ಕ್ಷೇತ್ರದಲ್ಲಿ ಮೂವರು ಒಟ್ಟಾಗಿದ್ದೇವೆ ಓಟ ಹೊರಹೋಗಲು ಸಾಧ್ಯವಿಲ್ಲ: ಸಚಿವ ಪಾಟೀಲ

0
35

ಬಸವನಬಾಗೇವಾಡಿ: ಮಾಜಿ ಸಚಿವ ಎಸ್‌.ಕೆ. ಬೆಳ್ಳುಬ್ಬಿ, ಅಪ್ಪುಗೌಡ ಪಾಟೀಲ(ಮನಗೂಳಿ) ಸೇರಿ ಒಟ್ಟಾಗಿದ್ದೇವೆ ಉಪಚುನಾವಣೆಯಲ್ಲಿನ ಓಟು ಹೊರಹೋಗಲು ಸಾಧ್ಯವಿಲ್ಲ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಶಿವಾನಂದ ಪಾಟೀಲ ಅಭಿಪ್ರಾಯಪಟ್ಟರು.
ಸ್ಥಳೀಯ ಜಗದ್ಗುರು ಪಂಚಾರ್ಯ ಮಂಗಲ ಕಾರ್ಯಾಲಯದಲ್ಲಿ ಮಂಗಳವಾರ ಬಸವನಬಾಗೇವಾಡಿ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್‌- ಜೆಡಿಎಸ್‌ ಮೈತ್ರಿಕೂಟದ ಅಭ್ಯರ್ಥಿ ಸುನೀಲಗೌಡ ಪಾಟೀಲ ಅವರ ಪರ ಪ್ರಚಾರ ಸಭೆಯಲ್ಲಿ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು ಒಂದು ವೇಳ ಓಟು ಹೋದರು ಯಾರು ಎಂಬುದು ನನಗೆ ತಿಳಿಯುತ್ತದೆ, ಈ ಉಪಚುನಾವಣೆ ಜಿಲ್ಲೆಗೆ ಶಕ್ತಿ ತುಂಬುತ್ತದೆ, ಎಲ್ಲರೂ ಒಟ್ಟಾಗಿ ವಿಧಾನಪರಿಷತ್‌ ಅಭ್ಯರ್ಥಿ ಸುನೀಲಗೌಡ ಪಾಟೀಲ ಅವರನ್ನು ಅರಿಸಿ ತರಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಮಾಜಿ ಸಚಿವ ಎಸ್‌.ಕೆ.ಬೆಳ್ಳುಬ್ಬಿ, ಮಾಜಿ ನೀರಾವರಿ ಸಚಿವ ಶಾಸಕ ಎಂ.ಬಿ. ಪಾಟೀಲ, ರಾಜು ಆಲಗೂರ, ಕೆಪಿಸಿಸಿ ಉಪಾಧ್ಯಕ್ಷ ಡಿ.ಆರ್‌. ಪಾಟೀಲ, ಕಾಂತಾ ನಾಯಕ ಮಾತನಾಡಿದರು. ಪರಿಷತ್‌ ಚುನಾವಣೆ ಅಭ್ಯರ್ಥಿ ಸುನೀಲಗೌಡ ಪಾಟೀಲ ಮತಯಾಚಿಸಿದರು. ಜೆಡಿಎಸ್‌ ಮುಖಂಡ ಅಪ್ಪುಗೌಡ ಪಾಟೀಲ, ಮುಖಂಡ ಅಣ್ಣಾಸಾಹೇಬಗೌಡ ಪಾಟೀಲ, ತಾನಾಜಿ ನಾಗರಾಳ, ಕಲ್ಲು ದೇಸಾಯಿ, ಮಲ್ಲಿಕಾರ್ಜುನ ನಾಯಕ, ರಫೀಕ ಪಕಾಲಿ, ಚಂದ್ರಶೇಖರಗೌಡ ಪಾಟೀಲ, ರಾಜಶೇಖರ ಮೆಣಸಿನಕಾಯಿ, ಶೇಖರ ದಳವಾಯಿ, ರಾಹುಲ್‌ ಕುಬಕಡ್ಡಿ, ಹಾಸಿಂಪೀರ ವಾಲಿಕಾರ, ರುಕ್ಮೀಣಿ ರಾಠೋಡ, ಮಹಾದೇವಿ ಗೋಕಾಕ ಸೇರಿದಂತೆ ಇತರರು ಉಪಸ್ಥಿತರಿದ್ದರು. ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಈರಣ್ಣ ಪಟ್ಟಣಶೆಟ್ಟಿ ಸ್ವಾಗತಿಸಿದರು, ಪ್ರಧಾನ ಕಾರ್ಯದರ್ಶಿ ರವಿ ರಾಠೋಡ ನಿರೂಪಿಸಿದರು, ಶಂಕರಗೌಡ ಬಿರಾದಾರ ವಂದಿಸಿದರು.

loading...