ಕ್ರೀಡಾಪಟುಗಳಿಗೆ ಸ್ಪರ್ಧೆಯಲ್ಲಿ ಗೆಲ್ಲುವೆ ಆತ್ಮ ವಿಶ್ವಾಸವಿರಬೇಕು: ಮೇಟಿ

0
21

ಕನ್ನಡಮ್ಮ ಸುದ್ದಿ-ಮುಂಡರಗಿ: ಕ್ರೀಡಾಪಟುಗಳಿಗೆ ದೈಹಿಕ ಸಾಮರ್ಥ್ಯದ ಜೊತೆಗೆ ಪ್ರತಿಯೊಂದು ಸ್ಪರ್ಧೆಯಲ್ಲಿ ಗೆದ್ದೆ ಗೆಲ್ಲುವೆ ಎಂಬ ಆತ್ಮ ವಿಶ್ವಾಸವಿರಬೇಕು. ಅಂತಹ ಕ್ರೀಡಾಪಟುಗಳು ಕ್ರೀಡಾ ಕ್ಷೇತ್ರದಲ್ಲಿ ಖಂಡಿತವಾಗಿ ಏನನ್ನಾದರೂ ಸಾಧಿಸುತ್ತಾರೆ ಎಂದು ಜಿಲ್ಲಾ ಪಂಚಾಯಿತಿ ಸದಸ್ಯೆ ಶೋಭಾ ಮೇಟಿ ತಿಳಿಸಿದರು.
ತಾಲ್ಲೂಕಿನ ಬಿದರಳ್ಳಿ ಗ್ರಾಮದ ಸರಕಾರಿ ಪ್ರೌಢ ಶಾಲೆಯಲ್ಲಿ ಮಂಗಳವಾರ ಏರ್ಪಡಿಸಿದ್ದ ಬಾಗೇವಾಡಿ ಗ್ರುಪ್‌ ಮಟ್ಟದ ಕ್ರೀಡಾಕೂಟವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಆಟೋಟಗಳು ನಮ್ಮ ದೈಹಿಕ ಸಾಮರ್ಥ್ಯವನ್ನು ಹೆಚ್ಚಿಸುವುದರ ಜೊತೆಗೆ ನಮ್ಮ ಮನೋ ಬಲವನ್ನು ಹೆಚ್ಚಿಸುತ್ತವೆ.
ಎಸ್‌ಡಿಎಂಸಿ ಅಧ್ಯಕ್ಷ ಕೋಟೆಪ್ಪ ಕಿಲಾರಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ಕ್ರೀಡಾಕೂಟಕ್ಕೆ ವಿವಿಧ ರೀತಿಯ ನೆರವು ನೀಡಿದ ಗ್ರಾಮದ ಗಣ್ಯ ಮಾನ್ಯರನ್ನು ಸನ್ಮಾನಿಸಲಾಯಿತು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಸಂಗಪ್ಪ ಕರಿಗಾರ, ತಾಲ್ಲೂಕು ಪಂಚಾಯಿತಿ ಸದಸ್ಯೆ ಲಲಿತಾ ಎಲಿಗಾರ, ರೇಖಾ ಬಸೇಗೌಡರ, ಮಹಾಂತಯ್ಯ ಹೊಸಮಠ, ಮೈಲಾರೆಪ್ಪ ಕಿಲಾರಿ, ಮಹಾದೇವಕ್ಕ ತಳವಾರ, ಗೌರಮ್ಮ ಹ್ಯಾಡ್ಲ, ಹನುಮವ್ವ ಮಜ್ಜಿಗಿ, ಮಂಜುನಾಥ ರೊಡ್ಡಮಲ್ಲಪ್ಪನವರ, ಎಸ್‌.ಎನ್‌.ಅಂಗಡಿ, ಆರ್‌.ಎಲ್‌.ಬದಾಮಿ, ರವಿಗೌಡ ಪಾಟೀಲ, ಜೆ.ಎನ್‌.ಕಮ್ಮಾರ, ಆರ್‌.ವಿ.ಹಿರೇಮಠ, ಬಿ.ವಿ.ನಂದಗಾವಿ, ಲಕ್ಷ್ಮವ್ವ ಹರಿಜನ, ಎಸ್‌.ವಿ.ಚೌದರಿ ಮೊದಲಾದವರು ಹಾಜರಿದ್ದರು. ಮುಖ್ಯೋಪಾಧ್ಯಾಯ ಎಸ್‌.ವಿ.ಚೌದರಿ ಸರ್ವರನ್ನು ಸ್ವಾಗತಿಸಿದರು. ವಿ.ಎಫ್‌.ಮೆಣಸಿನಕಾಯಿ ಕಾರ್ಯಕ್ರಮ ನಿರೂಪಿಸಿದರು.

loading...