ಚಿಕ್ಕೋಡಿಯಲ್ಲಿ ಬಿಜೆಪಿಯ ಪಾರುಪಥ್ಯ: ಕಾಂಗ್ರೆಸ್ಗೆ ಮುಖಭಂಗ

0
69

ಚಿಕ್ಕೋಡಿಯಲ್ಲಿ ಬಿಜೆಪಿಯ ಪಾರುಪಥ್ಯ: ಕಾಂಗ್ರೆಸ್ಗೆ ಮುಖಭಂಗ

ಕನ್ನಡಮ್ಮ ಸುದ್ದಿ

ಚಿಕ್ಕೋಡಿ ೩: ತೀವ್ರ ಕುತೂಹಲ ಕೆರಳಿಸಿದ್ದ ಚಿಕ್ಕೋಡಿ ತಾಲೂಕಿನ ಸ್ಥಳೀಯ ಸಂಸ್ಥೆಗಳ‌ ಚುನಾವಣೆಯಲ್ಲಿ ಬಿಜೆಪಿ ಹೆಚ್ಚು ಸ್ಥಾನಗಳಲ್ಲಿ ಜಯಭೇರಿ ಭಾರಿಸಿದ್ದು, ಕಾಂಗ್ರೆಸ್ ಗೆ ತೀವ್ರ ಮುಖಭಂಗವಾಗಿದೆ.
ಜಿದ್ದಾಜಿದ್ದಿ ಕಣವಾಗಿದ್ದ ಚುನಾವಣೆಯಲ್ಲಿ ನಿಪ್ಪಾಣಿ ನಗರಸಭೆಯಲ್ಲಿ ಸ್ಪಷ್ಟ ಬಹುಮತ ದೊರೆಯದೇ ಇದ್ದರೂ ಬಿಜೆಪಿ ಹೆಚ್ಚು ೧೨ ಸ್ಥಾನ‌ ಪಡೆದುಕೊಂಡಿದೆ. ನಿಪ್ಪಾಣಿಯಲ್ಲಿ ಕಾಂಗ್ರೆಸ್ ನಾಯಕರು ಒಗ್ಗಟ್ಟು ‌ಪ್ರದರ್ಶಿಸಿದರೂ ಬಿಜೆಪಿಯ ಜೊಲ್ಲೆ ದಂಪತಿ ಮೇಲುಗೈ ಸಾಧಿಸಿದ್ದಾರೆ.
ಚಿಕ್ಕೋಡಿಯಲ್ಲಿ ಕವಟಗಿಮಠ ಸಹೋದರರ‌ ಪ್ರಭಾವಕ್ಕೆ ಕಾಂಗ್ರೆಸನ ಹಿರಿಯ ತಲೆಗಳಿಗೆ‌ ಸೋಲಿನ ಬಿಸಿ ತಟ್ಟುವಂತೆ ಮಾಡಿದೆ. ಚಿಕ್ಕೋಡಿಯಲ್ಲಿ ಬಿಜೆಪಿ 13, ಕಾಂಗ್ರೆಸ್ 10 ಸ್ಥಾನ ಪಡೆದುಕೊಂಡು ಬಿಜೆಪಿ ಮತ್ತೆ ತನ್ನ ಛಾಪು ಮೂಡಿಸಿದೆ.
ಸದಲಗಾ ಪುರಸಭೆಯ 12 ಸ್ಥಾನ ಪಡೆದ ಬಿಜೆಪಿಗೆ ಆಡಳಿತ ಚುಕ್ಕಾಣಿ ದೊರೆಯಲಿದ್ದು, 9‌ ಸ್ಥಾನ ಕಾಂಗ್ರೆಸ್, 2 ಸ್ಥಾನ ಜೆಡಿಎಸ್ ಪಡೆದುಕೊಂಡಿದೆ.

ಚಿಕ್ಕೋಡಿ ತಾಲೂಕಿನ 3 ಸ್ಥಳೀಯ ಸಂಸ್ಥೆಗಳಲ್ಲಿ ಬಿಜೆಪಿ ತನ್ನ ಪಾರುಪಥ್ಯ ಸ್ಥಾಪಿಸಿದ್ದು, ಕಾಂಗ್ರೆಸ್ ನಾಯಕರ ನಿರೀಕ್ಷೆ ಹುಸಿಗೊಳ್ಳುವಂತಾಗಿದೆ.

loading...