ಗೋವು ಹತ್ಯೆ ತಡೆಯುವಂತೆ ಮನವಿ

0
30

ಕನ್ನಡಮ್ಮ ಸುದ್ದಿ-ಧಾರವಾಡ: ಗೋವು ಹತ್ಯೆತಡೆಯುವ ನೀಟ್ಟಿನಲ್ಲಿ ಜಿಲ್ಲಾಧಿಕಾರಿಗಳಿಗೆ ಗೋವು ಸಂರಕ್ಷಣಾ ಪ್ರಕೋಷ್ಠ ಸಹ ಸಂಚಾಲಕ ಶಕ್ತಿ ಹೀರೆಮಠ ನೇತ್ರತ್ವದಲ್ಲಿ ಮನವಿ ಅರ್ಪಿಸಲಾಯಿತು.
ಸುಪ್ರೀಂ ಕೋರ್ಟ ಆದೇಶದ ಮೇರೆಗೆ ರಾಜ್ಯ ಸರ್ಕಾರವು ಸಹ ಸಹಮತ ನೀಡಿದ್ದು, ರಾಜ್ಯ ಸರ್ಕಾರ ತನ್ನ ಆದೇಶದಲ್ಲಿ ರಾಜ್ಯದಲ್ಲಿ ಯಾವ ಕಾರಣಕೂ ಯಾವುದೆ ಜಾತಿಯ ಸಂಪ್ರದಾಯಕ್ಕೆ ಗೋವುಗಳನ್ನು ಕೊಲ್ಲುವುದಾಗಲಿ, ಹಿಂಸೆ ನೀಡುವುದಾಗಲಿ, ಕಾನೂನಿನ ಪ್ರಕಾರ ಪಶುಪ್ರಾಣಿ ಸಂರಕ್ಷಣೆ ಕಾಯ್ದೆಯಲ್ಲಿ ಆಸ್ಪದವಿಲ್ಲ. ಸುಪ್ರೀಂ ಕೋರ್ಟಿನ ಆದೇಶ ಪಾಲನೆಗೆ ರಾಜ್ಯ ಸರ್ಕಾರ ಭದ್ದವಾಗಿದ್ದು, ಸದರಿ ಆದೇಶದ ಅನ್ವಯವಾಗಿ ರಾಜ್ಯದ ಎಲ್ಲ ಜಿಲ್ಲಾಡಳಿತಗಳಿಗೆ ಆದೇಶ ನೀಡಿ ಅದನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಲು ನಿರ್ದೇಶನ ಜಾರಿ ಮಾಡಲು ಆದೇಶಿಸಬೇಕೆಂದು ಮನವಿ ಸಲ್ಲಿಸಿದೆ.
ಸಂಜಯ ಕಪಟಕರ, ಯಲ್ಲಪ್ಪ ಅರವಾಳದ, ಸುರೇಶ ಬೆದರೆ, ಶಕ್ತಿ ಹೀರೆಮಠ, ಮೋಹನ ರಾಮದುರ್ಗ, ಮಂಜು ನಡಟ್ಟಿ, ನಿಂಗನಗೌಡ ಪಾಟೀಲ, ಅಕ್ಷೇಯ ಕುಲ್ಕರ್ಣಿ, ಶ್ರೀನಿವಾಸ ಪಾಟೀಲ, ಕಾರ್ತಿಕ ಪೂಜಾರ, ಮೂರಗೇಶ ಗೋಂದಳಿ, ಸಂತೋಷ ಪಟ್ಟಣಶಟ್ಟಿ, ಶ್ರೀಕಾಂತ ವಾಲಿ, ಪ್ರೀತೆಶ ಜಾದವ ಉಪಸ್ಥಿತರಿದ್ದರು.

loading...