ಖಾಯಂ ಶಿಕ್ಷಕರ ನೇಮಕಕ್ಕೆ ಆಗ್ರಹಿಸಿ ಶಾಲೆಗೆ ಬೀಗ ಜಡಿದು ಪ್ರತಿಭಟನೆ

0
28

ಶಿರಹಟ್ಟಿ : ಖಾಯಂ ಶಿಕ್ಷಕರು ಇಲ್ಲದಿರುವದನ್ನು ಖಂಡಿಸಿ ತಾಲೂಕಿನ ರಣತೂರ ಗ್ರಾಮದ ಉನ್ನತೀಕರಿಸಿದ ಸರಕಾರಿ ಹಿರಿಯ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯ ವಿದ್ಯಾರ್ಥಿಗಳು ಇಂದು{ಸೋಮವಾರ) ಶಾಲೆಗೆ ಬೀಗ ಜಡಿದು ಪ್ರತಿಭಟನೆ ನಡೆಸಿ ಶಾಲೆಗೆ ಖಾಯಂ ಶಿಕ್ಷಕರನ್ನು ನೇಮಿಸಿ ಇಲ್ಲಿದಿದ್ದರೆ ಟಿಸಿ ಕೋಟ್ಟು ಕಳುಹಿಸಿ ಎಂದು ಪಟ್ಟು ಹಿಡಿದ ಘಟನೆ ಜರುಗಿದೆ.

8 ನೇ ತರಗತಿಯಲ್ಲಿ 30, 9 ನೇ ತರಗತಿಯಲ್ಲಿ 35 ಹಾಗೂ ಹತ್ತನೇ ತರಗತಿಯಲ್ಲಿ 22 ವಿದ್ಯಾಥಿಗಳು ಓದುತ್ತಿದ್ದು 2014-15 ರಲ್ಲಿ ಪ್ರಾರಂಭವಾದ ಶಾಲೆಗೆ ಇವರೆಗೆಗೂ ಯಾವೊಬ್ಬ ಖಾಯಂ ಶಿಕ್ಷಕರನ್ನು ನೇಮಕ ಮಾಡಿಲ್ಲ ಕಳೆದ ವರ್ಷ ಶಿಕ್ಷರು ಇಲ್ಲದರಿಂದ ಎಸ್ ಎಸ್ ಎಲ್ ಸಿ ಪರಿಕ್ಷೆಗೆ ಕುಳಿತ 12 ಜನ ವಿದ್ಯಾರ್ಥಿಗಳಲ್ಲಿ ಕೇವಲ 3 ಜನ ವಿದ್ಯಾರ್ಥಿಗಳು ಉತ್ತಿರ್ಣರಾಗಿದ್ದಾರೆ ಹೀಗಾದರೇ ನಮ್ಮ ಕಲಿಕೆ ಹೇಗೆ ಎಂದು ರಾಧಾ ಮಾಗಡಿ, ರಾಜೇಶ್ವರಿ ಕಟಗಿ ಪತ್ರಕರ್ತರೆದುರು ತಮ್ಮ ಅಳಲು ತೋಡಿಕೊಂಡರಲ್ಲದೇ ಇಲ್ಲಿ ಬಿಸಿ ಉಟದ ವ್ಯವಸ್ಥೆ ಸರಿಯಿಲ್ಲಿ, ಕುಡಿಯುವ ನೀರಿನ ಸೌಕರ್ಯವಿಲ್ಲ, ಶೌಚಾಲಯದ ವ್ಯವಸ್ಥೆಯಿಲ್ಲ ಈ ಬಗ್ಗೆ ನಾವು ಯಾರ ಹತ್ತಿರ ಕೇಳುವುದು ಶಿಕ್ಷಕರೇ ಇಲ್ಲವೆಂದ ಮೇಲೆ ನಾವು ಓದುವುದು ಹೇಗೆ ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸುವುದು ಹೇಗೆ ಎಂದು ಅವಲತ್ತುಕೊಂಡರಲ್ಲದೆ ತ್ವರಿತವಾಗಿ ಶಿಕ್ಷಕರನ್ನು ನೆಮಕಗೊಳಿಸುವದರೊಂದಿಗೆ ಸಂಬಂಧಿಸಿದ ಶಿಕ್ಷಣಾಧಿಕಾರಿಗಳು ನಮ್ಮ ಶೈಕ್ಷಣಿಕ ಮಟ್ಟ ಸುಧಾರಣೆಗೆ ಕ್ರಮ ಜರುಗಿಸಬೇಕು ಇಲ್ಲದಿದ್ದರೆ ನಮ್ಮ ಟಿಸಿಯನ್ನು ಕಿತ್ತು ಕೊಟ್ಟರೇ ನಾವು ಬೇರೆ ಶಾಲೆಯಲ್ಲಿ ಕಲಿಯುತ್ತೆವೆ ಎಂದು ಎಚ್ಚರಿಕೆ ನೀಡಿದರು.
ಶಿಕ್ಷಕರನ್ನು ನೇಮಿಸಿ : ತ್ವರಿತವಾಗಿ ಶಾಲೆಗೆ ಖಾಯಂ ಶಿಕ್ಷಕರನ್ನು ನೇಮಿಸಬೇಕು ಇಲ್ಲದಿದ್ದರೇ ಗದಗ ಜಿಲ್ಲಾಧಿಕಾರಿಗಳ ಕಚೇರಿಗೆ ವಿದ್ಯಾಥಿಗಳೊಂದಿಗೆ ತೆರಳಿ ಜಿಲ್ಲಾಧಿಕಾರಿಗಳ ಗಮನ ಸೆಳೆಯುವದಾಗಿ ಎಸ್‍ಡಿಎಂಸಿ ಅಧ್ಯಕ್ಷ ಮಹಾಂತೇಶ ಸ್ವಾಗಿಹಾಳ, ಗ್ರಾಪಂ ಸದಸ್ಯ ಅರುಣ ಕಟಗಿ, ಪಲಕರಾದ ಈರಣ್ಣ ಕಾಯಿಯಿಶೆಟ್ಟರ,ಶಿವು ಪ್ಯಾಟಿ, ಗುರಮ್ಮ ದಾನಪ್ಪನವರ, ಮಹದೇವಕ್ಕ ಮಾಗಡಿ, ಫಕ್ಕಿರಮ್ಮ ಪ್ಯಾಟಿ, ಮತ್ತಿತರರು ಎಚ್ಚರಿಕೆ ನೀಡಿದ್ದಾರೆ.

loading...