ಗೋಕಾನಲ್ಲಿ ಕೈ ಅಭ್ಯರ್ಥಿ ಪ್ರಚಾರಕ್ಕೆ ರಮೇಶ ಬದಲು ಲಖನ್‍ಗೆ ಮಣೆ

0
9

ಹಿರೇಮಠ ಆರ್.ಕೆ

ಬೆಳಗಾವಿ

ಸಮ್ಮಿಶ್ರ ಸರಕಾರದ ವಿರುದ್ದ ಮುನಿಸಿಕೊಂಡು ಸಚಿವ ಸಂಪುಟ ವಿಸ್ತರಣೆಯಲ್ಲಿ ಸಚಿವ ಸ್ಥಾನ ಕಳೆದುಕೊಂಡು ಕಾಂಗ್ರೆಸ್ ಕಾರ್ಯ ಚಟುವಟಿಕೆಯಿಂದ ದೂರ ಉಳಿದು ಬೆಳಗಾವಿ ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಗೊಂದಲ ಸೃಷ್ಠಿಸಿದ್ದ ಮಾಜಿ ಸಚಿವ ರಮೇಶ ಜಾರಕಿಹೊಳಿ ಬದಲಿಗೆ ಅರಣ್ಯ ಸಚಿವ ಸತೀಶ ಜಾರಕಿಹೊಳಿ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ಪರ ಗೋಕಾಕನಲ್ಲಿ ಪ್ರಚಾರ ನಡೆಸಲು ಲಖನ್ ಜಾರಕಿಹೊಳಿಗೆ ಮಣೆ ಹಾಕುವಲ್ಲಿ ಯಶಸ್ವಿಯಾಗಿದ್ದಾರೆ.

ಬೆಳಗಾವಿ ಲೋಕಸಭೆ ಚುನಾವಣೆ ಇದೀಗ ರಂಗೇರಿದೆ. ತಟಸ್ಥವಾಗಿರೋ ಮೂಲಕ ಕಾಂಗ್ರೆಸ್ ಶಾಕ್ ನೀಡಲು ಮುಂದಾಗಿದ್ದ ಮಾಜಿ ಸಚಿವ ರಮೇಶ ಜಾರಕಿಹೊಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಶಾಕ್ ನೀಡಿದ್ದಾರೆ. ಮಾಜಿ ಸಚಿವರ ಸ್ವ ಕ್ಷೇತ್ರ ಗೋಕಾಕನಲ್ಲಿ ಇದೀಗ ಮುಖಭಂಗವಾಗಿದೆ.

ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮಾಜಿ ಸಚಿವ ರಮೇಶ ಜಾರಕಿಹೊಳಿ ತಲೆನೋವಾಗಿದ್ದರು. ಆದರೇ ರಮೇಶ ಜಾರಕಿಹೊಳಿ ಪರ್ಯಾಯವಾಗಿ ಮತ್ತೊಬ್ಬ ಸಹೋದರನನ್ನು ಸೆಳೆಯುವ ಮೂಲಕ ಶಾಕ್ ನೀಡಿದ್ದಾರೆ. ಸಚಿವ ಸತೀಶ ಜಾರಕಿಹೊಳಿ ಇತ್ತೀಚೆಗೆ ಗೋಕಾಕ್ ನಗರದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆ ನಡೆಯಿತು. ಸಭೆಯಲ್ಲಿ ಸಚಿವ ಸತೀಶ್ ಜಾರಕಿಹೊಳಿ ಜತೆಗೆ ಸಹೋದರ ಲಖನ್ ಜಾರಿಹೊಳಿ ಪಾಲ್ಗೊಂಡಿದ್ದರು.

ಕಳೆದ ಒಂದು ವಾರದಿಂದ ಲಖನ್ ಜಾರಕಿಹೊಳಿ ಸೆಳೆಯಲು ಸತೀಶ್ ಪ್ಲ್ಯಾನ್ ಮಾಡಿದ್ದರು. ಇದು ಕೊನೆಗು ಯಶಸ್ವಿಯಾಗಿದ್ದು, ಗೋಕಾಕ್‍ನಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಸಚಿವ ಸತೀಶ್ ಜಾರಕಿಹೊಳಿ, ಲಖನ್ ಜಾರಕಿಹೊಳಿ ಪಾಲ್ಗೊಂಡಿದ್ದರು. ಈ ಮೂಲಕ ಗೋಕಾಕ್ ಕ್ಷೇತ್ರದಲ್ಲಿ ಕಾಂಗ್ರೆಸ್ ಪರ ಪ್ರಚಾರ ನಡೆಸದೆ ಪಕ್ಷದಿಂದ ಅಂತರಕಾಯ್ದುಕೊಂಡ ಮಾಜಿ ಸಚಿವ ರಮೇಶ ಜಾರಕಿಹೊಳಿಗೆ ಬಿಗ್ ಶಾಕ್ ನೀಡಿದ್ದಾರೆ.

ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಉಂಟಾಗಿರೋ ಗೊಂದಲಕ್ಕೆ ತೆರೆ ಬಿದ್ದಿದೆ. ಇನ್ನೂ ಮಾಜಿ ಸಚಿವ ರಮೇಶ ಜಾರಕಿಹೊಳಿ ಬಿಜೆಪಿ ಬೆಂಬಲಿಸಲಿದ್ದಾರೆ ಎಂದು ಆಸೆಗಣ್ಣಿನಿಂದ ಕಾದು ಕುಳಿತಿದ್ದ ಬಿಜೆಪಿಗೆ ನಿರಾಶೆಯಾಗಿರೋ ಸತ್ಯ. ಆದರೇ ಚುನಾವಣೆಯಲ್ಲಿ ಲಖನ್ ಜಾರಕಿಹೊಳಿ ಕಾಂಗ್ರೆಸ್ ಎಷ್ಟುಲಾಭ ತಂದು ಕೊಡಲಿದ್ದಾರೆ ಎಂಬುದು ಕಾದು ನೋಡಬೇಕು.

