ಗಗನಕ್ಕೆÃರಿದ ಹಣ್ಣುಗಳ ರಾಜಾ ಮಾವು

0
2

ಗಗನಕ್ಕೆÃರಿದ ಹಣ್ಣುಗಳ ರಾಜಾ ಮಾವು,
ಕೇವಲ ೧೨ ಮಾವುಗಳಿಗೆ ೧೩೦೦ ರಿಂದ ೧೪೦೦ ರೂ. | ಖರೀದಿಯಲ್ಲಿ ಗ್ರಾಹಕರು ಹಿಂದೆಟ್ಟು


ಅಶೋಕ ಬಾ.ಮಗದುಮ್ಮ
ಬೆಳಗಾವಿ:
ಮಾವಿನ ರುಚಿಯನ್ನು ಸವೇಯಲು ತುದಿಗಾಲಿನಲ್ಲಿ ನಿಂತ ಗ್ರಾಹಕರಿಗೆ ಹಾಗೂ ಜನಸಾಮಾನ್ಯರಿಗೆ ಶಾಕ್ ಕಾದಿದೆ. ಹಣ್ಣುಗಳ ರಾಜಾ ಮಾವಿನ ಬೆಲೆ ವಿಪರೀತವಾಗಿ ಗಗನಕ್ಕೆÃರಿದರೆ, ಅನ್ನದಾತನಿಗೆ ಸ್ಪಲ್ಪ ಮಟ್ಟಗೆ ಖುಷಿ ತಂದಿರುವ ವಿಷಯ.
ಕೇವಲ ೧೨ ಮಾವುಗಳಿಗೆ ೧೩೦೦ ರೂ. ದರ ಏರಿಕೆಕಂಡಿದರಿಂದ ಖರೀದಿ ಮಾಡಲು ಗ್ರಾಹಕರು ಕೊಂಚ ಹಿಂದೆಟ್ಟು ಹಾಕುತ್ತಿದ್ದಾರೆ.
ಬೆಲೆಏರಿಕೆಕಂಡರೆ ೪೫೦ ರೂ. ವರೆಗೂ ಕೊನೆಯಾಗಬಹುದು. ಆದರೆ, ಈ ವರ್ಷ ಒಂದು ಡಜನ್ ಮಾವಿಗೆ ೧೨೦೦-೧೩೦೦ ರೂ. ಏರಿಕೆಯಾಗಿದೆ, ಗ್ರಾಹಕರು ಅನಿರ್ವಾಯತ್ತೆÃ ಮಾವಿಗಳ ರುಚಿ ಸವೇಯಲು ಖರೀದಿ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಮಾವುಗಳ ಪ್ರಿÃಯರಿಗೆ ಬೆಲೆ ಏರಿಕೆಯಿಂದ ಸ್ಪಲ್ಪ ಆತಂಕವನ್ನುಂಟುಮಾಡಿದ್ದು ನಿಜ.
ಮಾವಿಗೂ ಬಂತೂ ಬರ: ಮಾವುಗಳ ಸೀಜನ್‌ಗಾಗಿ ಕಾಯ್ದು ಕುಳಿತ ಜನರಿಗೆ ಬೆಲೆ ಏರಿಕೆಯಿಂದ ಸ್ಪಲ್ಪ ಮುಜುಗರವಾಗಿದೆ. ದಶಕದಲ್ಲಿ ಇದೇ ಮೊದಲ ಬಾರಿಗೆ ಮಾವುಗಳ ಬೆಲೆಯಲ್ಲಿ ಇಷ್ಟೊÃಂದು ಬದಲಾವಣೆ ಪಡೆದುಕೊಂಡಿದೆ. ಬರಗಾಲ ಸಮಯದಲ್ಲೂ ಗಡಿನಾಡಿನ ಭಾಗದ ಬೆಳಗಾವಿಗೆ ವಿಪರೀತವಾಗಿ ಮಾವುಗಳನ್ನು ಹೊರರಾಜ್ಯದಿಂದ ಆಮದು ಮಾಡಿಕೊಳ್ಳಲಾಗುತ್ತಿತು. ಆದರೆ ಈ ಭಾರಿ ಮಹಾರಾಷ್ಟçದಲ್ಲಿಯೇ ಮಾವುಗಳ ಬೆಲೆ ಗಗನಕ್ಕೆÃರಿದೆ ಎನ್ನಲಾಗುತ್ತಿದೆ.
ಉತ್ತರ-ಕರ್ನಾಟದ ಭಾಗಗಳಲ್ಲಿ ವಿಪರೀತವಾಗಿ ಮಳೆಯಾದರಿಂದ ಮಾವಿನ ಬರ ಕಾಣುತ್ತಿರಲ್ಲ. ವರ್ಷದಿಂದ ವರ್ಷಕ್ಕೆ ಬಂಗಾರದ ಮಾವಿನ ಬೆಳೆ ತೆಗೆದು ಕೈತುಂಬ ಹಣವನ್ನು ಬಾಚಿಕೊಳ್ಳುತ್ತಿದ್ದ ಅನ್ನದಾನಿಗೆ, ಈ ವರ್ಷ ಮಾವಿನ ಗಿಡಗಳು ಕೈಕೊಟ್ಟಿದರಿಂದ ರೈತನಿಗೆ ಬರಸಿಡಿಲು ಬಡಿದಂತಾಗಿದೆ. ಅಧಿಕ ಮಳೆಯಾದರೂ ಪರವಾಗಿಲ್ಲ ಜೀವನ ಸಾಗುವಷ್ಟೂ ಮಾವು ಕೈಹಿಡಿಯುತ್ತಿತ್ತು. ಆದರೆ, ಈ ಸಲ ಜೀವನ ಸಾಗಿಸುವುದು ಕಷ್ಟಕರವಾಗಿದೆ. ಹಾಗೇ ಹೊರರಾಜ್ಯದ ರೈತರಿಗೂ ಕೂಡ ಮಾವಿನ ಬೆಳೆ ಕೈಕೊಟ್ಟಿದೆ ಸ್ಪಷ್ಪವಾಗುತ್ತಿದೆ.


