ಗಚ್ಚಿನ ಮಠದಲ್ಲಿ ಪೂರ್ವ ಭಾವಿ ಸಭೆ

0
20

ಅಥಣಿ,26: ರಾಜ್ಯೋತ್ಸವ ಅಂಗವಾಗಿ ಕರ್ನಾಟಕ ರಕ್ಷಣಾ ವೇದಿಕೆಯವರು ಪಟ್ಟಣದ ಗಚ್ಚಿನ ಮಠದಲ್ಲಿ ಪೂರ್ವ ಭಾವಿ ಸಭೆಯನ್ನು ನಡೆಸಿದರು.
ಈ ವೇಳೆ ಕರವೇ ಅಧ್ಯಕ್ಷ ಬಸನಗೌಡ ಪಾಟೀಲ (ಬಮ್ನಾಳ) ಕಾರ್ಯಕರ್ತರೊಂದಿಗೆ ಮಾತನಾಡಿ. ತಾಲೂಕಿನಾದ್ಯಂತ ಅಂಗಡಿ, ವೃತ್‍ದ ಪಕ್ಕ ಹಾಗೂ ಇನ್ನಿತರ ಬಡಾವಣೆಗಳಲ್ಲಿರುವ ಮರಾಠಿ ನಾಮ ಫಲಕಗಳನ್ನು ತೆಗೆಯಬೇಕು. ಖಿಳೇಗಾಂವ ಬಸವೇಶ್ವರ ಏತ ನೀರಾವರಿ ಯೋಜನೆ ಅನುಷ್ಠಾನಗೊಳಿಸಬೇಕು. ಮತ್ತು ತಾಲೂಕಿನಲ್ಲಿರುವ ಐದು ಸಕ್ಕರೆ ಕಾರ್ಖಾನೆಯವರು ಕನ್ನಡಿಗರಿಗೆ ಉದ್ಯೋಗ ಅವಕಾಶ ನೀಡಬೇಕು ಮತ್ತು ತಾಲೂಕಿನಾದ್ಯಂತ ರಾಜ್ಯೋತ್ಸವವನ್ನು ಸಂಭ್ರಮವಾಗಿ ಆಚರಿಸಬೇಕು. ತಾಲೂಕಾಡಳಿತದವರು ಮಂಗಸೂಳಿ ಗ್ರಾಮದಲ್ಲಿ ಅತ್ಯಂತ ಸಂಬ್ರಮದಿಂದ ಗ್ರಾಮಸ್ತರೊಂದಿಗೆ ಪೂರ್ವಭಾವಿ ಸಭೆ ನಡೆಸಿ ಎಲ್ಲರ ಸಮ್ಮುಖದಲ್ಲಿ ರಾಜ್ಯೋತ್ಸವ ಆಚರಿಸಬೇಕು. ಗ್ರಾಮಸ್ಥರು ಅಂಗಡಿ ಮುಂಗಟ್ಟುಗಳನ್ನು ಬಂದ ಮಾಡದೆ ರಾಜ್ಯೋತ್ಸವದಲ್ಲಿ ಭಾಗಿಯಾಗುವಂತೆ ಅಧಿಕಾರಿಗಳು ಮೊದಲಿಗೆ ಚರ್ಚಿಸಬೇಕು ಇಲ್ಲದಿದ್ದರೆ ತಾಲೂಕಾಡಳಿತ ವಿರುದ್ಧ ಉಗ್ರ ಹೋರಾಟ ನಡೆಸುವ ಕುರಿತು ಸಭೆಯಲ್ಲಿ ನೀರ್ಣಯ ಕೈಗೊಳ್ಳಲಾಯಿತು.
ಸಿದ್ಧು ಒಡೆಯರ, ಸಚೀನ ಪಾಟೀಲ, ಶ್ರೀಶೈಲ ಪೂಜಾರಿ, ಶಬ್ಬಿರ ಸಾತಬಚ್ಚೆ, ಚೇತನ ಪಾಟೀಲ, ರಮೇಶ ಭಂಡಾರೆ, ಅಪ್ಪು ಪಾಟೀಲ, ಸಂಜಯ ಇಂಗೂಲೆ, ಉಮೇಶ ಪಾಟೀಲ, ಮಹೇಶ ಮೇಟಗೇರಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

loading...

LEAVE A REPLY

Please enter your comment!
Please enter your name here