ಖ್ಯಾತ ಬ್ರಿಟೀಷ್ ಲೇಖಕ, ನೊಬೆಲ್ ಪ್ರಶಸ್ತಿ ವಿಜೇತ ವಿಎಸ್ ನೈಪಾಲ್ ಇನ್ನಿಲ್ಲ

0
25

ಲಂಡನ್: ಖ್ಯಾತ ಬ್ರಿಟೀಷ್ ಲೇಖಕ ಹಾಗೂ ನೊಬೆಲ್ ಪ್ರಶಸ್ತಿ ವಿಜೇತ ವಿಎಸ್ ನೈಪಾಲ್ ಅವರು ವಿಧಿವಶರಾಗಿದ್ದು. ಅವರಿಗೆ 85 ವರ್ಷ ವಯಸ್ಸಾಗಿತ್ತು.
ನೈಪಾಲ್ ಅವರ ನಿಧನದ ಸಮಾಚಾರವನ್ನು ಅವರ ಕುಟುಂಬಸ್ಥರು ಮಾಧ್ಯಮಗಳಿಗೆ ತಿಳಿಸಿದ್ದು, ವಯೋ ಸಹಜ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ನೈಪಾಲ್ ಅವರು ನಿಧನರಾಗಿದ್ದಾರೆ ಎಂದು ತಿಳಿದಿಬಂದಿದೆ.
1932ರಲ್ಲಿ ಟ್ರಿನಿಡ್ಯಾಡ್ ನಲ್ಲಿ ಜನಿಸಿದ್ದ ನೈಪಾಲ್ ಅವರು, ಸುಮಾರು 30ಕ್ಕೂ ಅಧಿಕ ಪುಸ್ತಕಗಳನ್ನು ಬರೆದಿದ್ದಾರೆ. ಅವರ ಪುಸ್ತಕಗಳಲ್ಲಿ ಎ ಬೆಂಡ್ ಇನ್ ದಿ ರಿವರ್, ಎ ಹೌಸ್ ಆಫ್ ಮಿ.ಬಿಸ್ವಾಸ್ ಪುಸ್ತಕಗಳು ಅವರಿಗೆ ಹೆಚ್ಚು ಖ್ಯಾತಿ ತಂದುಕೊಟ್ಟಿದ್ದವು.
ಸಾಹಿತ್ಯ ಕ್ಷೇತ್ರಕ್ಕೆ ಅವರು ಸಲ್ಲಿಸಿದ್ದ ಸೇವೆಗಾಗಿ ಅವರಿಗೆ ಹಲವು ಪ್ರಶಸ್ತಿಗಳು ಹುಡುಕಿಕೊಂಡು ಬಂದಿದ್ದವು. ಈ ಪೈಕಿ 1971ರಲ್ಲಿ ಬೂಕರ್ ಪ್ರಶಸ್ತಿ ಒಲಿದಿತ್ತು. 1990ರಲ್ಲಿ ಬ್ರಿಟನ್ ರಾಣಿ ಕ್ವೀನ್ ಎಲಿಜೆಬೆತ್ ರಿಂದ ಗೌರವಕ್ಕೆ ಪಾತ್ರರಾಗಿದ್ದರು. 2001ರಲ್ಲಿ ಅವರಿಗೆ ನೊಬೆಲ್ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.

loading...