ಖೊಟ್ಟಿ ಜಾತಿ ಪ್ರಮಾಣ ಪತ್ರ ಗ್ರಾಪಂ ಸದಸ್ಯತ್ವ ರದ್ದು ಪಡಿಸಲು ಆಗ್ರಹ

0
19

ಕನ್ನಡಮ್ಮ ಸುದ್ದಿ-ಶಿಗ್ಗಾವಿ: ಖೊಟ್ಟಿ ಜಾತಿ ಪ್ರಮಾಣ ಪತ್ರ ಪಡೆದು ಆಯ್ಕೆ ಹೊಂದಿ ತಾಲೂಕಿನ ಹನುಮರಹಳ್ಳಿ ಪಂಚಾಯತಿಯ ಅದ್ಯಕ್ಷರಾದ ಲಕ್ಷ್ಮಿ ಮಾರುತಿ ಕಬ್ಬೆರ ಅವರ ಸದಸ್ಯತ್ವ ರದ್ದು ಪಡಿಸಬೇಕು ಎಂದು ಅಖಿಲ ಕರ್ನಾಟಕ ಆದಿ ಜಾಂಭವ ಸಂಘದ ತಾಲೂಕ ಅಧ್ಯಕ್ಷ ಹಾಗೂ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಶಿದ್ದಪ್ಪ.ಪಿ. ಹರಿಜನ ಅವರ ನೇತೃತ್ವದಲ್ಲಿ ತಹಶಿಲ್ದಾರ ಮೂಲಕ ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ಜಡ್.ಜಮೀರಹಮ್ಮದಖಾನ ಅವರಿಗೆ ಮನವಿ ಅರ್ಪಿಸಿದರು.
ಮನವಿಯನ್ನು ತಹಶಿಲ್ದಾರ ಮೂಲಕ ಮಾನ್ಯ ರಾಜ್ಯಪಾಲರು ಹಾಗೂ ಚುನಾವಣಾ ಆಯೋಗ ಬೆಂಗಳೂರ, ಪಂಚಾಯತ ರಾಜ ಮತ್ತು ಗ್ರಾಮಿಣಾಭಿವೃದ್ದಿ ಇಲಾಖೆ ಗಳಿಗೆ ತಾಲೂಕಿನ ಹನುಮರಹಳ್ಳಿ ಗ್ರಾಮ ಪಂಚಾಯತಿಗೆ ಲಕ್ಷ್ಮಿ ಮಾರುತಿ ಕಬ್ಬೆರ ಇವರು ಪರಿಶಿಷ್ಟ ಜಾತಿ ಪ್ರಮಾಣ ಪತ್ರ ಪಡೆದುಕೊಂಡು ಗ್ರಾಮ ಪಂಚಾಯತಿಗೆ ಆಯ್ಕೆಯಾಗಿ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗಿ ಸರ್ಕಾರದ ಸೌಲಭ್ಯಗಳನ್ನು ಪಡೆದಿರುತ್ತಾರೆ. ಇವರ ಜಾತಿ ಪ್ರಮಾಣ ಪತ್ರ ಖೊಟ್ಟಿ ಇದ್ದು ಸಾಬಿತು ಆಗಿ ರದ್ದು ಪಡೆಸಿದ್ದಾರೆ. ಸದಸ್ಯತ್ವ ರದ್ದತಿಗಾಗಿ ಸಿ.ಎಸ್.ಹಾವೆರಿ ಇಲಾಖೆಯವರು ಪಮಚಾಯತ ರಾಜ್ಯ ಇಲಾಖೆಯವರಿಗೆ ಶಿಪಾರಸ್ಸು ಮಾಡಿದ್ದಾರೆ. ಆದರೆ ಈವರೆಗೆ ಆಸದಸ್ಯತ್ವ ರದ್ದು ಪಡಿಸಿಲ್ಲವಾದ್ದರಿಂದ. ಈ ಇಲಾಖೆಯವರನ್ನು ಪರಿಶಿಲಿಸಿ ಕ್ರಮ ಜರುಗಿಸಬೇಕು. ಈ ಖೊಟ್ಟಿ ಪ್ರಮಾಣ ಪತ್ರದಿಂದ ಪರಿಶಿಷ್ಟ ಜಾತಿಯವರಿಗೆ ಗೋರ ಅನ್ಯಾಯವಾಗಿದೆ. ಪರಿಶಿಷ್ಟ ಜಾತಿಯ ಹಿತದೃಷ್ಟಿಯಿಂದ ಅವರ ಸದಸ್ಯತ್ವ ರದ್ದು ಪಡಿಸಬೇಕೆಂದು ಮನವಿಯಲ್ಲ ಆಗ್ರಹಿಸಿದ್ದಾರೆ. ದಲಿತ ಮುಖಂಡರು ಹಾಗೂ ಅಖಿಲ ಕರ್ನಾಟಕ ಆದಿ ಜಾಂಭವ ಸಂಘ, ಕರ್ನಾಟಕ ದಲಿತ ಸಂಘರ್ಷ ಸಮಿತಿಗಳ ಪದಾಧಿಕಾರಿಗಳಾದ ಉಡಚಪ್ಪ ಮಾಳಗಿ, ಬಸವರಾಜ ಕಟ್ಟಿಮನಿ, ಭೀಮಣ್ಣ ಹೊಟ್ಟೂರ, ಮಂಜುನಾಥ ಮರೋಳ, ಸಮಜಯಗಾಂಧಿ ಸಮಜಿವಣ್ನವರ, ನಿಂಗಪ್ಪ ಕಡೂರ, ಬಸಪ್ಪ ಮುಗಳಿ, ಶಿವಾನಂದ ಮಾದರ, ಬಸವರಾಜ ದೊಡ್ಡಮನಿ, ಸುರೇಶ ಹರಿಜನ, ಬಸವರಾಜ ಹಮಚಿನಮನಿ, ಪ್ರವಿಣ ಕಟ್ಟಿಮನಿ, ಧರ್ಮು ಶಿಶುವಿನಹಾಳ, ಕರೆಪ್ಪ ಹರಿಜನ, ದುರಗೇಶ ಶಿಗ್ಗಾಂವ, ವೆಂಕಟೇಶ ವಡ್ಡರ ಇದ್ದರು.

loading...