ಗಟಾರ ಸ್ವಚ್ಚಗೊಳಿಸುವಂತೆ ಸಾರ್ವಜನಿಕರು ಆಗ್ರಹ

0
36

ಕನ್ನಡಮ್ಮ ಸುದ್ದಿ-ಮುಂಡಗೋಡ: ಪಟ್ಟಣದ ಪಕ್ಕಾ ಗಟಾರಗಳನ್ನು ಮಳೆಗಾಲ ಪ್ರಾರಂಭದ ಮೊದಲೇ ಸ್ವಚ್ಚಗೊಳಿಸದ ಪಟ್ಟಣ ಪಂಚಾಯತ ನಿಸ್ಕಾಳಜಿತನದಿಂದ, ಕೆಲ ಭಾರಿ ಅಬ್ಬರದ ಮಳೆಯಿಂದ ಚರಂಡಿ ತುಂಬಿ ಅದರಲ್ಲಿನ ತ್ಯಾಜ್ಯ ಹಾಗೂ ಕೊಳಕು ನೀರು ರಸ್ತೆಯಲ್ಲಿ ಹರಡಿ ಪಾದಚಾರಿಗಳು ಹಾಗೂ ವಾಹನ ಸಂಚಾರಕ್ಕೆ ತೀವ್ರ ತೊಂದರೆ ಪಟ್ಟಣದ ಬಂಕಾಪುರ ರಸ್ತೆ ಹಾಗೂ ಬಹುತೇಕ ವಾರ್ಡ್‍ಗಳ ರಸ್ತೆಗಳಲ್ಲಿ ನಿರ್ಮಾಣವಾಗಿದೆ.
ಈಗ ಭಾರಿ ಮಳೆ ಬಿಳ್ಳುತ್ತಿರುವುದರಿಂದ ಪಟ್ಟಣದ ಕೆಲ ರಸ್ತೆಗಳ ಅಕ್ಕ ಪಕ್ಕದ ಗಟಾರಗಳಲ್ಲಿ ನೀರು ಸಲಿಸಾಗಿ ಮುಂದೆ ಹೊಗದೆ ಚರಂಡಿಗಳಲ್ಲಿನ ಪ್ಲಾಸ್ಟಿಕ್ ಚೀಲ್, ಬಾಟಲಿಗಳು, ಸೇರಿದಂತೆ ಮನೆಯ ತ್ಯಾಜ್ಯ ವಸ್ತುಗಳು ಹಾಗೂ ಕೊಳಕು ನೀರು ರಸ್ತೆಗಳ ಮೇಲೆ ಹರಿದು ಕೆಲ ಕಡೆಗಳಲ್ಲಿ ನೀರು ನಿಂತು ಕೆರೆಗಳಂತೆ ಕಾಣುತ್ತಿದ್ದರೆ ಇನ್ನೂ ಕೆಲ ಕಡೆಗಳಲ್ಲಿ ನೀರು ಹರಿದು ಹೋಗುವ ರಭಸಕ್ಕೆ ರಸ್ತೆಯಂಚು ಕೊಚ್ಚಿಕೊಂಡು ಹೋಗಿದೆ. ಹೀಗೆ ನೀರಿನ ರಭಸಕ್ಕೆ ಮಣ್ಣು ಕಲ್ಲುಗಳೆಲ್ಲ ರಸ್ತೆಗೆ ಬಂದು ಬಿದ್ದಿದೆ. ಮೊದಲೇ ಮಳೆಗಾಲ ಪಾರಂಭವಾಗಿದ್ದು ಮಳೆ ಬಂದಾಗ ಪಟ್ಟಣದ ಕೆಲ ಭಾಗಗಳಲ್ಲಿ ರಸ್ತೆಗಳಲ್ಲಿನ ನೀರು ಗಟಾರಗಳಿಗೆ ಹೊಗದೆ ಅಲ್ಲಲ್ಲಿ ಗುಂಡಿಗಳಾಗಿ ನಿಂತು ಸೊಳ್ಳೆಗಳ ಉತ್ಪತ್ತಿ ತಾಣವಾಗುತ್ತಾ, ಡೆಂಗ್ಯು ಮಲೇರಿಯಾ ಸೇರಿದಂತೆ ಇನ್ನಿತರ ರೋಗಕ್ಕೆ ಆಹ್ವಾನ ನೀಡುವ ವಾತಾವರಣದ ಸ್ಥೀತಿ, ಪಟ್ಟಣದ ಕೆಲ ರಸ್ತೆಗಳಲ್ಲಿ ಹಾಗೂ ಪಕ್ಷದ ಗಟಾರ (ಚರಂಡಿ) ಗಳಲ್ಲಿ ನಿರ್ಮಾಣವಾಗಿದ್ದು, ಈ ಬಗ್ಗೆ ಪಟ್ಟಣ ಪಂಚಾಯತ ಶೀಘ್ರ ಮಳೆ ಬಂದಾಗ ರಸ್ತೆ ಮೇಲೆ ಹರಿಯುವ ನೀರು ಸಲಿಸಾಗಿ ಚಂರಡಿಗಳಿಗೆ ಹೋಗುವಂತ್ತೆ ಮತ್ತು ತ್ಯಾಜ್ಯ ವಸ್ತುಗಳಿಂದ ತುಂಬಿ ನಿಂತಿರುವ ಗಟಾರಗಳನ್ನು ಸ್ವಚ್ಚಗೊಳಿಸುವ ಕಾರ್ಯಕ್ಕೆ ಮುಂದಾಗಬೇಕಿದೆ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

loading...