ಗಡಿ ವಿಷಯದಲ್ಲಿ ಬೆಂಕಿ ಗಿರಿದ ಮಹಾರಾಷ್ಟç ಶಾಸಕ : ಕರವೇ ಧರಣಿ

0
30

ಗಡಿ ವಿಷಯದಲ್ಲಿ ಬೆಂಕಿ ಗಿರಿದ ಮಹಾರಾಷ್ಟç ಶಾಸಕ : ಕರವೇ ಧರಣಿ
ಬೆಳಗಾವಿ:ನಿನ್ನೆಯಷ್ಟೇ ಮಹಾರಾಷ್ಟ್ರದಲ್ಲಿ ಶಾಸಕರಾಗಿ ಪ್ರಮಾಣ ವಚನ  ಸ್ವೀಕರಿಸುವ ವೇಳೆ ಚಂದಗಡ ಶಾಸಕ ರಾಜೇಶ್ ಪಾಟೀಲ್ ಬೆಳಗಾವಿ, ಬಾಲ್ಕಿ, ಕಾರವಾರ, ನಿಪ್ಪಾಣಿ ಸಂಯುಕ್ತ ಮಹಾರಾಷ್ಟ್ರ ಆಗಬೇಕು ಎಂದು ಹೇಳಿಕೆ ನೀಡುವ ಮೂಲಕ ಗಡಿ ವಿಷಯದಲ್ಲಿ ಬೆಂಕಿ ಹಚ್ಚುವ ಕೆಲಸ ಮಾಡಿದ್ದಾರೆ ಎಂದು ಬೆಳಗಾವಿಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಪ್ರತಿಭಟನೆ ನಡೆಸಲಾಯಿತು.

ಬುಧವಾರ ಶಾಸಕರಾಗಿ ಪ್ರಮಾಣವಚನ ಸ್ವೀಕರಿಸುವ ವೇಳೆ ಚಂದಗಡ ಎನ್‌ಪಿಶಾಸಕ ರಾಜೇಶ್ ಪಾಟೀಲ್ ಕನ್ನಡಿರ ಭಾವನೆಯನ್ನು ಕೆರಳಿಸುವ ರೀತಿಯಲ್ಲಿ ಬೆಳಗಾವಿ, ಬಾಲ್ಕಿ, ಕಾರವಾರ, ನಿಪ್ಪಾಣಿ ಸಂಯುಕ್ತ ಮಹಾರಾಷ್ಟ್ರ ಆಗಲೇಬೇಕು ಅಲ್ಲಿಯವರೆಗೂ ನಾವು ಹೋರಾಟ ಮಾಡುತ್ತೇವೆ ಎಂದು ಪ್ರಮಾಣ ವಚನ ಸ್ವೀಕರಿಸಿದ್ದು ಸಧ್ಯ ತೀವ್ರ ಟೀಕೆಗೆ ಗುರಿಯಾಗಿದೆ. ರಾಜೇಶ್ ಪಾಟೀಲ್ ಕನ್ನಡ ವಿರೋಧಿ ನಡೆ ಖಂಡಿಸಿ ಬೆಳಗಾವಿ ನಗರದ ಸೇಂಟ್ ಕ್ಸೇವಿಯರ್ ಸ್ಕೂಲ್ ಬಳಿ ಶಿವರಾಮೇಗೌಡ ಬಣದ ಕರ್ನಾಟಕ ರಕ್ಷಣಾ ವೇದಿಕೆಯಿಂದ ಪ್ರತಿಭಟನೆ ನಡೆಸಲಾಯಿತು. ಈ ವೇಳೆ ರಾಜೇಶ್ ಪಾಟೀಲ್ ಪ್ರತಿಕೃತಿ ದಹಿಸಿ, ಧಿಕ್ಕಾರದ ಘೋಷಣೆಗಳನ್ನು ಕೂಗಿ ಕರವೇ ಕಾರ್ಯರ್ತರು ಘೋಷಣೆ ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಮಾತನಾಡಿದ ಕರವೇ ನಗರ ಅಧ್ಯಕ್ಷ ಆನಂದ ಬಡಿಗೇರ ರಾಷ್ಟçವಾದಿ ಕಾಂಗ್ರೆಸ್ ಪಕ್ಷದಿಂದ ಶಾಸಕರಾಗಿ ಆಯ್ಕೆಯಾಗಿ ಈ ರೀತಿ ಗಡಿ ವಿಷಯದಲ್ಲಿ ಬೆಂಕಿ ಹಚ್ಚುವ ರೀತಿಯಲ್ಲಿ ರಾಜೇಶ ಪಾಟೀಲ್ ಮಾತಾಡಿದ್ದು ಸರಿಯಲ್ಲ. ಬೆಳಗಾವಿಯಲ್ಲಿ ಎಲ್ಲರೂ ಸಾಮರಸ್ಯದಿಂದ ಜೀವನ ನಡೆಸುತ್ತಿರುವ ದಿನಗಳಲ್ಲಿ ಹುಳಿ ಹಿಂಡುವ ಕೆಲಸವನ್ನು ರಾಜೇಶ್ ಪಾಟೀಲ್ ಮಾಡುತ್ತಿದ್ದಾರೆ ಎಂದು ತಮ್ಮ ಆಕ್ರೋಷ ವ್ಯಕ್ತಪಡಿಸಿದ್ರು.
ಈ ಸಂದರ್ಭದಲ್ಲಿ ವಾಜೀದ್ ಹಿರೇಕೊಡಿ, ರೇಷ್ಮಾ ಕಿತ್ತೂರ, ನಾಗೇಶ್ ಕೊಪ್ಪದ್, ಪ್ರಕಾಶ ಚಿಪ್ಪಲಕಟ್ಟಿ, ರವಿ ಹಿರೇಮಠ, ಮಾಳಿಕಾ ವಾಘಿ ಸೇರಿ ಇನ್ನು ಹಲವು ಕರವೇ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು

loading...