ಚುನಾವಣಾ ಫಲಿತಾಂಶ: ಲೋಕಸಭೆ ಮೇಲೆ ಪರಿಣಾಮ ಬೀರಲ್ಲ

0
29

ಬೆಂಗಳೂರು: ಸ್ಥಳೀಯ ಸಂಸ್ಥೆ ಚುನಾವಣಾ ಫಲಿತಾಂಶ ರಾಜ್ಯದಲ್ಲಿರುವ ಸಮ್ಮಿಶ್ರ ಸರ್ಕಾರ ಹಾಗೂ ಲೋಕಸಭಾ ಚುನಾವಣೆ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.

ಡಾಲರ್ಸ್ ಕಾಲೋನಿ ನಿವಾಸದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು,ನಮ್ಮ ನಿರೀಕ್ಷೆಯಂತೆ ಸ್ಥಾನಗಳು ಬಂದಿಲ್ಲ, ನಾವು ಇನ್ನೂ ಹೆಚ್ಚು ಸ್ಥಾನ ಗೆಲ್ಲಬೇಕಿತ್ತು. ಆದರೆ ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಆಡಳಿತ ಇರುವುದರಿಂದ ನಿರೀಕ್ಷಿತ ಸ್ಥಾನಗಳಿಸಲು ಸಾಧ್ಯವಾಗಲಿಲ್ಲ ಎಂದರು.

29ನಗರಸಭೆಗಲ್ಲಿ ಬಿಜೆಪಿಗೆ 15,ಕಾಂಗ್ರೆಸ್ 9ಮೃದು ಜೆಡಿಎಸ್ 3ರಲ್ಲಿ ಗೆದ್ದಿವೆ,53ಪುರಸಭೆಗಲ್ಲಿ ಬಿಜೆಪಿ 11,ಕಾಂಗ್ರೆಸ್ 28 ಮತ್ತು ಜೆಡಿಎಸ್ 8 ಗೆದ್ದಿದೆ,23 ಪಟ್ಟಣ ಪಂಚಾಯ್ತಿಗಳಲ್ಲಿ ಬಿಜೆಪಿಗೆ 8,ಕಾಂಗ್ರೆಸ್ 9,ಜೆಡಿಎಸ್ 2 ಸ್ಥಾನಗಳನ್ನು ಗೆದ್ದಿದೆ. 3 ಮಹಾನಗರ ಪಾಲಿಕೆಗಳ ಪೈಕಿ ಶಿವಮೊಗ್ಗದಲ್ಲಿ ಬಿಜೆಪಿ ಬಹುಮತ ಬಂದಿದೆ.ನಮ್ಮ ಜಿಲ್ಲೆಯಲ್ಲಿ ದೊಡ್ಡ ಅಂತರದಿಂದ ಬಹುಮತ ಗಳಿಸಿದ್ದೇವೆ ಎಂದರು.

ಅಲ್ಲದೇ ಆಡಳಿತ ಪಕ್ಷದ ಹಣ ಬಲ, ಶಕ್ತಿ, ಕಾಂಗ್ರೆಸ್ ಜೆಡಿಎಸ್ ಹೊಂದಾಣಿಕೆಗಳಿಂದ ನಾವು ನಿರೀಕ್ಷೆ ಮಾಡಿದಷ್ಟು ಗೆಲುವು ಸಿಕ್ಕಿಲ್ಲ ನಮಗೆ ಕೆಲವು ಕಡೆ ಹಿನ್ನಡೆಯಾಗಿದೆ ಎಂದರು. ಮೈಸೂರಿನಲ್ಲೂ ದೊಡ್ಡ ಅಂತರದಲ್ಲಿ ಮಹಾನಗರಪಾಲಿಕೆಯಲ್ಲಿ 22 ಸೀಟು ಗೆದ್ದಿದ್ದೇವೆ, ತುಮಕೂರಿನಲ್ಲಿ ಸಹಾ ನಾವು ಹೋರಾಟ ಮಾಡಿದ್ದೇವೆ.ಒಟ್ಟಾರೆ ಫಲಿತಾಂಶ ನಮಗೆ ಸ್ವಲ್ಪ ಸಮಾಧಾನ ತಂದಿದೆ ಮುಂದೆ ಪಕ್ಷವನ್ನು ಇನ್ನಷ್ಟು ಬಲಪಡಿಸುವತ್ತ ಗಮನ ಕೊಡುತ್ತೇವೆ ಎಂದು ತಿಳಿಸಿದರು.

ಈ ಚುನಾವಣಾ ವಿಚಾರವೇ ಬೇರೆ, ಲೋಕಸಭಾ ಚುನಾವಣಾ ವಿಷಯವೇ ಬೇರೆ. ನೂರಕ್ಕೆ ನೂರರಷ್ಟು ಲೋಕಸಭೆಯಲ್ಲಿ ನಾವೇ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

loading...