ಕೊಡಗು ಸಂತ್ರಸ್ತರಿಗಾಗಿ ನಿಧಿ ಸಂಗ್ರಹ

0
20

ಮುಂಡರಗಿ: ಕೊಡಗು ಜಿಲ್ಲೆಯ ನೆರೆ ಸಂತ್ರಸ್ತರಿಗಾಗಿ ಪಟ್ಟಣದ ಜಗದ್ಗುರು ಆಂಗ್ಲ ಮಾದ್ಯಮ ಶಾಲಾ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಸೋಮವಾರ ನಿಧಿ ಸಂಗ್ರಹ ಪೆಟ್ಟಿಗೆ ಹಿಡಿದು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಪರಿಹಾರ ನಿಧಿ ಸಂಗ್ರಹಿಸಿದರು.
ನಾಡೋಜ ಡಾ.ಅನ್ನದಾನೀಶ್ವರ ಸ್ವಾಮೀಜಿ ಪರಿಹಾರ ನಿಧಿ ಸಂಗ್ರಹಕ್ಕೆ ಚಾಲನೆ ನೀಡಿದರು. ಶಾಲಾ ಮುಖ್ಯಶಿಕ್ಷಕಿ ನಾರ್ಶಿ, ಎಸ್.ಜಿ.ಅಬ್ಬಿಗೇರಿ, ಐ.ಎಫ್.ಹಿರೇಮಠ, ಸುಮತಿ, ಆರ್.ವಿ.ಕಡಿವಾಳರ, ಎ.ಜಯಕುಮಾರ, ಹಾಗೂ ಶಾಲಾ ಮಕ್ಕಳು ಇದ್ದರು. ಕರವೇಯಿಂದ ನಿಧಿ ಸಂಗ್ರಹ: ತಾಲೂಕು ಕರವೇ ಕಾರ್ಯಕರ್ತರು ಪಟ್ಟಣದಲ್ಲಿ ಪರಿಹಾರ ನಿಧಿ ಸಂಗ್ರಹಿಸಿದರು. ಕರವೇ ತಾಲೂಕು ಘಟಕದ ಅಧ್ಯಕ್ಷ ಶ್ರೀನಿವಾಸ ಕೊರ್ಲಗಟ್ಟಿ, ಕರವೇ ಜಿಲ್ಲಾ ಗೌರವಾಧ್ಯಕ್ಷ ಹಾಲಪ್ಪ ಅರಹುಣಸಿ, ಮೇರಿ ಪೂಜಾರ, ದಿಲ್‍ಶಾದ್ ಯಕ್ಲಾಸಪೂರ, ರತ್ನಾ ಪಾಟೀಲ, ಟಿಪ್ಪು ನದಾಫ್ ಇದ್ದರು.

loading...