ಚಂದನ್ ಶೆಟ್ಟಿಗೆ ಬಿಗ್ ರಿಲೀಫ್

0
23

ಬೆಂಗಳೂರು: ತಮ್ಮ ಹಾಡಿನಿಂದ ಮಾದಕ ವಸ್ತುಗಳ ಸೇವನೆ ಪ್ರಚೋದನೆ ನೀಡಿದ ಆರೋಪದಡಿ ಬಿಗ್ ಬಾಸ್ ಖ್ಯಾತಿಯ ಚಂದನ್ ಶೆಟ್ಟಿಯನ್ನ ಸಿಸಿಬಿ ವಿಚಾರಣೆ ನಡೆಸಿತ್ತು.ಕೊನೆಗೂ ಈ ಪ್ರಕರಣದಲ್ಲಿ ರ್ಯಾಪರ್ ಚಂದನ್ ಶೆಟ್ಟಿ ನಿರಳಾಗಿದ್ದಾರೆ.
ಇನ್ನು ಯಾವುದೇ ವಿಚಾರಣೆ ಅಗತ್ಯವಿಲ್ಲವೆಂದು ಸಿಸಿಬಿ ಘಟಕ ಸ್ಪಷ್ಟಪಡಿಸಿ ಪತ್ರ ಕಳಹಿಸಿದೆ. ಮಹಿಳೆ ಮತ್ತು ಮಾದಕ ದ್ರವ್ಯ ದಳ ತನಿಖಾಧಿಕಾರಿ ಬಿ.ಎಸ್ ಮೋಹನ್ ಕುಮಾರ್ ಅವರು ಚಂದನ್‍ಗೆ ಪತ್ರ ರವಾನಿಸಿದ್ದಾರೆ.
ನಿಮ್ಮ ಹೇಳಿಕೆಯನ್ನ ಪಡೆದು ವಿಚಾರಣೆಯನ್ನು ಮುಗಿಸಿದ್ದೇವೆ.ಇನ್ನು ಮುಂದೆ ಈ ಸಂಬಂಧ ವಿಚಾರಣೆ ಇರುವುದಿಲ್ಲವೆಂದು ಸ್ಪಷ್ಟಪಡಿಸಿದ್ದಾರೆ.
ಇನ್ನು ಅಂತ್ಯ ಸಿನಿಮಾದ ಗಾಂಜಾ ಹಾಡಿಗೆ ಭಾರಿ ವಿರೋಧ ಕೇಳಿ ಬಂದಿತ್ತು. ಹಾಡಿನಲ್ಲಿ ಯುವಕರನ್ನ ಮಾದಕ ವ್ಯಸನಿಗಳಾಗುವುದಕ್ಕೆ ಪ್ರಚೋದಿಸಿದ ರೀತಿ ಇದೆ ಎಂದು ಆರೋಪಿಸಲಾಗಿತ್ತು. ಸದ್ಯ ಚಂದನ್ ಶೆಟ್ಟಿಗೆ ಬಿಗ್ ರಿಲೀಫ್ ಸಿಕ್ಕಿದೆ.

loading...