ಕ್ರಾಸ್ಕಂಟ್ರಿಓಟ

0
18

ಬೆಳಗಾವಿ,20-ಬೆಳಗಾವಿ ಜಿಲ್ಲಾ ಅಥ್ಲೆಟಿಕ್ ಅಸೋಶಿಯೇಷನ್ ಹಾಗೂ ವಿಮಲ ಫೌಂಡೆಶನ್ ಇವರ ಸಹಯೋಗದಲ್ಲಿ ರವಿವಾರ 47ನೇ ರಾಜ್ಯಮಟ್ಟದ ಕ್ರಾಸ್ಕಂಟ್ರಿ ಓಟದ ಪಂದ್ಯಾವಳಿ ಆಯೋಜಿಸಲಾಗಿತ್ತು. ಬೆಳಗಿನ ಜಾವ ಮಹಾತ್ಮ ಪುಲೆ ರಸ್ತೆಯಿಂದ ಆರಂಭಗೊಂಡ ಓಟ ಒಟ್ಟು 5 ವಿಭಾಗಗಳಲ್ಲಿ ನಡೆಸಲಾಯಿತು.ಮಹಾತ್ಮಾಪುಲೆ ರಸ್ತೆಯಿಂದ ಬಸವೇಶ್ವರ ವೃತ್ತ, ರೈಲ್ವೆ ಮೇಲ್ಸೇತುವೆ, ಕ್ಯಾಂಪ್, ಖಾನಾಪೂರ ರಸ್ತೆ , ಸಂಭಾಜಿ ವೃತ್ತ, ಕಾಲೇಜು ರಸ್ತೆ, ಚನ್ನಮ್ಮ ವೃತ್ತ, ಜಿಲ್ಲಾ ಆಸ್ಪತ್ರೆ ರಸ್ತೆ, ಕೃಷ್ಣಾ ದೇವರಾಯ ವೃತ್ತ, ಜಿಲ್ಲಾ ಕ್ರೀಡಾಂಗಣ ಮಾರ್ಗವಾಗಿ ಕ್ರಮಿಸಿ ಮತ್ತೆ ಅದೇ ಮಾರ್ಗವಾಗಿ ಮಹಾತ್ಮಾಪುಲೆ ರಸ್ತೆಗೆ ಬಂದು ಓಟ ಮುಕ್ತಾಯಗೊಂಡಿತು. ಓಟದಲ್ಲಿ ಸಾವಿರಕ್ಕೂ ಹೆಚ್ಚು ಕ್ರೀಡಾಪಟುಗಳು ಪಾಲ್ಗೊಂಡಿದ್ದರು. ಸಂಘಟಿಕರಾದ ಅಶೋಕ ಶಿಂತ್ರೆ, ಬಸವರಾಜ .ಎಚ್, ರಾಜಮೇಲ, ಸತೀಶ ಟೆಂಡೂಲ್ಕರ್ ಮೊದಲಾದವರು ಸ್ಪರ್ಧೆ ಯಶಸ್ವಿಗೆ ಶ್ರಮಿಸಿದರು. ವಿಜೇತರು ಫೆ.2ರಂದು ನಡೆಯಲಿರುವ ರಾಷ್ಟ್ತ್ರಮಟ್ಟದ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

loading...

LEAVE A REPLY

Please enter your comment!
Please enter your name here