ಕೈಕೊಟ್ಟ ಬಂಗಾರದ ಬೆಳೆ: ಕರಾವಳಿ, ಮಹಾರಾಷ್ಟçದ ರತ್ನಗಿರಿ, ಕೊಲ್ಕತ್ತಾ ಹಾಗೂ ಧಾರವಾಡ, ಕಾರವಾರ, ಕೊಪ್ಪಳ ಜಿಲ್ಲೆಗಳಿಂದ ಆಗಮಿಸುತ್ತಿರುವ ಮಾವು ಸಂಪೂರ್ಣವಾಗಿ ಸ್ಥಗಿತವಾಗಿದು, ಜಿಲ್ಲೆಯಲ್ಲಿ ಸುಮಾರು ಶೇ ೩೦ ರಷ್ಟು ಮಾವು ಬೆಳೆಯಾಗುತ್ತಿತ್ತು. ಅಂತರರಾಜ್ಯದಿಂದ ಶೇ ೭೦ ರಷ್ಟು ಹಣ್ಣುಗಳು ಆಮದು ಮಾಡಿಕೊಳ್ಳಲಾಗುತ್ತಿತ್ತು. ಆದರೆ, ಮಳೆರಾಯ ಕೈಕೊಟ್ಟಿದರಿಂದ ಮಲೆನಾಡಿದ ಪ್ರದೇಶದಲ್ಲಿ, ಚಳಿಗಾಲದ ಮಂಜಿನ ಹೊಡೆತಕ್ಕೆ ಮಾವಿಗಳ ಹೂ-ಗಳು ಉದರಿ ಸ್ಪಲ್ಪ ಮಾವಿನ ಬೆಳೆಗಳು ಇಳಿಮುಖ ಕಂಡಿವೆ ಎನ್ನಲಾಗಿದೆ.
೨೦೧೪ ರಿಂದ ೨೦೧೮ ವರೆಗೆ ಮಾವಿನ ಬೆಲೆ ಪಾತಳಕ್ಕೆ ಕುಸಿದರೂ ರೈತರನನ್ನು ಮಾವು ಕೈಹಿಡಿದಿತ್ತು. ಆದರೆ, ಈ ವರ್ಷ ಬೆಳೆಯು ಇಲ್ಲ, ಬಂದಂತಹ ಮಾವಿನ ಹಣ್ಣುಗಳನ್ನು ಖರೀದಿ ಮಾಡಲು ಯಾರು ಮುಂದಾಗುತ್ತಿಲ್ಲ ಎಂಬುವುದೇ ರೈತನ ಗೊಳ್ಳು.
ಬೆಲೆ ಇಳಿಮುಖ ಕಾಣಲು ೪೦ ದಿನಗಳು ಬೇಕು: ಸೀಜನ್ ಮುನ್ನವೆ ವಿಪರೀತ ಏರಿಕೆಕಂಡ ಮಾವು, ಬೆಲೆ ಇಳಿಮುಖ ಕಾಣಲು ೪೦ ದಿನಗಳ ಕಾಲವಕಾಶ ಬೇಕು ಎನ್ನುತ್ತಾರೆ. ವರ್ಷದಿಂದ ವರ್ಷಕ್ಕೆ ಮಾವು ತನ್ನ ಬೆಲೆಯನ್ನು ಹೇಚ್ಚಿಕೊಳ್ಳುತ್ತಿದೆ ಇದರಿಂದ ಗ್ರಾಹಕರಿಗೆ ಬೇಬಿಗೆ ಕತ್ತರಿ ಬಿಳುತ್ತಿದೆ.
==ಬಾಕ್ಸ್==
ವ್ಯಾಪಾಸ್ಥರು, ೧೨ ಮಾವುಗಳ ಖರೀದಿಗೆ ೧೩೦೦ ರೂ ಬೆಲೆ ನಿಗದಿ ಮಾಡಿದ್ದಾರೆ. ಇಷ್ಟರಲ್ಲಿ ಒಂದು ತಿಂಗಳಿಗೆ ಸಾಕಾಗೂವಷ್ಟೂ ೨೫ ಕೆಜಿ ಅಕ್ಕಿ ಖರೀದಿ ಮಾಡಬಹುದು. ಇಷ್ಟೊÃಂದು ಬೆಲೆ ಏರಿಕೆಯಾದರೆ ಖರೀದಿ ಮಾಡಲ ಕಷ್ಟಕರವಾಗುತ್ತದೆ.
ರಾಮಪ್ರಸಾದ ಸೋಳಂಕೆ
ಸ್ಥಳೀಯ ಗ್ರಾಹಕ

