ಗ್ರಾಹಕರ ಹಣ ವಂಚನೆ ಪ್ರಕರಣ ತನಿಖೆ ಚುರುಕು: ಆನಂದ ಅಪ್ಪುಗೋಳಗೆ ಸಿಐಡಿ ನೋಟಿಸ್

0
13

ಗ್ರಾಹಕರ ಹಣ ವಂಚನೆ ಪ್ರಕರಣ ತನಿಖೆ ಚುರುಕು: ಆನಂದ ಅಪ್ಪುಗೋಳಗೆ ಸಿಐಡಿ ನೋಟಿಸ್

ಕನ್ನಡಮ್ಮ ಸುದ್ದಿ-ಬೆಳಗಾವಿ: ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ಕೊ ಆಪರೇಟಿವ್ ಸೊಸೈಟಿ ಅದ್ಯಕ್ಷ ಆನಂದ ಅಪ್ಪುಗೋಳ ಬ್ಯಾಂಕ್ ನಲ್ಲಿಟ್ಟದ ಠೇವಣ ಹಣ ವಂಚನೆ ಪ್ರಕರಣ ಚುರುಕುಗೊಂಡಿದೆ .ಪ್ರಕರಣ ಸಿಐಡಿ ಅಧಿಕಾರಿಗಳು ಕಳೆದ ನಾಲ್ಕು ದಿನದಿಂದ ಬೆಳಗಾವಿಯಲ್ಲಿ ಬೀಡುಬಿಟ್ಟಿದ್ದು,ತನಿಖೆ ವಿಚಾರಣೆ ಜೊರು ಮಾಡಿದ್ದಾರೆ .

ಈ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ಬ್ಯಾಂಕಿನ ಅದ್ಯಕ್ಷ ಆನಂದ ಅಪ್ಪುಗೋಳ ಸಿಐಡಿ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ ,ಆದರೆ ಆನಂದ ಅಪ್ಪುಗೋಳ ಅನಾರೋಗದ ಹಿನ್ನೆಲೆ ಅವರ ಪರವಾಗಿ ಅವರ ವಕೀಲರು ಸಿಐಡಿ ಅಧಿಕಾರಿಗಳಿಗೆ ಭೇಟಿಯಾಗಿ ವಿಚಾರಣೆ ಬೆಂಗಳೂರು ಕಚೇರಿಗೆ ಬರುವುದಾಗಿ ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ .

ಠೇವಣ ಹಣ ಹಿಂದುರಿಗಿಸದ ಆನಂದ ಅಪ್ಪುಗೋಳ ಮೇಲೆ ವಂಚನೆಗೆ ಒಳಗಾದ ಸುಮಾರು ಮೂನ್ನೂರುಕ್ಕೂ ಅಧಿಕ ಗ್ರಾಹಕರು ನಗರ ಪೋಲಿಸ ಆಯುಕ್ತರ ಕಚೇರಿಯಲ್ಲಿ ದೂರು ಸ್ವೀಕರಿಸಿದ ಬಗ್ಗೆ ಸಿಐಡಿ ಅಧಿಕಾರಿಗಳು ಪ್ರಕರಣ ಮಾಹಿತಿ ಕಲೆ ಹಾಕುತ್ತಿದ್ದಾರೆ .

loading...