ಕೌಟುಂಬಿಕ ಕಲಹ:ನೇಣಿಗೆ ಶರಣಾದ ಅಡುಗೆ ಭಟ್ಟ

0
174


ಕನ್ನಡಮ್ಮ ಸುದ್ದಿ-ಸಂಕೇಶ್ವರ :ಸಾಲ ಬಾಧೆ ಹಾಗೂ ಕೌಟುಂಬಿಕ ಕಲಹದಿಂದ ಬೇಸತ್ತು ವ್ಯಕ್ತಿ ಓರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣದಲ್ಲಿ ಜರುಗಿದೆ.
ನಗರದ ಶಬರಿ ಹೋಟೆಲ್ ನಲ್ಲಿ ಅಡುಗೆ ಭಟ್ಟನಾಗಿ ಕೆಲಸ ಮಾಡುತ್ತಿದ್ದ (೪೫) ವರುಷದ ಶೇಖರ ತೇಜಪ್ಪ ಶೆಟ್ಟಿ ಇಂದು ಮುಂಜಾನೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ,ಮೂಲತ ಕುಂದಾಪುರ ತಾಲೂಕಿನ ಹೊಸುರ ಗ್ರಾಮದವನು ಎಂದು ಹೇಳಲಾಗುತ್ತಿದೆ.
ವೈಯಕ್ತಿಕ ಸಾಲ ಹಾಗೂ ಕೌಟುಂಬಿಕ ಕಲಹದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.
ಈ ಕುರಿತು ಸಂಕೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

loading...