ಗಣಿತ ವಿಷಯ ಸುಲಿದ ಬಾಳೆ ಹಣ್ಣು: ರಾಠೋಡ

0
107

ಕೋಹಳ್ಳಿ: ವಿದ್ಯಾರ್ಥಿಗಳಿಗೆ ಗಣಿತ ಕಲಿಕೆಯಲ್ಲಿ (ಪೈ)ಯಂತಹ ವಿಶೇಷ ಕಾರ್ಯಕ್ರಮಗಳಿಂದ ವಿಶೇಷ ಆಸಕ್ತಿಯನ್ನು ಹುಟ್ಟುಹಾಕುವದಲ್ಲದೇ ಗಣಿತದಂತಹ ಕಠಿಣ ವಿಷಯಗಳನ್ನು ಸರಳಗೊಳಿಸುತ್ತವೆ ಎಂದು ಮುಖ್ಯೋಪಾಧ್ಯಾಯ ಆರ್.ಎಲ್ ರಾಠೋಡ ಹೇಳಿದರು.
ಅವರು ಸ್ಥಳೀಯ ಸರಕಾರಿ ಪ್ರೌಢ ಶಾಲೆಯ ‘ಬ್ರಹ್ಮಶ್ರೀ’ ಗಣಿತ ಸಂಘ ಆಶ್ರಯದಲ್ಲಿ ಹಮ್ಮಿಕೊಂಡಿದ್ದ (ಪೈ) ದಿನಾಚರಣೆಯಲ್ಲಿ ಭಾಗವಹಿಸಿ, ಪೈ ಒಂದು ಸಾವಿರ ದಶಮಾಂಶ ಸ್ಥಾನಗಳಿಗೆ ನಿಖರ ಬೆಲೆ ಹೊಂದಿದ್ದ 20 ಮೀಟರ ಉದ್ದದ ಪಟ್ಟಿ ಬಿಡುಗಡೆಗೊಳಿಸಿ ಮಾತನಾಡಿದರು. ವಿದ್ಯಾರ್ಥಿಗಳ ನಿತ್ಯ ಜೀವನದಲ್ಲಿ ಗಣಿತ ಹಾಸು ಹೊಕ್ಕಾಗಿರುವದರಿಂದ ಗಣಿತ ಕಲಿಕೆ ಮಕ್ಕಳಿಗೆ ಅವಶ್ಯಕವಾಗಿದೆ ಎಂದು ಹೇಳಿದರು.
ಗಣಿತ ಉಪನ್ಯಾಸಕಿ ಶೋಭಾ ಪಾಟೀಲ ಮಾತನಾಡಿ, ಕನ್ನಡವೆಂದರೆ ಸುಲಿದ ಬಾಳೆ ಹಣ್ಣಿನಂತೆ, ಶಿವನ ಮೂರನೇ ಕಣ್ಣಿನ ಹಾಗೆ ಪ್ರಖರವೆಂದು ಹೇಳತ್ತಾ (ಪೈ)ನ ಇತಿಹಾಸ ಬಿಚ್ಚಿಟ್ಟರು.
ಹಿರಿಯ ಶಿಕ್ಷಕರಾದ ಡಿ.ಎನ್ ಧರಿಗೌಡರ ಮಾತನಾಡಿ, ವಿದ್ಯಾರ್ಥಿಗಳು ಗಣಿತ ಕಠಿಣವೆಂದು ಭಾವಿಸಿಕೊಳ್ಳಬಾರದು. ಅರ್ಥೈಸಿಕೊಂಡರೆ ಗಣಿತದಷ್ಟು ಸುಲಭ ವಿಷಯ ಮತ್ತೊಂದಿಲ್ಲ. ‘ಆಸಕ್ತಿಯೇ ಕಲಿಕೆಯ ಮೂಲ ತಾಯಿ’ ಆಗಿರುವದರಿಂದ ಕಠಿಣ ವಿಷಯ ಕಲಿಕೆಯಲ್ಲಿ ಆಸಕ್ತಿ ಬೆಳೆಸಿಕೊಳ್ಳಬೇಕು. ಗಣಿತ ಬಲ್ಲವನಿಗೆ ಎಲ್ಲ ವಿಷಯವೂ ಸರಳವಾಗುವುದು ಎಂದು ಹೇಳಿದರು.
ಈ ಕಾರ್ಯಕ್ರಮದ ನಿಮಿತ್ಯ ವಿದ್ಯಾರ್ಥಿಗಳಿಗಾಗಿ ವಿವಿಧ ಸ್ಪರ್ಧೆ ಆಯೋಜಿಸಿ ಬಹುಮಾನ ವಿತರಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಎಸ್.ಪಿ ಅಥಣಿ, ಡಿ.ಎನ್ ಹರಿಜನ, ಎಚ್.ಎ ಮಗದುಮ, ಎಮ್.ಎಲ್ ಹಾನಾಪೂರ, ಗಿರಮಲ್ಲ ತಾಂವಶಿ, ಶಾಲಾಬಾಯಿ ಗಾವಡೆ ಮುಂತಾದವರು ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಸುಮಾ ಭಜಂತ್ರಿ ನಿರೂಪಿಸಿದರು. ಸಂತೋಷ ಕರಿಗಾರ ವಂದಿಸಿದರು.

loading...

LEAVE A REPLY

Please enter your comment!
Please enter your name here