ಗ್ರಾಮೀಣ ಪ್ರತಿಭೆಗಳನ್ನು ಪ್ರೋತ್ಸಾಹಿ: ಹಲಸಗಿ

0
60

ಕಿತ್ತೂರು: ಗ್ರಾಮೀಣ ಪ್ರತಿಭೆಗಳನ್ನು ಪ್ರೋತ್ಸಾಹಿಸಲು ಮತ್ತು ಅವರಲ್ಲಿ ಇರುವ ಸೂಕ್ತ ಪ್ರತಿಭೆಯನ್ನು ಹೊರ ತರಲು ಇಂತಹ ಸಂಸ್ಥೆಗಳು ಮಕ್ಕಳ ಲೋಕದ ಸಂಜೀವಿನಿಯಾಗಿ ಕಾರ್ಯ ಮಾಡುವುದರೊಂದಿಗೆ ಕಲೆ ಕಲಾವಿದರನ್ನು ಉಳಿಸುವ ಉತ್ತಮ ಕಾರ್ಯ ಮಾಡುತ್ತಿವೆ ಎಂದು ಬಾಲ ವಿಕಾಸ ಆಕಾಡೆಮಿಯ ಸದಸ್ಯ ಶೇಖರ ಹಲಸಗಿ ಹೇಳಿದರು,
ಸೋಮವಾರ ಹೊಸಕಾದರವಳ್ಳಿ ಪ್ರೌಢ ಶಾಲಾ ಸಭಾಂಗಣದಲ್ಲಿ ನಡೆದ ಬೆಂಗಳೂರು ರಾಜ್ಯ ಬಾಲ ಭವನ ಸಂಸ್ಥೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಬೈಲಹೊಂಗಲ ಶಿಶು ಅಭಿವೃದ್ಧಿ ಯೋಜನೆ, ಕ್ಷೇತ್ರ ಶಿಕ್ಷಣಾಧಿಕಾರಿ ಕಾರ್ಯಾಲಯ ಹಾಗೂ ಕಾದರವಳ್ಳಿ ಸರಕಾರಿ ಪ್ರೌಢ ಶಾಲೆ ಸಂಯುಕ್ತ ಆಶ್ರಯದಲ್ಲಿ ಪ್ರಸಕ್ತಸಾಲಿನ ತಾಲೂಕಾ ಮಟ್ಟದ ಕಲಾಶ್ರೀ ಪುರಸ್ಕಾರಕ್ಕಾಗಿ ಪ್ರತಿಭೆಗಳ ಆಯ್ಕೆಯ ಶಿಬಿರದಲ್ಲಿ ಮುಖ್ಯ ಅಥಿತಿಗಳಾಗಿ ಆಗಮಿಸಿ ಮಾತನಾಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ಮುಖ್ಯೋಪಾಧ್ಯಾಯ ಎಸ್‌ ಎಸ್‌. ನೂಲಿನ ವಹಿಸಿದ್ದರು. ಬೈಲಹೊಂಗಲ ಸಿಡಿಪಿಒ ಎ ಜಿ. ಮರಿಕಟ್ಟಿ ಜ್ಯೋತಿ ಪ್ರಜ್ವಲನ ಮಾಡುವ ಮೂಲಕ ಕಲಾಶ್ರೀ ಶಿಬಿರಕ್ಕೆ ಚಾಲನೆ ನೀಡಿದರು.
ಜಾನಪದ ನೃತ್ಯ, ವಾಧ್ಯ ಸಂಗೀತ, ಯೋಗ ನ್ರತ್ಯ ಚಿತ್ರ ಕಲೆ, ಪ್ರಬಂಧ ಕಾದರವಳ್ಳಿ ಪ್ರೌಢ ಶಾಲಾ ವಿದ್ಯಾರ್ಥಿಗಳು ಪ್ರಥಮ ಸ್ಥಾನ, ವಿಜ್ಞಾನ ಮಾದರಿ ತಯಾರಿಕೆ, ಭರತನಾಟ್ಯ, ಭಾವಗೀತೆಯಲ್ಲಿ ದೇವರಶಿಗಿಹಳ್ಳಿ ಪ್ರೌಢ ಶಾಲಾ ವಿದ್ಯಾರ್ಥಿಗಳು ಪ್ರಥಮ, ಕ್ಲೇ ಮಾಡ್ಲಿಂಗ್‌ ಅಂಬಡಗಟ್ಟಿ ಪ್ರಥಮ ಸ್ಥಾನ, ಜಾನಪದ ಗೀತೆಯಲ್ಲಿ ತುರಮರಿ ಪ್ರೌಢ ಶಾಲೆ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ನಿರ್ಣಾಯಕರಾಗಿ ಎ ಎಸ್‌. ಬಡಿಗೇರ, ದೀಪಾ ಚಂಗೋಲಿ, ಆರ್‌ ಎಸ್‌. ಪಾಟೀಲ, ಅರುಣಾ ಕಗ್ಗೋಡಿ, ಲಕ್ಷ್ಮೀ ಸಂಬರಗಿ, ಈರನಗೌಡ ಪಾಟೀಲ, ಎಸ್‌.ಎ. ಲೋಹಾನಿ ಕಾರ್ಯ ನಿರ್ವಹಿಸಿದರು.
ಶಿಬಿರದಲ್ಲಿ ಎಂ ಕೆ. ಹುಬ್ಬಳ್ಳಿ, ತುರಮರಿ, ಹುಣಶಿಕಟ್ಟಿ, ಕಾದರವಳ್ಳಿ, ದೇವರಶೀಗಿಹಳ್ಳಿ, ಹುಲಿಕಟ್ಟಿ, ಅಂಬಡಗಟ್ಟಿ, ವೀರಾಪೂರ, ತಾಲೂಕಾ ವ್ಯಾಪ್ತಿ ಪ್ರೌಢ ಶಾಲೆ ವಿದ್ಯಾರ್ಥಿಗಳು, ಶಿಕ್ಷಕರು, ಅಂಗನವಾಡಿ ಕಾರ್ಯಕರ್ತೆಯರು ಪಾಲ್ಗೊಂಡಿದರು.
ಶಿಶು ಅಭಿವೃದ್ಧಿ ಇಲಾಖೆ ಮೇಲ್ವಿಚಾರಕರಾದ ಶಿಲ್ಪಾ ಗಂಗೊಳಿ ಸ್ವಾಗತಿಸಿದರು. ಗಿರಿಜಾ ಶೀಲಯ್ಯನವರಮಠ ವಂದಿಸಿದರು.

loading...