ಗ್ರಾಮೀಣ ಕ್ರೀಡೆ ಉಳಿವಿಗೆ ಯುವಕರು ಮುಂದಾಗಲಿ: ಯಲ್ಲಪ್ಪ

0
25

ಕನ್ನಡಮ್ಮ ಸುದ್ದಿ-ಯಲಬುರ್ಗಾ: ವಿದೇಶಿ ಕ್ರೀಡೆಗಳ ಭರಾಟೆಯಲ್ಲಿ ಜಾನಪದ ಸೊಗಡಿನ ದೇಶಿಯ ಕ್ರೀಡೆಗಳು ಕಣ್ಮರೆಯಾಗುತ್ತಿದ್ದು, ಶಾರೀರಿಕ ಮತ್ತು ಮಾನಸಿಕ ಸ್ವಾಸ್ಥ್ಯಕ್ಕೆ ಸಹಕಾರಿಯಾಗಿರುವ ಗ್ರಾಮೀಣ ಕ್ರೀಡೆ ಉಳಿವಿಗೆ ಯುವ ಸಮೂಹ ಮುಂದಾಗಬೇಕಿದೆ ಎಂದು ಎಪಿಎಂಸಿ ಸದಸ್ಯ ಯಲ್ಲಪ್ಪ ಹಳ್ಳಿಗುಡಿ ಹೇಳಿದರು.
ತಾಲೂಕಿನ ವಜ್ರಬಂಡಿ ಗ್ರಾಮದ ಶ್ರೀಮಳಿಮಲ್ಲೇಶ್ವರ ಜಾತ್ರಾ ನಿಮಿಣಜಿಣ ಶನಿವಾರ ಹಮ್ಮಿಕೊಂಡಿದ್ದ ಯುವಕರ ಮುಂಗೈ ಪಂದ್ಯಾವಳಿ ಉದ್ಘಾಟಿಸಿ ಅವರು ಮಾತನಾಡಿದರು.ಕ್ರೀಡೆಯಲ್ಲಿ ಭಾಗವಹಿಸಿದ ಯುವಕರು ಯಾವುದೇ ವೈಮನಸ್ಸು ಮಾಡಿಕೊಳ್ಳಬಾರದು ಸೋಲು,ಗೆಲುವು ಸಹಜವಾಗಿವೆ ಎರಡನ್ನು ಸಮಾನವಾಗಿ ಸ್ವೀಕರಿಸಬೇಕು. ಯುವ ಸಮೂಹ ಕ್ರಿಕೆಟ್‍ಗೆ ನೀಡುತ್ತಿರುವ ಪ್ರಾಧಾನ್ಯತೆಯನ್ನು ದೇಶಿಯ ಸೊಗಡಿನ ಕಬ್ಬಡ್ಡಿ, ಭಾರ ಎತ್ತುವ ಸ್ಪರ್ಧೆ, ಮುಂಗೈ ಆಟ, ಖೋ ಖೋ ಕ್ರೀಡೆಗಳಿಗೆ ನೀಡುತ್ತಿಲ್ಲ. ಪರಿಣಾಮ ಗ್ರಾಮೀಣ ಪ್ರದೇಶದ ಕ್ರೀಡೆಗಳು ಅಳವಿನ ಅಂಚಿಗೆ ಬಂದು ನಿಂತಿವೆ. ಇಂತಹ ಕ್ರೀಡೆಗಳಿಗೆ ಸೂಕ್ತ ಉತ್ತೇಜನ ದೊರಕಿಸಿ ಕೊಡುವಲ್ಲಿ ಕ್ರೀಡಾ ಇಲಾಖೆ ಹಾಗೂ ವಿವಿಧ ಸಂಘ ಸಂಸ್ಥೆಗಳು ಒತ್ತು ನೀಡಬೇಕಿದೆ. ಗ್ರಾಮೀಣ ಪ್ರದೇಶದಲ್ಲಿ ಸೌಹಾರ್ದ ವಾತವರಣ ನೆಲೆಯೂರಬೇಕಾಗಿದೆ. ಯುವಕರು ಪ್ರೀತಿ,ವಿಶ್ವಾಸದಿಂದ ಬದುಕು ಕಟ್ಟಿಕೊಳ್ಳಬೇಕಿದೆ ಎಂದರು.
ಪೊಲೀಸ್ ಇಲಾಖೆಯ ಸಣ್ಣಬಸಪ್ಪ ಹೂಗಾರ್ ಮಾತನಾಡಿ, ಯುವಕರಲ್ಲಿ ಶಿಸ್ತು, ಶ್ರದ್ಧೆುಕ ಪ್ರಜ್ಞೆ ಕಣ್ಮರೆಯಾಗುತ್ತಿದೆ. ಮಾನವೀಯ ಮೌಲ್ಯಗಳ ಮೂಲಕ ಯುವಕರನ್ನು ಸರಿದಾರಿಗೆ ತರುವ ಕೆಲಸ ನಡೆಯಬೇಕಿದೆ ಎಂದರು. ಗ್ರಾಪಂ ಮಾಜಿ ಅಧ್ಯಕ್ಷ ದೇವಪ್ಪ ಪೂಜಾರ್, ಗ್ರಾಪಂ ಸದಸ್ಯ ಗುಂಡನಗೌಡ ಮಾಲಿಪಾಟೀಲ, ಹನುಮಪ್ಪ ಗುರಿಕಾರ್, ರೇವಣೆಪ್ಪ ಮ್ಯಾಗೇರಿ, ಹನುಮಂತಪ್ಪ ಉಪ್ಪಾರ, ಹಂಪಯ್ಯಸ್ವಾಮಿ, ಚಂದ್ರಯ್ಯ ಹೊಸಮಠ, ಹನುಮಗೌಡ ಸಾಲಭಾವಿ, ಶರಣು ಕೋವಿ, ಇತರರು ಇದ್ದರು. ಗಾಣಧಾಳ, ಗಂಗಾವತಿ, ವಣಬಳ್ಳಾರಿ, ಲಿಂಗನಬಂಡಿ, ಹುಲೇಗುಡ್ಡ, ಕೋನಸಾಗರ, ಗುತ್ತೂರು, ಮುರಡಿ ಸೇರಿದಂತೆ ಇಪ್ಪತ್ತಕ್ಕೂ ಹೆಚ್ಚು ಗ್ರಾಮಗಳ ಕ್ರೀಡಾಪಟುಗಳು ಭಾಗವಹಿಸಿದ್ದರು. ವಿಜೇತರಿಗೆ ಬಹುಮಾನ ವಿತರಿಸಲಾಯಿತು.

loading...