ಗಣೇಶ,ಮೊಹರಂ ಹಬ್ಬಗಳ ಶಾಂತಿಯುತವಾಗಿ ಆಚರಿಸಿ: ಕೆ.ಟಿ.ಶೋಭಾ

0
16

 

ಕನ್ನಡಮ್ಮ ಸುದ್ದಿ-ತೇರದಾಳ: ಪಟ್ಟಣದ ಪೊಲೀಸ್ ಠಾಣೆಯ ಆವರಣದಲ್ಲಿ ಗಣೇಶ ಚತುರ್ಥಿ ಮತ್ತು ಮೊಹರಂ ಹಬ್ಬಗಳ ಪೂರ್ವಭಾವಿ ಸಭೆ ನಡೆಯಿತು.
ಠಾಣಾಧಿಕಾರಿ ಕೆ.ಟಿ.ಶೋಭಾ ಮಾತನಾಡಿದ ಗಣೇಶ ಚತುರ್ಥಿಯನ್ನು ಸ್ಥಳೀಯ ಸಂಘ-ಸಂಸ್ಥೆಗಳು ಸಹಕಾರದ ಮೂಲಕ ಶಾಂತಿಯುತವಾಗಿ ಆಚರಿಸಬೇಕು. ಗಣೇಶ ವಿಸರ್ಜನಾ ಸಮಯದಲ್ಲಿ ಡಾಲ್ಬಿಗಳಂತಹ ಧ್ವನಿವರ್ಧಕಗಳನ್ನು ಬಳಸುವಂತಿಲ್ಲ. ಇದರೊಟ್ಟಿಗೆ ಬರುವ ೨೧ರಂದು ನಡೆಯಲಿರುವ ಮೊಹರಂ ಹಬ್ಬವನ್ನು ಭಾವೈಕ್ಯತೆಯ ಮೂಲಕ ಶಾಂತಿಯುತವಾಗಿ ಕಾನೂನಿನ ಇತಿಮಿತಿಯಲ್ಲಿ ಆಚರಿಸಬೇಕು. ಹಾಗೆ ಆಚರಿಸುತ್ತಿರಿ ಎಂಬ ವಿಶ್ವಾಸ ನನಗಿದೆ ಎಂದರು.

