ಕೊಡಗು ಸಂತ್ರಸ್ತರಿಗಾಗಿ ದೇಣಿಗೆ ಸಂಗ್ರಹಕ್ಕೆ ಚಾಲನೆ

0
21

ಕನ್ನಡಮ್ಮ ಸುದ್ದಿ-ಯಲಬುರ್ಗಾ: ಕರ್ನಾಟಕ ರಾಜ್ಯದಲ್ಲಿಯ ಕೊಡಗು ಜಿಲ್ಲೆಯ ಹಲವೆಡೆ ಕೆರಳ ಮಾದರಿಯಲ್ಲಿ ಅಪಾರ ಮಳೆಗೆ ಮನೆಗಳು ಕೊಚ್ಚಿ ಸಾವಿರಾರು ಜನರ ಸಾವು ನೋವು ಇನ್ನೂ ಲಕ್ಷಾಂತರ ಜನ ನಿರಾಶ್ರಿತರಾಗಿ ಸಂಕಷ್ಟಕ್ಕೆ ತುತ್ತಾದ ಹಿನ್ನೆಲೆಯಲ್ಲಿ ಸೋಮವಾರ ಶ್ರೀಬಸವಲಿಂಗೇಶ್ವರ ಸ್ವಾಮೀಜಿ ನೇತೃತ್ವದಲ್ಲಿ ಪಟ್ಟಣದ ಶ್ರೀಮೊಗ್ಗಿಬಸವೇಶ್ವರ ದೇವಸ್ಥಾನದ ಹತ್ತಿರ ಸಂತ್ರಸ್ತರಿಗಾಗಿ ಪರಿಹಾರ ನಿಧಿ ಸಂಗ್ರಹ ಮಾಡಿದರು.
ಬಳಿಕ ಶ್ರೀಬಸವಲಿಂಗೇಶ್ವರ ಸ್ವಾಮೀಜಿಗಳು ಮಾತನಾಡಿ, ಸಂಕಷ್ಟದಲ್ಲಿರುವ ಜನರ ಸಹಾಯಕ್ಕೆ ಎಲ್ಲರೂ ಸಹಕಾರ ನೀಡುವ ಮೂಲಕ ತಮ್ಮ ಕೈಲಾದಷ್ಟು ಸಹಾಯ ಮಾಡಬೇಕು. ಅದರಂತೆ ಸರಕಾರವು ಕೂಡ ಕೊಡಗು ಜನತೆಗೆ ಹೆಚ್ಚಿನ ಸಹಾಯ ಹಸ್ತದ ಜೋತೆಗೆ ಪರಿಹಾರ ನೀಡುವ ಕ್ರಮಕೈಗೊಳ್ಳಬೇಕು ಎಂದರು. ಈ ಸಂದರ್ಭದಲ್ಲಿ ಆದೇಶ ಹುಬ್ಬಳ್ಳಿ ಸೇರಿದಂತೆ ಮಠದ ಭಕ್ತರು ಉಪಸ್ಥಿತರಿದ್ದರು.

loading...