—————

ಮಾಜಿ ಸಚಿವ ರಮೇಶ ಬಿಜೆಪಿಗೆ ?

ಸಮ್ಮಿಶ್ರ ಸರಕಾರದ ವಿರುದ್ದ ಬಂಡಾಯದ ಬಾವುಟ ಹಾರಿಸಿರುವ ಮಾಜಿ ಸಚಿವ ರಮೇಶ ಜಾರಕಿಹೊಳಿ ಈ ಹಿಂದೆಯೇ ಬಿಜೆಪಿಗೆ ಸೇರ್ಪಡೆಗೊಳ್ಳಲಿದ್ದಾರೆ ಎನ್ನುವ ಚರ್ಚೆಗಳು ರಾಜ್ಯ ರಾಜಕಾರಣದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಆದರೆ ಕೊನೆಯ ಗಳಿಗೆಯಲ್ಲಿ ಸಿಎಂ ಕುಮಾರಸ್ವಾಮಿ ನೇತೃತ್ವದಲ್ಲಿ ಮಂಡಿಸಿದ ರಾಜ್ಯ ಬಜೆಟ್ ಅಧಿವೇಶನಕ್ಕೆ ಹಾಜರಾಗಿ ಕಾಂಗ್ರೆಸ್‍ನಲ್ಲಿಯೇ ಇರುತ್ತೇನೆ ಎಂದು ಹೇಳಿದ್ದ ರಮೇಶ ಜಾರಕಿಹೊಳಿ ಬೆಳಗಾವಿ ಲೋಕಸಭಾ ಚುನಾವಣೆಯಲ್ಲಿ ಎಲ್ಲಿಯೂ ಕಾಣಿಸಿಕೊಳ್ಳದೆ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಗೊಂದಲ ಮೂಡಿಸಿದ್ದರು. ಲೋಕಸಭಾ ಚುನಾವಣೆ ಬೆರಳಣಿಕೆಯ ದಿನಷ್ಟು ಉಳಿದಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಗೋಕಾಕನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ನಡೆಸಲು ಇನ್ನೊರ್ವ ಸಹೋದರ ಲಖನ್ ಜಾರಕಿಹೊಳಿ ಅವರಿಗೆ ವಹಿಸಿರುವುದು ರಮೇಶ ಬಿಜೆಪಿಗೆ ಸೇರ್ಪಡೆಗೊಳ್ಳಲಿದ್ದಾರೆ ಎನ್ನುವ ಮಾತಿಗೆ ಪುಷ್ಠಿ ನೀಡುವಂತೆ ಮಾಡಿದ್ದು ಸತ್ಯ.

—————–

ಬೆಂಗಳೂರಿನಲ್ಲಿ ರಮೇಶ ಜಾರಕಿಹೊಳಿ ಇದ್ದಾರೆ ಅವರನ್ನು ಮನವೊಲಿಸುವ ಯತ್ನ ಮಾಡುತ್ತೇವೆ. ಗೋಕಾಕ್‍ನಲ್ಲಿ ಸತೀಶ್, ರಮೇಶ ಹಾಗೂ ನನ್ನ ನೇತೃತ್ವದಲ್ಲಿ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲಲ್ಲಿದೆ. ಯಮಕಮನರಡಿ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ಕೇಳಿದ್ದು ನಿಜ. ನನಗೆ ಯಾವುದೇ ಸ್ಥಾನಮಾನದ ಭರವಸೆ ನೀಡಿಲ್ಲ. ಗೋಕಾಕ್ ಕ್ಷೇತ್ರದಲ್ಲಿ ನಾನೇ ಶಾಸಕರಿದ್ದರಿದ್ದಂತೆ.

*ಲಖನ್ ಜಾರಕಿಹೊಳಿ, ಕಾಂಗ್ರೆಸ್ ಮುಖಂಡ

———————–

ಗೋಕಾಕ್ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಪರ ಪ್ರಚಾರ ಮಾಡೋ ಜವಾಬ್ದಾರಿಯನ್ನು ಲಖನ್ ಜಾರಕಿಹೊಳಿಗೆ ವಹಿಸಲಾಗಿದೆ. ಮುಂದೆ ಲಖನ್ ಜಾರಕಿಹೊಳಿಗೆ ಪಕ್ಷದಲ್ಲಿ ಅವಕಾಶ ಸಿಗಬಹುದು. ಯಮಕನಮರಡಿ ಕ್ಷೇತ್ರ ವಿಚಾರವಾಗಿ ಲಖನ್ ಜಾರಕಿಹೊಳಿ ಜತೆಗೆ ವೈಮಸ್ಸು ಉಂಟಾಗಿತ್ತು. ಅದೆಲ್ಲ ಇತ್ಯರ್ಥವಾಗಿದ್ದು, ಈ ಬಾರೀ ಕಾಂಗ್ರೆಸ್ ಪರವಾಗಿ ಲಖನ್ ಕೆಲಸ ಮಾಡ್ತಾರೆ. ಜತೆಗೆ ರಮೇಶ ಜಾರಕಿಹೊಳಿ ಮನವೊಲಿಸುವ ಯತ್ನವನ್ನು ಸಹ ಲಖನ್ ಮಾಡಿ ಯತ್ನ ಮಾಡಲಿದ್ದಾರೆ.

*ಸತೀಶ ಜಾರಕಿಹೊಳಿ, ಜಿಲ್ಲಾ ಉಸ್ತುವಾರಿ ಸಚಿವ

loading...