಿತಾ ಕೇಲಗಾರ, ಡಾ. ವಿದ್ಯಾ ಕೇಲಗಾರ, ಡಾ. ವೃಂದಾ ಕುಲಕರ್ಣಿ ಸುದ್ದಿಗೋಷ್ಠಿಯಲ್ಲಿ ಇದ್ದರು.

loading...