ಗಣೇಶ ಉತ್ಸವದ ನಿಮಿತ್ತ ಮಹಾನಗರ ಪಾಲಿಕೆಯಲ್ಲಿ ಪೂರ್ವಭಾವಿ ಸಭೆ

0
32

ಕನ್ನಡಮ್ಮ ಸುದ್ದಿ-ಬೆಳಗಾವಿ: ಗೌರಿ ಗಣೇಶ ಹಬ್ಬದ ನಿಮಿತ್ತವಾಗಿ ಪೂರ್ವಭಾವಿ ಸಭೆಯಲ್ಲಿ ಮಹಾನಗರ ಪಾಲಿಕೆ ಸಂಭಾಗಣದಲ್ಲಿ ಇಂದು ಹಮ್ಮಿಕೊಂಡಿದ್ದರು.

ಈ ವೇಳೆ ನೇತಾಜಿ ಜಾಧವ ಅವರು ಮಾತನಾಡಿ, ನಗರದಲ್ಲಿ ಗಣೇಶ ಹಬ್ಬವನ್ನು ಅದ್ದೂರಿಯಾಗಿ ಆಚರಿಸುತ್ತಾ ಬರುತ್ತಿದೆ.ಈ ವರ್ಷ ರಸ್ತೆಗಳು ಸಂಪೂರ್ಣ ಹದಗೆಟ್ಟಿವೆ ರಸ್ತೆಗಳ ದುರಸ್ಥಿಗೆ ಅನೇಕ‌ ಬಾರಿ ತಿಳಿಸಿದರು. ಇನ್ನೂ ಕೆಲ ಕಡೆ ದುರಸ್ಥಿಯಾಗಿಲ್ಲ. ಹಬ್ಬದ ದಿನದಂದು ಏನೇ ಸಮಸ್ಯೆ ಯಾದರೆ ಪಾಲಿಕೆ ಎದುರು ಧರಣಿ ನಡೆಸಲಾಗುವುದು ಎಚ್ಚರಿಸಿದರು.
ಅಲ್ಲದೆ ನಗರದಲ್ಲಿ ಪಾಲಿಕೆ ವತಿಯಿಂದ ಗಣೇಶ ವಿಸರ್ಜನೆ ಗೆಂದು ಪ್ರತ್ಯೇಕ ಹೊಂಡ ತರೆಯಲಾಗಿದೆ. ಅಲ್ಲಿ ಪಿಒಪಿ‌ ಗಣೇಶ ವಿಸರ್ಜನೆಯಿಂದ ಪರಿಸರದ ಮೇಲೆ ಯಾವುದೇ ಪರಿಣಾಮ‌ ಬೀರುವುದಿಲ್ಲ.ಆದ್ದರಿಂದ ಪಿಒಪಿ ಗಣೇಶಕ್ಕೆ ಅವಕಾಶ ನೀಡುವಂತೆ ಮನವಿ ಮಾಡಿಕೊಂಡರು.
ವಡಗಾಂವ, ಶಹಾಪುರ ಗಣೇಶ ವಿಸರ್ಜನೆ ಅಲ್ಲಿಯೊಂದು ಪ್ರತ್ಯೇಕ ಹೊಂಡ ನಿರ್ಮಾಣ ಮಾಡಬೇಕೆಂದು ಸಲಹೆ‌ ನೀಡಿದರು.
ಈ ಸಂದರ್ಬದಲ್ಲಿ ಪಾಲಿಕೆ ಮೇಯರ ಬಸಪ್ಪಾ ಚಿಕ್ಕಲದಿನ್ನಿ,ಉಪಮೇಯರ ಮಧುಶ್ರೀ ಪುಜಾರಿ, ಡಿಸಿಪಿ ಸೀಮಾ ಲಾಟ್ಕರ, ಆಯುಕ್ತ ಶಶಿಧರ ಕುರೇರ, ಸ್ಥಾಯಿ ಸಮಿತಿ ಅಧ್ಯಕ್ಷರು,ನಗರ ಸೇವಕರು,ಗಣೇಶ ಮಂಡಳಿ‌ ಪದಾಧಿಕಾರಿಗಳು , ನಾಗರಿಕರು ಹಾಜರಿದ್ದದರು.

loading...