ಗೌರಿ ಲಂಕೇಶರವರ ಹತ್ಯೆ ಮಾನವೀಯತೆಯ ಕಗ್ಗೊಲೆ: ಡಾ.ಎಸ್.ವಿ ಡಾಣಿ

0
51

ಕುಷ್ಟಗಿ: ಇತ್ತೀಚೆಗೆ ಖ್ಯಾತ ಪತ್ರಕರ್ತೆ ಹಾಗೂ ಬರಹಗಾರ್ತಿ ದಿ|| ಗೌರಿ ಲಂಕೇಶ ರವರನ್ನು ಹಾಡುಹಗಲೇ ಕಗ್ಗೊಲೆ ಮಾಡಿರುವುದು ತೀರಾ ಖಂಡನೀಯ ವಿಷಯವಾಗಿದ್ದು ಇದು ಮಾನವೀಯತೆಯ ಕಗ್ಗೊಲೆಯಾಗಿದೆ ಎಂದು ಹಿರೇವಂಕಲಕುಂಟ ಗ್ರಾಮದ ಪ್ರಥಮದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ|| ಎಸ್.ವಿ ಡಾಣಿ ಹೇಳಿದರು.
ಪಟ್ಟಣದ ವಿದ್ಯಾನಗರ ಶಾಲೆಯಲ್ಲಿ ಸಮುದಾಯ ಸಂಘಟನೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಗೌರಿ ಲಂಕೇಶರವರಿಗೆ ಶ್ರದ್ಧಾಂಜಲಿ ಸಭೆಯಲ್ಲಿ ಅವರು ಭಾಗವಹಿಸಿ ಮಾತನಾಡಿದರು. ಪುರುಷ ಪ್ರಧಾನ ಸಮಾಜದಲ್ಲಿ ಒಬ್ಬ ಮಹಿಳೆ ತನ್ನ ದಿಟ್ಟತನದಿಂದ ಕೇವಲ ಬರಹಗಳ ಹಾಗೂ ಲೇಖನಿಯ ಮೂಲಕ ಸಮಾಜವನ್ನು ಎಚ್ಚರಗೊಳಿಸುವ ಮತ್ತು ಸಾಮಾಜಿಕ ಬದಲಾವಣೆಯನ್ನು ಮಾಡುವ ಮೂಲಕ ಇಡೀ ಪತ್ರಿಕೋಧ್ಯಮದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದರವರು ಗೌರಿ ಲಂಕೇಶರವರು. ಅವರ ತಂದೆಯ ಮಾರ್ಗದರ್ಶನದಲ್ಲಿ ಉನ್ನತ ವ್ಯಾಸಂಗ ಮಾಡಿದ್ದರೂ ಸಹ ಇಡೀ ಸಮಾಜವನ್ನು ತಿದ್ದುವ ಹಾಗೂ ರಾಜಕೀಯ ಅವ್ಯವಸ್ಥೆ ವಿರುದ್ಧ ಹೋರಾಟಕ್ಕೆ ಸಜ್ಜಾಗಿ ಪುಂಡರ ಎದೆ ನಡುಗಿಸಿದ ಧೀರ ಮಹಿಳೆ ಎಂದರೆ ತಪ್ಪಾಗಲಾರದು. ಅಂಥವನ್ನು ದಾರುಣವಾಗಿ ಹತ್ಯೆಗೈಯ್ಯುವುದರ ಮೂಲಕ ನಾವು ಕಳೆದುಕೊಂಡಿರುವುದು ತುಂಬಾ ನೋವಿನ ಸಂಗತಿಯಾಗಿದೆ ಎಂದು ನುಡಿದರು.
ಇದೇ ವೇಳೆ ಅಡಿವೆಪ್ಪ ಕುಷ್ಟಗಿ, ಎಚ್,ವೈ. ಈಟಿಯವರ, ತಾಜುದ್ದೀನ ದಳಪತಿ, ಶರಣಪ್ಪ ವಡಿಗೇರಿ ಮಾತನಾಡಿದರು.
ಈ ಸಂದರ್ಭದಲ್ಲಿ ಸಮುದಾಯ ಸಂಘಟನೆಯ ತಾಲೂಕಾಧ್ಯಕ್ಷ ಮೋಹನಲಾಲ್ ಜೈನ್, ಎಸ್. ಎಂ. ಗೋನಾಳ, ಶಾಲೆಯ ಮುಖ್ಯೋಪಾಧ್ಯಯ ಸಿದ್ರಾಮಪ್ಪ ಅಮರಾವತಿ, ಶಿವಾಜಿ ಹಡಪದ, ಮಾನಪ್ಪ ಕಮ್ಮಾರ, ಜೀವನಸಾಬ ಬಿನ್ನಾಳ, ಪರಸಪ್ಪ ಪಂಚಮ, ಮುಖೇಶ ನಿಲೋಗಲ್, ಮಲ್ಲಪ್ಪ ಕುದರಿ, ಕೊಳ್ಳಪ್ಪ ಬೂದ ಸೇರಿದಂತೆ ಇತರರು ಇದ್ದರು. ಬಸವರಾಜ ಉಪ್ಪಲದಿನ್ನಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

 

loading...