ಕೊರೋನಾ ಲೆಕ್ಕ ಕೊಡುವ ಬದಲು ಸರಕಾರ ಕಾಂಗ್ರೆಸ್ ಸಹಕಾರ ಕೊಡುತ್ತಿಲ್ಲ ಎನ್ನುತ್ತಾರೆ: ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ

0
33

ಬೆಳಗಾವಿ
ಕೊರೋನಾ ವಿಚಾರದಲ್ಲಿ ರಾಜ್ಯ ಸರಕಾರ ಖರ್ಚು ಮಾಡಿದ ವೆಚ್ಚವನ್ನು ಕಾಂಗ್ರೆಸ್ ಕೇಳುತ್ತಿದೆ ಆದರೆ ಸಚಿವ ಸಂಪುಟದ ಸಚಿವರು ವಿನಾಕಾರಣ ಕಾಂಗ್ರೆಸ್ ಸಹಕಾರ ಕೊಡುತ್ತಿಲ್ಲ ಎನ್ನುವ ವಿತಂಡವಾದ ಹಾಕುವಲ್ಲಿ ಕಾಲಕಳೆಯುತ್ತಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದರು.
ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು. ಕೊರೋನಾ ವಿಚಾರದಲ್ಲಿ ರಾಜ್ಯದಲ್ಲಿ ಖರ್ಚು ಮಾಡಿದ ವೆಚ್ಚವನ್ನು ಸರಕಾರ ಮರೆಮಾಚುತ್ತಿದೆ ಎನ್ನುವ ಅನುಮಾನ ಕಾಡುತ್ತಿದೆ. ಒಂದು ಬಾರಿ 4 ಸಾವಿರ ಕೋಟಿ ರು. ಎಂದು ಹೇಳುತ್ತಾರೆ ಅಧಿವೇಶನದಲ್ಲಿ ಈ ವಿಷಯವನ್ನು ಕಾಂಗ್ರೆಸ್ ಗಂಭೀರವಾಗಿ ಪರಿಗಣಿಸುತ್ತದೆ ಎಂದರು.
ಡಿಸಿಎA ಲಕ್ಷö್ಮಣ ಸವದಿ ಸೇರಿದಂತೆ ಬಹುತೇಕ ಸಚಿವರು ಬೆಂಗಳೂರಿನಲ್ಲಿಯೇ ಇದ್ದಾರೆ. ಅವರು ಬೆಳಗಾವಿ ಬಂದು ಸಭೆ ನಡೆಸಿಲ್ಲ. ಕೊರೋನಾ ವಿಚಾರದ ಕುರಿತು ಪ್ರತಿ ತಿಂಗಳು ಸಭೆ ನಡೆಸಬೇಕು. ಆದರೆ ಅವರೇ ಇಲ್ಲ ಅಂದ ಮೇಲೆ ಸಭೆ ನಡೆಸುವವರು ಯಾರು ಎಂದು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದರು.
ದೇಶ ಸೇರಿದಂತೆ ರಾಜ್ಯದಲ್ಲಿ ಕೋವಿಡ್ -19ನಿಂದ ಜನರು ಮೃತಪಡುತ್ತಿದ್ದಾರೆ. ಆದರೆ ಇದರಿಂದ ಮಾತ್ರ ಮೃತಪಡುತ್ತಿದ್ದಾರೆ ಎನ್ನುವುದು ಹೇಳಲು ಸಾಧ್ಯವಿಲ್ಲ. ಕೋವಿಡ್ -19 ಸಾಕಷ್ಟು ಪ್ರಮಾಣದಲ್ಲಿ ಹರಡುತ್ತಿದೆ. ಆದರೆ ಬೇರೆ ಬೇರೆ ರೋಗಗಳಿಂದಲೂ ಜನರು ಮೃತಪಡುತ್ತಿದ್ದಾರೆ. ಮೊದಲು ಶೇ.2 ರಿಂದ 3 ಪ್ರತಿಶತ ಇತ್ತು ಎಂದರು.
ಇತ್ತೀಚೆಗೆ ಬೆಳಗಾವಿ ಕಾಂಗ್ರೆಸ್ ಜಿಲ್ಲಾಡಳಿತಕ್ಕೆ ಒತ್ತಾಯ ಮಾಡಿತ್ತು. ಬೆಳಗಾವಿ ಲಾಕ್‌ಡೌನ್ ಮಾಡಿದರೆ ಕೋವಿಡ್-19 ನಿಯಂತ್ರಣ ಮಾಡುವುದು ಅಸಾಧ್ಯದ ಮಾತು. ಸಾರ್ವಜನಿಕರಿಗೆ ಮನವರಿಕೆ ಮಾಡಿಕೊಡುವ ನಿಟ್ಟಿನಲ್ಲಿ ಜಿಲ್ಲಾಡಳಿತ ಸಜ್ಜಾಗಬೇಕೆಂದು ಸಲಹೆ ನೀಡಿದ್ದೇವು ಎಂದು ಹೇಳಿದರು.
ರಾಜಕಾರಣಿಗಳು ಎಲ್ಲರೂ ಸಿಎಂಗೆ ಭೇಟಿಯಾಗುವುದು ಸಹಜ. ಅದು ರಾತ್ರಿಯಾದರೇನೂ ಹಗಲಿಯಾದರೇನು. ಕೆಲಸವಿದ್ದಾಗ ಎಲ್ಲರೂ ಭೇಟಿಯಾಗುತ್ತಾರೆ. ಸಿಎಂ ಕಡೆ ಕೆಲಸ ಇದ್ದರೆ ಭೇಟಿಯಾಗುತ್ತಾರೆ ಎಂದು ವಿಧಾನಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ
ಅಡ್ಜಸ್ಟಮೆಂಟ್ ರಾಜಕಾರಣ ಇಲ್ಲ. ಸಿಎಂಗೆ ಭೇಟಿಯಾದರೆ ಅಡ್ಜಸ್ಟಮೆಂಟ್ ರಾಜಕಾರಣ ಅಂದರೆ ಹೇಗೆ ನಾವು ಅಧಿಕಾರದಲ್ಲಿದ್ದಾಗ ಅವರು ಭೇಟಿಯಾಗಿರುತ್ತಾರೆ. ಇದು ಸ್ವಾಭಾವಿಕ ಪ್ರಕ್ರಿಯೆ.

loading...