ಎಸ್.ಡಿ.ಎಮ್ ಮೆಡಿಕಲ್ ಕಾಲೇಜ ಪ್ರಾಂಶುಪಾಲ ಪಿ.ಬಿ.ಅಪರಾಜ, ಪುರಸಭೆ ಮಾಜಿ ಸದಸ್ಯ ಮುಸ್ತಫಾ ಮೋಮಿನ, ಪ್ರಭಾಕರ ಬಾಗಿ ಮತ್ತಿತರರು ಮಾತನಾಡಿ, ಅಲ್ಲಮರ ಕ್ಷೆÃತ್ರದಲ್ಲಿ ನಾವು ಸೌಹಾರ್ದತೆಯ ಮೂಲಕ ಎರಡು ಹಬ್ಬಗಳನ್ನು ಆಚರಿಸುತ್ತೆÃವೆ. ನಮ್ಮ ಹಬ್ಬಗಳಿಗೆ ಪೊಲೀಸ್ ಇಲಾಖೆ, ಪುರಸಭೆ ಮತ್ತು ಕೆಇಬಿ ಇಲಾಖೆಗಳ ಸಹಕಾರ ಬಹಳಷ್ಟು ಅಗತ್ಯವಾಗಿದೆ. ಸೂಕ್ತ ಧ್ವನಿವರ್ಧಕಗಳಿಗೆ ಅವಕಾಶ ಕೊಡಬೇಕು ಎಂದರು.
ಪುರಸಭೆ ಅಧಿಕಾರಿ ಟಿ.ಕೆ.ಜಮಖಂಡಿ ಮಾತನಾಡಿ ಗಣೇಶ ವಿಸರ್ಜನೆಗಾಗಿ ಪುರಸಭೆಯವರು ಹತ್ತಾರು ಪೂಟಗಳ ಎತ್ತರದ ಹೊಂಡಗಳನ್ನು ನಿರ್ಮಿಸಲಿದ್ದು. ಅಲ್ಲಿ ಬೆಳಕಿನ ವ್ಯವಸ್ಥೆಯನ್ನು ಕೂಡಾ ಮಾಡಲಿದ್ದೆವೆ. ಹೀಗಾಗಿ ಸಾರ್ವಜನಿಕರು ಸದರಿ ಹೊಂಡಗಳನ್ನು ಬಳಸಿಕೊಂಡು ಮಾಲಿನ್ಯಕ್ಕೆ ಸಹಕಾರಿಯಾಗಬೇಕು. ಊರಿನ ಕೆರೆ, ಬಾವಿಗಳ ಬದಲಾಗಿ ಆಡಳಿತದಿಂದ ಕೊಡಮಾಡಿದ ಹೊಂಡಗಳನ್ನು ಬಳಸಿಕೊಳ್ಳಬೇಕು. ಅಲ್ಲದೆ ಪಿಓಪಿ ಗಣೇಶ ವಿಗ್ರಹಗಳನ್ನು ಈಗಾಗಲೆ ನಿಷೇಧ ಮಾಡಿ, ಅಕ್ರಮ ಮೂರ್ತಿಗಳನ್ನು ವಶಪಡಿಸಕೊಳ್ಳಲಾಗಿದ್ದು. ಮಾಲಿನ್ಯ ನಿಯಂತ್ರಣಕ್ಕಾಗಿ ಸರ್ಕಾರ ಕೈಗೊಂಡ ಕ್ರಮಕ್ಕೆ ನಾವೆಲ್ಲರು ಬದ್ಧರಾಗಬೇಕಿದೆ. ವಿದ್ಯುಚ್ಛಕ್ತಿ ಇಲಾಖೆ ಮುಖ್ಯಸ್ಥ ಬಿ.ಆರ್. ಪಟ್ಟಣಶೆಟ್ಟಿ ಮಾತನಾಡಿ, ಸಾರ್ವಜನಿಕ ಗಣೇಶ ಪ್ರತಿಷ್ಟಾಪನಾ ಸಂಘದವರು ಕಚೇರಿಗೆ ಭೇಟಿ ನೀಡಿ, ಪರವಾನಿಗೆ ಪಡೆದುಕೊಳ್ಳಬೇಕು. ವಿಸರ್ಜನಾ ಸಂಧರ್ಭದಲ್ಲಿ ವಿದ್ಯುತ್ ಕೆಬಲ್‌ಗಳಿಂದ ಆಗುವ ತೊಂದರೆಗಳಿಗೆ ಸ್ಥಳಿಯ ಲೈಮನ್‌ಗಳ ಮೂಲಕ ತೊಂದರೆಯಾಗದಂತೆ ಕಾರ್ಯಕ್ರಮ ನಿರ್ವಹನೆಮಾಡಬೇಕಿದೆ. ಪಟ್ಟಣದ ಐತಿಹಾಸಿಕ ದೇಸಾಯರ ಬಾವಿಯನ್ನು ಅಭಿವೃದ್ಧಿ ಪಡಿಸಲಾಗಿದ್ದು. ಸಾರ್ವಜನಿಕರು ಅಲ್ಲಿ ಗಣೇಶ ವಿಸರ್ಜನೆ ಮಾಡಬಾರದೆಂದು ಸಭೆಯ ಸರ್ವರು ಒಮ್ಮತದ ಮೂಲಕ ಹೇಳಿದರು.

ಈ ಸಂದರ್ಭದಲ್ಲಿ ಸ್ಥಳೀಯ ವಿವಿಧ ಸಂಘಟನೆಗಳ ಮುಖಂಡರು, ಪುರಸಭೆಯ ನೂತನ ಮತ್ತು ಮಾಜಿ ಸದಸ್ಯರು, ಹಿರಿಯರು, ಪೊಲೀಸ್ ಸಿಬ್ಬಂದಿಯವರು ಇದ್ದರು. ಕಾರ್ಯಕ್ರಮವನ್ನು ಪೊಲೀಸ್ ಸಿಬ್ಬಂದಿ ಎಲ್.ಬಿ.ಮಾಳಿ ನಿರ್ವಹಿಸಿದರು.

loading...