ಚನ್ನಮ್ಮ ಕಿತ್ತೂರ:ಉಪಾಧ್ಯಕ್ಷರಾಗಿ ಹನುಮಂತ ಕೊಟಬಾಗಿ ಹಾಗೂ ಉಮೇಶ ಹಿರೇಮಠ ಆಯ್ಕೆ

ಕನ್ನಡಮ್ಮ ಸುದ್ದಿ.
ಚನ್ನಮ್ಮ ಕಿತ್ತೂರು ಃ ಇಲ್ಲಿಯ ಪ್ರತಿಷ್ಠಿತ ಶಿಕ್ಷಣ ಸಂಸ್ಥೆ ಕಿತ್ತೂರು ನಾಡ ಲಿಂಗಾಯತ ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷರ ಎರಡು ಸ್ಥಾನಗಳಿಗೆ ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸದಸ್ಯ ಹನುಮಂತ ಕೊಟಬಾಗಿ ಹಾಗೂ ರೋಟರಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಉಮೇಶ ಹಿರೇಮಠ ಅವರನ್ನು ಸಂಘದ ಚೇರಮನ್ ಈರಣ್ಣ ಮಾರಿಹಾಳ, ಗೌರವ ಕಾರ್ಯದರ್ಶಿ ಜಗದೀಶ ವಸ್ತ್ರದ, ಹಾಗೂ ಉಪಚೇರಮನ್ ವಿಶ್ವನಾಥ ಶೆಟ್ಟರ ಸಮ್ಮುಖದಲ್ಲಿ ಆಯ್ಕೆ ಮಾಡಲಾಯಿತು. ಇವರ ಆಯ್ಕೆಗೆ ರಾಜಗುರು ಸಂಸ್ಥಾನ ಕಲ್ಮಠದ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ ಹಾಗೂ ಮಾಜಿ ಶಾಸಕ ಸುರೇಶ ಮಾರಿಹಾಳ ಅಭಿನಂದನೆ ಸಲ್ಲಿಸಿದ್ದಾರೆ.

loading...