==ಬಾಕ್ಸ್==
ಮಾವನ್ನು ತಿನ್ನುವ ಆಶೆಯಾಗಿದೆ ಆದರೆ, ಮಾರ್ಕೇಟನಲ್ಲಿ ಮಾವಿನ ವಿಪರೀತವಾಗಿದೆ. ಬೆಲೆ ಕಡಿಮೆಯಾಗುವರೆಗೂ ಕಾಯಬೇಕಾಗುತ್ತದೆ. ಒಂದು ಡಜನ್ ಮಾವಿನ ೨೦೦ ರೂ, ಕೊಟ್ಟರೆ ಖರೀದಿ ಮಾಡಬಹುದು, ಆದರೆ, ವ್ಯಾಪಾಸ್ಥರು ೧೩೦೦ ರೂ ಹೇಳುತ್ತಿದ್ದಾರೆ ಇಷ್ಟೊÃಂದು ಬೆಲೆ ಇರುವ ಮಾವಿನ ಹಣ್ಣುಗಳನ್ನು ಖರೀದಿ ಮಾಡಲು ಸಾಧ್ಯವಿಲ್ಲ.
ರೋಹನ ಪಾಟೀಲ್
ವ್ಯಾಪಾರಸ್ಥ

^^^^^^^^^^

loading...