ಗಣೇಶ ಚತುರ್ತಿ,ಮೊಹರಂ ಹಬ್ಬ ಶಾಂತಿಯುತವಾಗಿ ಆಚರಿಸಿ: ಸಿಪಿಐ ರವಿಕುಮಾರ

0
18

ನಾಲತವಾಡ: ಶಾಂತಿ, ಸೌಹಾರ್ದದಿಂದ ಗಣೇಶ ಹಾಗೂ ಮೊಹರಂ ಹಬ್ಬ ಆಚರಣೆಗೆ ಸಿಪಿಐ ರವಿಕುಮಾರ ಕಪ್ಪತನವರ ಸಲಹೆ.
ಪಟ್ಟಣದ ಪೋಲೀಸ್ ಹೊರ ಠಾಣೆಯಲ್ಲಿ ಗಣೇಶ ಹಬ್ಬ ಹಾಗೂ ಮೊಹರಂ ಹಬ್ಬದ ಪ್ರಯುಕ್ತ ನಡೆದ ಶಾಂತಿ ಸಭೆಯಲ್ಲಿ ಮಾತನಾಡಿದ ಅವರು, ಗಣೇಶ ಚತುರ್ತಿ ಹಾಗೂ ಮೊಹರಂ ಹಬ್ಬ ಏಕಕಾಲಕ್ಕೆ ಬಂದಿರುವ ಪ್ರಯುಕ್ತ ಪಟ್ಟಣದ ಸಾರ್ವಜನಿಕರು ಶಾಂತಿ ಹಾಗೂ ಸೌಹಾರ್ದದಿಂದ ಹಬ್ಬಗಳನ್ನು ಆಚರಣೆ ಮಾಡಿ, ಯಾವದೇ ಅಹಿತಕರ ಘಟನೆ ನಡೆಯದಹಾಗೆ ಹಿರಿಯರು, ಕಿರಿಯರಿಗೆ ಮಾರ್ಗದರ್ಶನ ನೀಡಿಬೇಕು, ಗಣೇಶನ ಮೂರ್ತಿ ಪ್ರತಿಸ್ಠಾಪಿಸುವರು ಕಡ್ಡಾಯವಾಗಿ ಸಂಭಂದ ಪಟ್ಟ ಪ.ಪಂಯಲ್ಲಿ ಪರವಾನಗಿ ಹಾಗೂ ವಿದ್ಯುತ್‌ಗೆ ಸಂಭದಿಸಿದಂದ ಹೆಸ್ಕಾಂ ಕಚೇರಿಯಲ್ಲು ಪರವಾನಗಿ ಪಡೆದು ಹಾಗೂ ಪೋಲೀಸ್ ಇಲಾಖೆಯಿಂದಲು ಪರವಾನಗಿ ಪಡೆದುಕೊಳ್ಳಬೇಕು, ಸಾರ್ವಜನಿಕರು ಕಾನೂನಿನ ಚೌಕಟ್ಟಿನಲ್ಲಿ ಹಬ್ಬವನ್ನು ಆಚರಿಸಬೇಕು ಯಾವದೇ ಕಾರಣಕ್ಕು ಕಾನೂನು ಉಲ್ಲಂಘನೆ ಮಾಡ ಬಾರದು ಕಾನೂನು ಉಲ್ಲಘನೆ ಮಾಡಿದ್ದಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವದು. ಕೆಲವೊಂದು ಹಾಡುಗಳು ಈಗಾಗಲೆ ನಿಷೇಧಿಸಲಾಗಿದೆ ಅವುಗಳನ್ನು ದ್ವನಿವರ್ಧಕದಲ್ಲಿ ಹಾಕದ ಹಾಗೆ ಗಜಾನನ ಮಂಡಳಿ ನೋಡಿಕೊಳ್ಳಬೇಕು, ಸಾರ್ವಜನಿಕರು ಪೋಲೀಸರೊಂದಿಗೆ ಉತ್ತಮ ಬಾಂಧವ್ಯ ಹೊಂದಿದಾಗ ಮಾತ್ರ ಯಾವದೇ ಕಾರ್ಯಕ್ರಮ ಶಾಂತಿಯುತವಾಗಿ ಆಚರಿಸಿಲು ಸಾಧ್ಯವಾಗುತ್ತದೆ, ಮೊಹರಂ ಹಾಗೂ ಗಣೇಶ ಚತುರ್ತಿ ಹಬ್ಬ ಪರಸ್ಪರ ಸೌಹಾರ್ದದಿಂದ ಆಚರಿಸಿ ಎಂದರು.
ಪಟ್ಟಣ ಪಂಚಾಯತ ನಾಮನಿರ್ದೇಶಕ ಸದಸ್ಯರಾದ ಬಾಲಚಂದ್ರ ಗದಗಿನ ಮಾತನಾಡಿ ನಾಲತವಾಡ ಪಟ್ಟಣದಲ್ಲಿ ಯಾವತ್ತು ಶಾಂತಿ ಕದಡುವದಿಲ್ಲ ಇಲ್ಲಿ ಎಲ್ಲರು ಪರಸ್ಪರ ಸೌಹಾರ್ದದಿಂದ ಬಾಳುತ್ತಾ ಬರುತಿದ್ದೆÃವೆ, ಇಂದಿನ ಯುವಕರು ಕೂಡ ಇದೆ ಪದ್ದತಿಯನ್ನು ಮುಂದೇ ವರಿಸಿಕೊಂಡು ಹೋಗಬೇಕು, ಹಬ್ಬವೆಂದರೆ ಎಲ್ಲ ಒಂದೆ ಇದರಲ್ಲಿ ಯಾವದೇ ತರಹದ ಬೇಧವಿರಬಾರದು, ಪ್ರತಿವರ್ಷದಂತೆ ನಾವೆಲ್ಲ ಈ ವರ್ಷಯು ಶಾಂತಿಯುತದಿಂದ ಗಣೇಶ ಚತುರ್ತಿ ಹಾಗೂ ಮೊಹರಂ ಹಬ್ಬ ಆಚರಣೆ ಮಾಡುತ್ತೆÃವೆ ಎಂದರು.
ಈ ವೇಳೆ ಪೋಲೀಸ್ ಇಲಾಖೆಯ ಎಎಸ್‌ಐ ಎಸ್.ಬಿ.ನ್ಯಾಮಣ್ಣನವರ, ಪೇದೆಗಳಾದ ಎ.ವಾಯ್ ಸಾಲಿ, ಪಾಟೀಲ, ಶಾಂತಗೌಡ ಬನ್ನಟ್ಟಿ, ಮುಖಂಡರಾದ ಪೀರಸಾಬ ಅವಟಿ, ಮುದ್ದಪ್ಪ ಮಸ್ಕಿ, ವಿರೇಶ ದಲಾಲಿ, ಹಸನಸಾಬ ಕುಳಗೇರಿ, ಬಸವರಾಜ ತಳವಾರ, ಅಮರಪ್ಪ ಸೀರಿ, ಮಲ್ಲು ತಾತರೆಡ್ಡಿ, ಶಿವು ಗಂಗನಗೌಡರ, ಬಶೀರ ಅವಟಿ, ಸೈಯದ ಖಾಜಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು

loading...