ಕೊಡಗು ಸಂತ್ರಸ್ತರಿಗೆ ನಿಧಿ ಸಂಗ್ರಹ

0
19

ಕನ್ನಡಮ್ಮ ಸುದ್ದಿ ನರೇಗಲ್ಲ: ಕೊಡಗಿನಲ್ಲಿ ಸಾವಿರಾರು ಜನರು ಧಾರಾಕಾರ ಮಳೆಯಿಂದಾಗಿ ತೊಂದರೆಯಲ್ಲಿದ್ದಾರೆ. ಅವರಿಗೆ ಸಹಾಯ ಮಾಡುವ ದೃಷ್ಟಿಯಿಂದ ಗ್ರಾಮದ ಸಾರ್ವಜನಿಕರು, ವ್ಯಾಪಾರಸ್ಥರಿಂದ ನಿಧಿ ಸಂಗ್ರಹ ಮಾಡಲಾಗುತ್ತಿದೆ ಎಂದು ಕೆವಿಜಿ ಬ್ಯಾಂಕ್‌ ವ್ಯಾವಸ್ಥಾಪಕ ಎಂ.ಬಿ. ಕುಲಕರ್ಣಿ ಹೇಳಿದರು.
ಸಮೀಪದ ಹಾಲಕೆರೆ ಗ್ರಾಮದಲ್ಲಿ ಬುಧವಾರ ಅನ್ನದಾನೀಶ್ವರ ಸಂಸ್ಥಾನ ಮಠ, ಕೆವಿಜಿ ಬ್ಯಾಂಕ್‌, ಗ್ರಾಮ ಪಂಚಾಯಿತಿ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ, ಸರ್ಕಾರಿ ಪ್ರೌಢ ಶಾಲೆ, ಪ್ರಾಥಮಿಕ ಗಂಡು ಮತ್ತು ಹೆಣ್ಣು ಮಕ್ಕಳ ಶಾಲೆ, ಯುವಕ ಮಂಡಳಿ, ಮಹಿಳಾ ಸ್ವಸಹಾಯ ಸಂಘ ಇವರುಗಳ ಆಶ್ರಯದಲ್ಲಿ ಕೊಡಗು ಸಂತ್ರಸ್ತರಿಗೆ ಪರಿಹಾರ ನಿಧಿ ಸಂಗ್ರಹ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ರಾಜ್ಯದ ಕೊಡಗು ಜಿಲ್ಲೆ ನೆರೆ ಹಾವಳಿಗೆ ತುತ್ತಾಗಿದೆ. ಹತ್ತಾರು ವರ್ಷಗಳಿಂದ ಬದುಕು ಕಟ್ಟಿಕೊಂಡಿದ್ದ ಜನರು ಇಂದು ಈ ಪ್ರವಾಹದಿಂದಾಗಿ ಮನೆ, ಆಸ್ತಿ ಪಾಸ್ತಿ ಕಳೆದುಕೊಂಡು ಸರ್ಕಾರ ತೆರೆದಿರುವ ಕೇಂದ್ರಗಳಲ್ಲಿ ವಾಸಿಸುತ್ತಿದ್ದಾರೆ. ಸಂಕಷ್ಟದಲ್ಲಿ ಸಿಲುಕಿರುವ ಕೊಡಗು ಜನತೆಯ ಸಹಾಯಕ್ಕಾಗಿ ಪರಿಹಾರ ನಿಧಿಯನ್ನು ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಉದಾರ ಸಹಾಯ ಮಾಡುತ್ತಿದ್ದಾರೆ ಎಂದರು.
ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಅಂದಾನಗೌಡ ಪಾಟೀಲ, ಅಶೋಕ ಎಸ್‌. ಅಂಗಡಿ, ಶಿಕ್ಷಕ ಎಸ್‌.ಎಸ್‌. ರಾಂಪೂರ, ಗ್ರಾ.ಪಂ ಅಧ್ಯಕ್ಷೆ ರೇಣಮ್ಮ ಕುರಿ, ಉಪಾಧ್ಯಕ್ಷ ಬಸವರಾಜ ಬಾಂಗಳಿಗಿಡದ, ಮಲ್ಲಪ್ಪ ಕಳ್ಳಿಗುಡ್ಡ, ಗಿರೇಶಗೌಡ ಮುಲಕಿಪಾಟೀಲ, ಪೃಥ್ವಿರಾಜ, ಗೌಸು, ಅಂದಪ್ಪ ವಕ್ಕಳದ, ಶರಣಪ್ಪ ಹುನಗುಂದ, ಬಸಪ್ಪ ಮುಲಿಮನಿ, ವಿ.ಎಸ್‌. ನವಲಗುಂದ, ಎಸ್‌.ಎಂ. ತಳವಾರ, ಅಂದಾನಗೌಡ ಪಾಟೀಲ ಸೇರಿದಂತೆ ಶಾಲಾ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

loading...