ಕನ್ನಡಮ್ಮ ಸುದ್ದಿ, ಧಾರವಾಡ: ಕೊಡಗಿನಲ್ಲಿ ನೆರೆ ಹಾವಳಿಯಿಂದ ಸಂತ್ರಸ್ತರಾದವರು ದೃತಿಗೆಡುವುದು ಬೇಡ ಇಡಿ ಕರ್ನಾಟಕವೇ ನಿಮ್ಮೊಂದಿಗಿದೆ ಧೈರ್ಯದಿಂದ ಪುನಃ ಜೀವನ ಕಟ್ಟುವ ಕಾರ್ಯವಾಗಲಿ ಎಂದು ಜೆಎಸ್ಎಸ್ ಕಾರ್ಯದರ್ಶಿ ಡಾ. ನ. ವಜ್ರಕುಮಾರ ಹೇಳಿದರು.
ಜೆಎಸ್ಎಸ್, ಸಿ.ಬಿ.ಎಸ್ಸಿ ಮಕ್ಕಳು ಕೊಡಮಾಡಿದ 500 ಕೆಜಿ ಅಕ್ಕಿ, ಬೆಡ್ಶಿಟ್, ಚಾದರ್, ಅರಿವೆಗಳನ್ನು ಮಾಜಿ ಮಂತ್ರಿ ವಿನಯ ಕುಲಕರ್ಣಿಯವರಿಗೆ ಹಸ್ತಾಂತರಿಸಿ ಮಾತನಾಡಿದರು.
ವಿನಯ ಕುಲಕರ್ಣಿ ಮಾತನಾಡಿ, ಮಕ್ಕಳಲ್ಲಿ ಈ ರೀತಿ ಸಂಸ್ಕøತಿ ಅತಿ ಅವಶ್ಯ ತಮ್ಮ ತಮ್ಮ ಮನೆಗಳಿಂದ ತಂದ ಸಾಮಗ್ರಿಗಳನ್ನು ಸಂಕಷ್ಟಕ್ಕೆ ಒಳಗಾದವರಿಗೆ ನೀಡುತ್ತಿರುವುದು ಶ್ಲಾಘನೀಯ ಎಂದರು. ಈ ಸಂದರ್ಭದಲ್ಲಿ ಶ್ರೀಮತಿ ಸಾಧನಾ, ಮಹಾವೀರ ಉಪಾದ್ಯೆ, ಸೂರಜ ಜೈನ್, ಜಿನೇಂದ್ರ ಕುಂದಗೋಳ ಉಪಸ್ಥಿತರಿದ್ದರು.
loading...