ಚಳಿ’ಗೆ ಪ್ರತಿಭಟನೆಯ `ಬಿಸಿ’

0
16

ಬೆಳಗಾವಿ,ನ.25- ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆಯುವ

ಚಳಿಗಾಲದ ವಿಧಾನ ಮಂಡಲಕ್ಕೆ ಪ್ರತಿಭಟನೆಗಳ ಸ್ವಾಗತ ದೊರೆಯಿತು.

ರಾಜಧಾನಿ ಬೆಂಗಳೂರಿನಿಂದ ಇಡೀ ಆಡಳಿತ ಯಂತ್ರ ಬೆಳಗಾವಿಗೆ

ಸ್ಥಳಾಂತರಗೊಂಡಿದೆ. ಇದೇ ಸಂದರ್ಭದಲ್ಲಿ ಪ್ರಮುಖವಾದ ಬೇಡಿಕೆಗಳ

ಈಡೇರಿಕೆಗಾಗಿ ಪ್ರತಿಭಟನೆಗಳು ನಡೆಯುತ್ತಿವೆ. ಕಬ್ಬು ಬೆಳೆಗಾರರ ಮತ್ತು

ರೈತರ ಸಮಸ್ಯೆಗಳನ್ನು ಸರ್ಕಾರ ನಿರ್ಲಕ್ಷಿಸುತ್ತಿದೆ ಎಂದು ಆರೋಪಿಸಿ ರೈತ

ಸಂಘ ಹಾಗೂ ಹಸಿರು ಸೇನೆ ಸುವರ್ಣಸೌಧಕ್ಕೆ ಮುತ್ತಿಗೆ ಹಾಕಿತ್ತು. ಹೊಸ

ಜಾಹಿರಾತು ನೀತಿಯನ್ನು ವಿರೋಧಿಸಿ ಪತ್ರಕರ್ತರು ಸುವರ್ಣ ಸೌಧದ

ಎದುರು ಪ್ರತಿಭಟನೆ ನಡೆಸಿದರು.

ಅತ್ತ ಮಹಾರಾಷ್ಟ್ತ್ರ ಏಕೀಕರಣ ಸಮಿತಿ ಮಹಾಮೇಳ ಆಯೋಜಿಸಿತ್ತು.

ಕೃಷಿ ಸಮಸ್ಯೆಗಳ ಈಡೇರಿಕೆಗಾಗಿ ಬೆಳಗಾವಿಯ ಚನ್ನಮ್ಮ ವೃತ್ತದಿಂದ

ಸಾವಿರಾರು ಸಂಖ್ಯೆಯ ರೈತರು ಮೆರವಣಿಗೆಯ ಮೂಲಕ ಸುವರ್ಣ

ಸೌಧದವರೆಗೂ ನಡೆದು ಬಂದು ಸುವರ್ಣಸೌಧಕ್ಕೆ ಮುತ್ತಿಗೆ ಹಾಕಲು

ಯತ್ನಿಸಿದರು.

ಮುಂಜಾಗೃತೆಯಾಗಿ ಪೊಲೀಸರು ವ್ಯಾಪಕ ಬಿಗಿ ಬಂದೋಬಸ್ತ್

ಏರ್ಪಡಿಸಿ, ಸುವರ್ಣ ಸೌಧದಿಂದ ದೂರದಲ್ಲಿ ಪ್ರತಿಭಟನೆಗೆ ಅವಕಾಶ

ಕಲ್ಪಿಸಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ರೈತ ಮುಖಂಡ ಕೊಡಿಹಳ್ಳಿ

ಚಂದ್ರಶೇಖರ್, ಕಬ್ಬಿಗೆ ಬೆಲೆ ನಿಗದಿಯಲ್ಲಿ ಸರ್ಕಾರ ಕಾರ್ಖಾನೆಗಳ

ಮಾಲೀಕರ ಪರ ಪಕ್ಷಪಾತ ಅನುಸರಿಸಿದೆ. ಕಡಿಮೆ ದರ ನಿಗದಿ ಮಾಡುವ

ಮೂಲಕ ರೈತರಿಗೆ ವಂಚನೆ ಮಾಡಿದೆ ಎಂದು ಕಿಡಿಕಾರಿದರು.

5 ಲಕ್ಷ ಹೆಕ್ಟೇರ್ನಲ್ಲಿ ಬೆಳೆದ ಬಿ.ಟಿ.ಹತ್ತಿ ಬೆಳೆ ನಾಶವಾಗಿದೆ ಸರ್ಕಾರ

ಇತ್ತ ಗಮನ ಹರಿಸುತ್ತಿಲ್ಲ.

loading...

LEAVE A REPLY

Please enter your comment!
Please enter your name here