ಗ್ರಾಮಕ್ಕೆ ಮೂಲಸೌಕರ್ಯ ಕಲ್ಪಸಿದರೆ ಮಾತ್ರ ಗ್ರಾಮ ಅಭಿವೃದ್ದಿಯಾದಂತೆ: ಪಿಡಿಓ

0
44

ಗ್ರಾಮಕ್ಕೆ ಮೂಲಸೌಕರ್ಯ ಕಲ್ಪಸಿದರೆ ಮಾತ್ರ ಗ್ರಾಮ ಅಭಿವೃದ್ದಿಯಾದಂತೆ: ಪಿಡಿಓ

ಕನ್ನಡಮ್ಮ ಸುದ್ದಿ-ಬೈಲಹೊಂಗಲ: ಸಮೀಪದ ಹೊಸೂರ ಗ್ರಾಮದಲ್ಲಿ ಶುದ್ದ ನೀರಿನ ಸೌಕರ್ಯ, ಬೀದಿ ದೀಪ, ಸ್ವಚ್ಛತೆ, ನೈರ್ಮಲತೆ ಹಾಗೂ ರಸ್ತೆಗಳು ಸುಧಾರಿಸಿದಾಗ ಮಾತ್ರ ಗ್ರಾಮಗಳ ಅಭಿವೃದ್ದಿ ಸಾಧ್ಯವಾಗಲಿದೆ ಎಂದು ಪಿಡಿಓ ಮಲ್ಲಪ್ಪ ಹಾರುಗೊಪ್ಪ ಹೇಳಿದರು.
ನರೇಗಾ ಯೋಜನೆಯಡಿ ಸುಮಾರು ರೂ ೨.೯೦ಲಕ್ಷಗಳಲ್ಲಿ ಗ್ರಾಮದ ಕಾದರವಳ್ಳಿ ಆಶ್ರಮದ ಮುಂದಿನ ರಸ್ತೆಯ ಕಾಂಕ್ರಿÃಟ ಹಾಕುವ ಕಾಮಗಾರಿ ವಿಕ್ಷಿÃಸಿ ಮಾತನಾಡಿ, ಗ್ರಾಮದಲ್ಲಿಯ ರಸ್ತೆಗಳನ್ನು ಸುಧಾರಿಸಲು ಕೇವಲ ಜನಪ್ರತಿನಿಧಿಗಳಿಗೆ ಮತ್ತು ಅಧಿಕಾರಿಗಳಿಗೆ ಮತ್ರ ಸಾಧ್ಯವಾಗದೆ ಗ್ರಾಮಸ್ಥರ ಸಹಕಾರ ಅತ್ಯಂತ ಮಹತ್ವದ್ದಾಗಿದೆ. ರಸ್ತೆಗಳ ಮೇಲೆ ಕಸ ಕಡ್ಡಿ ಚೆಲ್ಲದೆ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಇಲ್ಲವಾದಲ್ಲಿ ಸಾಂಕ್ರಾಮಿಕ ರೋಗಗಳಿಗೆ ತುತ್ತಾಗಿ ಗ್ರಾಮಸ್ಥರಲ್ಲಿ ರೋಗ ರುಜಿನಿಗಳು ಹುಟ್ಟಿಕೊಂಡು ಆರೋಗ್ಯ ಹದಗೆಡುತ್ತದೆ. ರಸ್ತೆಗಳ ಅತಿಕ್ರಮಣಕ್ಕೆ ಗ್ರಾ.ಪಂ.ದಿಂದ ಕಡಿವಾಣ ಹಾಕಲಾಗುವದು. ಗ್ರಾಮದ ಇನ್ನು ಅನೇಕ ರಸ್ತೆಗಳು ದುರಸ್ತಿಯಾಗಲಿದ್ದು ಬರುವ ದಿನಗಳಲ್ಲಿ ನರೇಗಾ ಯೋಜನೆಯಲ್ಲಿ ದುರಸ್ತಿ ಕಾರ್ಯ ಕೈಗೆತ್ತಿಕೊಳ್ಳಲಾಗುವದು ಎಂದರು. ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷೆ ಪಾರ್ವತೆವ್ವ ಮೂಗಬಸವ ಕಾಮಗಾರಿಗೆ ಚಾಲನೆ ನೀಡಿದರು. ಎಪಿಎಂಸಿ ಸದಸ್ಯ ಫಕೀರಗೌಡ ಸಿದ್ದನಗೌಡರ, ಗ್ರಾಪಂ ಸದಸ್ಯರಾದ ಸೋಮಲಿಂಗ ಮೆಳ್ಳಿಕೆರಿ, ಮೋಹನ ವಕ್ಕುಂದ, ಸರೋಜಿನಿ ಬಾಳೇಕುಂದರಗಿ, ಬಸವಾಣೆಮ್ಮ ಚಿಕ್ಕೊಪ್ಪ, ಸುತಗಟ್ಟಿ, ಶೋಭಾ ಗಡ್ಡಿ, ಮುನೀರ ಶೇಖ, ದಿಲಾವಾರ ಧುಪದಾಳ, ಮಲ್ಲಪ್ಪ ಯರಡಾಲ, ಬಸವರಾಜ ವಿವೇಕಿ, ರಾಯಪ್ಪ ಗುಮಗೋಳ, ವಿರಣ್ಣ ಸಂಪಗಾಂವ ಇದ್ದರು.

loading...