ಗಂಡು ಮಗುವಿನ ವ್ಯಾಮೋಹದಿಂದ ಜನಸಂಖ್ಯೆ ಹೆಚ್ಚಳ: ಜಯಶ್ರೀ

0
25

ಕನ್ನಡಮ್ಮ ಸುದ್ದಿ-ಯಲಬುರ್ಗಾ: ದೇಶದಲ್ಲಿ ಆರ್ಥಿಕವಾಗಿ ಹಾಗೂ ಶೈಕ್ಷಣಿಕವಾಗಿ ಹಿಂದುಳಿದಿರುವವರಿಗೆ ಜನಸಂಖ್ಯೆ ಹೆಚ್ಚಳದಿಂದ ಆಗುವ ದುಷ್ಪರಿಣಾಮಗಳ ಅರಿವಿಲ್ಲ. ಈ ಕಾರಣದಿಂದಲೇ ಜನಸಂಖ್ಯೆ ಹೆಚ್ಚಳವಾಗುತ್ತಿದೆ. ಜನಸಂಖ್ಯೆ ಹೆಚ್ಚಳದಿಂದ ಆಹಾರ, ನಿರುದ್ಯೋಗ ಸಮಸ್ಯೆ ಉಂಟಾಗುತ್ತಿದೆ ಎಂದು ಪಪಂ ಅಧ್ಯಕ್ಷೆ ಜಯಶ್ರೀ ಅರಕೇರಿ ಹೇಳಿದರು.
ಪಟ್ಟಣದಲ್ಲಿ ಸೋಮವಾರ ಆರೋಗ್ಯ ಇಲಾಖೆ, ಪಪಂ, ತಾಲೂಕು ಆಡಳಿತ ಸಯುಂಕ್ತಾಶ್ರಯದಲ್ಲಿ ಹಮ್ಮಿಕೊಂಡ ವಿಶ್ವ ಜನಸಂಖ್ಯಾ ದಿನಾಚರಣೆ ಮತ್ತು ಜನಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಜನರಿಗೆ ಸಿಗುವ ಮೂಲ ಸೌಕರ್ಯಗಳಲ್ಲಿ ಕೊರತೆ ಉಂಟಾಗಿ ಜೀವನ ಮಟ್ಟ ಕುಸಿಯುತ್ತದೆ. ಸಮಾಜದಲ್ಲಿ ಗಂಡು ಮಗುವಿನ ವ್ಯಾಮೋಹ ಹೆಚ್ಚಿದ್ದು ಪೋಷಕರು ಗಂಡು ಮಗುಬೇಕೆಂಬ ಬಯಕೆಯಿಂದ ಹೆಚ್ಚು ಮಕ್ಕಳನ್ನು ಪಡೆಯುತ್ತಿದ್ದಾರೆ ಇದರಿಂದ ಜನಸಂಖ್ಯೆ ಹೆಚ್ಚಳವಾಗುತ್ತಿದೆ ಎಂದರು.
ತಾಲೂಕು ಆರೋಗ್ಯ ಅಧಿಕಾರಿ ಡಾ.ಮಲ್ಲಿಕಾರ್ಜುನ ಮೇಟಿ ಮಾತನಾಡಿ ದೇಶ ಅಭಿವೃದ್ದಿ ಹೊಂದಲು ಜನಸಂಖ್ಯೆ ನಿಯಂತ್ರಿಸಲೆಬೇಕು. ಜಾಗತಿಕವಾಗಿ ಚೀನಾವು ಜನಸಂಖ್ಯೆಯಲ್ಲಿ ಮೊದಲ ಸ್ಥಾನ ಮತ್ತು ಭಾರತವು ಎರಡನೇ ಸ್ಥಾನದಲ್ಲಿದೆ. ಇತ್ತೀಚಿನ ವರ್ಷಗಳಲ್ಲಿ ಭಾರತವು ಜನಸಂಖ್ಯೆಯಲ್ಲಿ ಚೀನಾವನ್ನು ಹಿಮ್ಮಟ್ಟಿಸುವತ್ತ ದಾಪುಗಾಲಿಡುತ್ತಿದೆ ಎಂದು ವಿವರಿಸಿದರು. ತಾಪಂ ಅಧ್ಯಕ್ಷೆ ಲಕ್ಷ್ಮಿ ಗೌಡರ್‌, ಜಿಪಂ ಸದಸ್ಯರಾದ ಗಿರಿಜಾ ಸಂಗಟಿ, ಗಂಗಮ್ಮ ಗುಳಗಣ್ಣನವರ, ಹೊಳಿಯಮ್ಮ ಪಾಟೀಲ, ತಹಸೀಲ್ದಾರ್‌ ರಮೇಶ ಅಳವಂಡಿಕರ್‌, ಪಪಂ ಮುಖ್ಯಾಧಿಕಾರಿ ನಾಗೇಶ, ವೈದ್ಯಾಧಿಕಾರಿ ಡಾ.ಪ್ರಕಾಶ ವಿ, ಉಪನ್ಯಾಸಕ ಸೋಮನಗೌಡ ಮಾಲಿಪಾಟೀಲ, ಬಸವರಾಜ ಬಿಲ್ಲರ್‌, ಆರೋಗ್ಯ ಸಹಾಯಕ ಪಿ.ವೈ.ಮ್ಯಾಗೇರಿ, ಎಸ್‌.ಡಿ.ಬೆನ್ನೂರು, ಶಿವರಾಜ, ಅಂಗನವಾಡಿ ಮೇಲ್ವಿಚಾರಕರು, ಅಶಾ ಕಾರ್ಯಕರ್ತೆಯರು ಇದ್ದರು.

loading...