ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಮಹಿಳಾ ಅಧಿಕಾರಿ ಮೇಲೆ ಮಾರಣಾಂತಿಕ ಹಲ್ಲೆ

0
33

ಕನ್ನಡಮ್ಮ ಸುದ್ದಿ-ಕೊಪ್ಪಳ : ಜಿಲ್ಲೆಯ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿ ಕೃಷ್ಣವೇಣಿ ಅವರ ಮೇಲೆ ಅಪರ ಜಿಲ್ಲಾಧಿಕಾರಿ ಕುಟುಂಬದವರು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿರುವ ಘಟನೆ ಬಗ್ಗೆ ಹಲ್ಲೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಇನ್ನೊಂದೆಡ ಹಲ್ಲೆಗೆ ಒಳಗಾಗಿರುವ ಮಹಿಳಾ ಅಧಿಕಾರಿ ಎಡಿಸಿ ಅಥವಾ ಅವರ ಕುಟುಂಬದವರ ವಿರುದ್ಧ ಯಾವುದೇ ದೂರು ನೀಡಿಲ್ಲ.
ಹಲ್ಲೆಗೊಳಗಾದ ಅಧಿಕಾರಿಯು ಮೈಸೂರು ಮೂಲದರಾಗಿದ್ದು, ಪ್ರಸ್ತುತ ಜಿಲ್ಲೆಯ ಗಣಿ ಮತ್ತು ಭೂವಿಜ್ಞಾನ ಇಲಾಖೆಯಲ್ಲಿ ಭೂ ವಿಜ್ಞಾನಿಯಾಗಿ ಕಳೆದ ಎರಡು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದಾರೆಂದು ಗುರುತಿಸಲಾಗಿದೆ. ಕೊಪ್ಪಳ ನಗರದ ಹೊರ ಹೊಲಯದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿರುವ ಪರ ಜಿಲ್ಲಾಧಿಕಾರಿ ಡಾ. ರುದ್ರೇಶ್ ಘಾಳಿ ಅವರ ಮನೆ ಬಳಿಯಲ್ಲಿ ಮಂಗಳವಾರ ರಾತ್ರಿ ಸುಮಾರು 10 ಗಂಟೆ ವೇಳೆ ಹಲ್ಲೆ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಹಲ್ಲೆಗೊಳಗಾದ ಕೃಷ್ಣವೇಣಿ ನಗರದ ಜಿಲ್ಲಾಸ್ಪತ್ರೆಯಲ್ಲಿ ವೈದ್ಯಕೀಯ ಚಿಕಿತ್ಸೆ ಪಡೆದುಕೊಂಡಿದ್ದಾರೆಂದು ಆಸ್ಪತ್ರೆ ಮೂಲಗಳು ಖಚಿತ ಪಡಿಸಿವೆ.ಇದುವರೆಗೂ ಯಾರ ವಿರುದ್ಧವೂ ದೂರು ನೀಡದೇ ಕೇವಲ ವೈದ್ಯಕೀಯ ಪರೀಕ್ಷೆ ಮಾಡಿಸಿ (ಎಂಎಲ್‍ಸಿ) ಸುಮ್ಮನಾಗಿದ್ದಾರೆ. ಸ್ವತಃ ಪೊಲೀಸರೆ ಈ ಕುರಿತು ದೂರು ನೀಡುತ್ತೀರಾ ಎಂದರೆ ಮೌನಕ್ಕೆ ಶರಣಾಗಿದ್ದಾರೆ.
ಕೃಷ್ಣವೇಣಿ ನಡೆ ಹಲವು ಅನುಮಾನಗಳ ಸರಮಾಲೆ: ಮಂಗಳವಾರ ರಾತ್ರಿ 10ರ ಸುಮಾರಿಗೆ ಭೂ ವಿಜ್ಞಾನಿ ಕೃಷ್ಣವೇಣಿ ಅವರು ಎಡಿಸಿ ಮನೆ ಬಳಿ ಹೋಗಿದ್ದಾರೆ. ಅಲ್ಲಿ ಯಾವ ಕೆಲಸದ ಮೇಲೆ ಹೋಗಿದ್ದರು..? ಯಾರು ಕರೆಸಿದ್ದರು ಎನ್ನುವುದು ಗೊತ್ತಿಲ್ಲ. ಏನು ನಡೆದಿದೆಯೋ ಎಂಬುದು ಯಾರಿಗೂ ಗೊತ್ತಿಲ್ಲ. ಆದರೆ ಹಲ್ಲೆ ನಡೆದಿದೆ, ಈಕೆಯೊಂದಿಗೆ ತೆರಳಿದ್ದ ಕಾರ್ ಚಾಲಕನ ಮೇಲೆಯೂ ಹಲ್ಲೆ ಮಾಡಲಾಗಿದೆ. ಪ್ರತಿಯಾಗಿ ಕಾರ್ ಚಾಲಕ ಮತ್ತು ಕೃಷ್ಣವೇಣಿ ಅವರು ಸಹ ಎಡಿಸಿ ಕುಟುಂಬದವರ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

loading...