ಗುಡುದೂರ-ಜಹಗೀರ ರಾಂಪೂರ ರಸ್ತೆ ಒತ್ತುವರಿ ತೆರುವುಗೊಳಿಸುವಂತೆ ಪ್ರತಿಭಟನೆ

0
14

ಕನ್ನಡಮ್ಮ ಸುದ್ದಿ-ಕೊಪ್ಪಳ: ಗುಡುದೂರ ಗ್ರಾಮದಿಂದ ಜಹಗೀರ ರಾಂಪೂರ ಗ್ರಾಮದ ಮುಖ್ಯ ರಸ್ತೆಯನ್ನು ಒತ್ತುವರಿ ಮಾಡಿದ ಗ್ರಾಮದ ರಸ್ತೆಯನ್ನು ತೆರುವುಗೊಳಿಸಬೇಕು ಎಂದು ಆಗ್ರಹಿಸಿ ಕನಾಟಕ ರಾಜ್ಯ ರೈತ ಸಮಘ ಹಾಗೂ ಹಸಿರು ಸೇನೆ ಪ್ರತಿಭಟನೆ ನಡೆಸಿದರು.
ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ ಈ ಕುರಿತು ಒತ್ತಾಯಿಸಿದ ಅವರು, ಗುಡುದೂರ ಗರಾಮದಿಂದ ಜಹಗೀರ ರಾಂಪೂರ ಗ್ರಾಮದ ಸರ್ವೆ ನಂ 3 ರಲ್ಲಿಯ ಮಾಲೀಕರು ಮುಖ್ಯ ರಸ್ತೆಯನ್ನು ಒತ್ತುವರಿ ಮಾಡಿದ್ದು, ಆ ರಸ್ತೆ ಕೇವಲ 8 ಅಡಿ ಮಾತ್ರ ಉಳಿದಿದ್ದು, ಗ್ರಾಮದ ಜನರಿಗೆ ಅಡ್ಡಾಡಲು ತೊಂದರೆಯಾಗುತ್ತಿದ್ದು, ಮಳೆಗಾಲದಲ್ಲಿ ಸುಮಾರು 500 ಎಕರೆ ಜಮೀನುಗಳ ಮಳೆ ನೀರು ಈ ರಸ್ತೆಯ ಮೇಲೆ ಹರಿದು ಸಂಪೂರ್ಣ ಹಳ್ಳವಾಗಿ ಪರಿವರ್ತನೆಗೊಳ್ಳತ್ತದೆ. ಮಳೆಗಾಲದಲ್ಲಿ ಊರು ತಲುಪುವದು ಕಷ್ಟವಾಗುತ್ತದೆ. ಆದರೆ ಇದರ ಕುರಿತು ಕುಷ್ಟಗಿ ತಹಶೀಲ್ದಾರರಿಗೆ ಗ್ರಾಮಸ್ಥರು ಮನವಿ ಮನವರಿಕೆ ಮಾಡಿ ಮನವಿ ಪತ್ರ ನೀಡಲಾಗಿದೆ. ಸುಮಾರು 20 ದಿನಗಳ ನಂತರ ಮತ್ತೆ ಗ್ರಾಮಸ್ಥರೆಲ್ಲರೂ ಸೇರಿ ತಹಶೀಲ್ದಾರರಿಗೆ ಒತ್ತಾಯಿಸಿದರೂ ಕೂಡ ಯಾವುದೇ ಪ್ರಯೋಜನವಾಗಿಲ್ಲ. ಸರ್ವೆ ಮಾಡದೆ ಇರುವದರಿಂದ ತಹಶಿಲ್ದಾರರಿಗೆ ಒತ್ತುವರಿ ಮಾಡಿದ ರಸ್ತೆಯನ್ನು ತೆರವುಗೊಳಿಸಿ ಗ್ರಾಮಸ್ಥರಿಗೆ ರಸ್ತೆಯ ಅನುಕೂಲ ಕಲ್ಪಿಸಿಕೊಡಲು ಮೇಲಿಂದ ಮೇಲೆ ಗ್ರಾಮಸ್ಥರೆಲ್ಲರೂ ಸೇರಿ ತಹಶಿಲ್ದಾರರಿಗೆ ಬೇಟಿಯಾದರೂ ಯಾವುದೇ ರೀತಿಯ ಜನರಿಗೆ ಸ್ಪಂದಿಸುವ ತೀರ್ಮಾಣ ತೆಗೆದುಕೊಳ್ಳುತ್ತಿಲ್ಲ ಎಂದು ಆರೋಪಿಸಿದರು.
ಆದ್ದರಿಂದ ಒತ್ತುವರಿ ಮಾಡಿದ ಸರ್ವೆ ನಂ 3ನ್ನು ಸರ್ವೆ ಮಾಡಿಸಿ ಕಾನೂನಾತ್ಮಕವಾಗಿ ತೆರವುಗೊಳಿಸಿ ಗ್ರಾಮದ ಜನರಿಗೆ ರಸ್ತೆಯ ಅನುಕೂಲ ಮಾಡಿಕೊಡಬೇಕು ಎಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಸಂಘದ ಜಿಲ್ಲಾಧ್ಯಕ್ಷ ಮೊಹಮ್ಮದ್ ನಜೀರಸಾಬ ಮೂಲಿಮನಿ, ರಾಜಾ ನಾಯಕ, ಮರಿಯಪ್ಪ ಸಾಲೋಣಿ, ಸುಂದರ ಕಾರಟಗಿ, ದೊಡ್ಡ ಬಸಪ್ಪ ಸಜ್ಜಲಗುಡ್ಡ, ಹುಸೆನಪ್ಪ ಮುದೆನೂರ, ನಿಂಗಪ್ಪ ಮಾಸ್ತರ, ಚೆನ್ನೆಗೌಡ, ಬಸವರಾಜ ದೆವದುರ್ಗಾ ಇದ್ದರು.

loading...