ಕೊಡಗು ಸಂತ್ರಸ್ತರಿಗೆ ರಾಜ್ಯ ಸರ್ಕಾರದಿಂದ ಸಹಕಾರ: ಸಚಿವ ದೇಶಪಾಂಡೆ

0
17

ಕನ್ನಡಮ್ಮ ಸುದ್ದಿ-ಹುಬ್ಬಳ್ಳಿ: ಮಹಾಮಳೆಯಿಂದ ಕೋಡಿನಲ್ಲಿ ಭೀಕರ ಪ್ರವಾಹ ಪರಿಸ್ಥಿತಿ ಉಂಟಾದ ಹಿನ್ನೆಲೆ ರಾಜ್ಯ ಸರಕಾರ ಕೊಡಗಿನ ಜನರಿಗೆ ಎಲ್ಲ ರೀತಿಯ ಸಹಾಯ ಸಹಕಾರ ಮಾಡಲಿದೆ ಎಂದು ಕಂದಾಯ ಸಚಿವ ಆರ್ ವಿ ದೇಶಪಾಂಡೆ ಹೇಳಿದರು.
ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು ಕೊಡಗಿನ ಸಂತ್ರಸ್ತರಿಗೆ ಮಡಿಕೇರಿಯಲ್ಲಿನ ಸಂತ್ರಸ್ತರಿಗೆ ಸಮರ್ಪಕ ಪುನರ್ವಸತಿ ಕಲ್ಪಿಸಿಕೊಡಲಾಗುವುದು ಈಗಾಗಲೇ ರಕ್ಷಣಾ ಕಾರ್ಯ ಸಮರೋಪಾದಿಯಲ್ಲಿ ಸಾಗಿದೆ, ತೀವ್ರಗತಿಯಲ್ಲಿ ರಕ್ಷಣಾ ಕಾರ್ಯ ಇನ್ನೂ ಸಹ ಮುಂದುವರದಿದೆ ಮನೆ ತೋಟಗಳು ಕೊಚ್ಚಿ ಹೋಗಿ ಅಪಾರ ಪ್ರಮಾಣದ ನಷ್ಟವಾಗಿದ್ದು ನಷ್ಟದ ಸಂಪೂರ್ಣ ವರದಿ ತರಿಸಿ ಪರಿಹಾರ ಕಲ್ಪಿಸಲಾಗುವುದು ಎಂದು ತಿಳಿಸಿದರೂ.
ಪಶ್ಚಿಮಘಟ್ಟದ ಸಂರಕ್ಷಣೆ ಮಾಡಬೇಕಿದ್ದು ಇದಕ್ಕೆ ಎಲ್ಲರ ಸಹಾಯ ಸಹಕಾರ ಅಗತ್ಯವಾಗಿದ್ದು ಕೇವಲ ಅದು ಒಂದು ಪಕ್ಷ ದಿಂದ ಸಾಧ್ಯವಿಲ್ಲ ಎಲ್ಲಾ ಪಕ್ಷಗಳ ಸಹಕಾರ ಬೇಕು ಎಂದರು. ಪಶ್ಚಿಮ ಘಟ್ಟದ ರಕ್ಷಣೆಗೆ ಏನೇನು ಮಾಡಬೇಕೆಂದು ಕಮಿಟಿ ರಚಿಸಲಾಗುತ್ತಿದೆ ಎಂದು ಅವರು ತಿಳಿಸಿದರು .
ಉತ್ತರ ಕರ್ನಾಟಕದಲ್ಲಿ ಮಳೆ ಪ್ರಮಾಣ ಕಡಿಮೆಯಾಗಿದ್ದು ಬೆಳೆ ಒಣಗಿವೆ ಪರಿಹಾರ ಸೂಕ್ತ ಕ್ರಮ ಕೈಗೊಳ್ಳಲು ಎಲ್ಲ ಜಿಲ್ಲಾಡಳಿತಗಳಿಗು ಸೂಚಿಸಲಾಗಿದ್ದು ಜನ ಜಾನುವಾರಗಳಿಗೆ ಕುಡಿಯುವ ನೀರಿನ ಕೊರತೆಯಾಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದರು.

loading...