ಚುನಾವಣೆ ಪ್ರಜಾಭುತ್ವದ ಹಬ್ಬ ಮತ್ತು ಪರೀಕ್ಷೆ

0
10

ಕನ್ನಡಮ್ಮ ಸುದ್ದಿ ನರೇಗಲ್ಲ: ಚುನಾವಣೆ ಎಂಬುದು ಪ್ರಜಾಭುತ್ವದಲ್ಲಿ ಹಬ್ಬ ಮಾತ್ರವಲ್ಲ ಪರೀಕ್ಷೆ ಇದ್ದಂತೆ. ಈ ಪರೀಕ್ಷೆ ಚುನಾವಣಾ ಕಣದಲ್ಲಿ ಸ್ಪರ್ಧಿಸಿರುವ ಜನನಾಯಕರಿಗೆ ಮಾತ್ರವಲ್ಲ, ಮತದಾನದ ಹಕ್ಕು ಹೊಂದಿರುವ ನಾಗರಿಕಗೂ ಕೂಡ ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕು ಎಂದು ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಫಕ್ರುದ್ಧಿÃನ ನದಾಫ ಹೇಳಿದರು. ಅವರು ಸಮೀಪದ ಜಕ್ಕಲಿ ಗ್ರಾಮ ಪಂಚಾಯಿತಿಯಲ್ಲಿ ಶನಿವಾರ ಜಿಲ್ಲಾ ಸ್ವಿÃಪ್ ಸಮಿತಿ ವತಿಯಿಂದ ಜರುಗಿದ ಚುನಾವಣೆ ಹಬ್ಬ ಕಾರ್ಯಕ್ರಮದಲ್ಲಿ ಮಾತನಾಡಿದರು. ಮತದಾನ ದಿನದಂದು ರಜೆ ನೀಡಿದರೂ ಮತಗಟ್ಟೆಗೆ ಬಾರದೇ ಪ್ರಸಾಸಕ್ಕೆ ಹೋಗಬಾರದು. ಹಬ್ಬದ ದಿನದಂದು ಮನೆಯಲ್ಲಿಯೇ ಇದ್ದು ಹಬ್ಬ ಆಚರಿಸಿದಂತೆ ಮತದಾನ ದಿನದಂದು ಮತಗಟ್ಟೆಗೆ ತೆರಳಿ ಮತಚಲಾಯಿಸಿ ಪವಿತ್ರö ಕರ್ತವ್ಯವನ್ನು ನಿರ್ವಹಿಸಬೇಕು. ಚುನಾವಣಾ ಪ್ರಕ್ರಿಯೆ ದೀರ್ಘವಾದರೂ ಅಕ್ರಮಗಳು ಹೆಚ್ಚಾಗುತ್ತವೆ. ಎಷ್ಟೆÃ ಕಟ್ಟುನಿಟ್ಟಿನ ನಿಯಮಗಳಿದ್ದರೂ ರಂಗೋಲಿ ಕೆಳಗೆ ತೂರುವ ಕಲೆಯನ್ನು ರಾಜಕೀಯ ನಾಯಕರು ಕರಗತ ಮಾಡಿಕೊಂಡಿರುತ್ತಾರೆ. ಇದರ ಹೊರತಾಗಿಯೂ ಈ ಸಲ ಚುನಾವಣಾ ಆಯೋಗ ಅಕ್ರಮಗಳನ್ನು ತಡೆಯುವ ಸಲುವಾಗಿ ಯಾಪ್ ಮೂಲಕ ದೂರು ಸಲ್ಲಿಸುವಂಥ ಹೊಸ ಉಪಕ್ರಮಗಳನ್ನು ಮಾಡಿದೆ. ನಿಷ್ಪಕ್ಷ ಚುನಾವಣೆ ನಡೆದರೆ ಮಾತ್ರ ಪ್ರಜಾಪ್ರಭುತ್ವದ ಸತ್ವಯುತವೂ ಬಲಿಷ್ಠವೂ ಆಗಿರುತ್ತದೆ. ಜನರ ಸಹಕಾರವೂ ಅಗತ್ಯವಾಗಿದೆ. ಎಲ್ಲರೂ ಸೇರಿ ಈ ಹಬ್ಬವನ್ನು ಸಂಭ್ರಮಿಸೋಣ ಎಂದರು. ದ್ವಿತೀಯ ದರ್ಜೆ ಸಹಾಕರ ಅಧಿಕಾರಿ ಎಂ.ಎಂ. ಮೇಟಿ, ಕಾರ್ಯದರ್ಶಿ ಎಸ್.ಎಫ್. ತಿಮ್ಮಶೆಟ್ಟರ್, ಗಂಗಮ್ಮ ಪಾಟೀಲ, ಗೀತಾ ಮೇಟಿ, ರತ್ನಾ ಶ್ಯಾಶೇಟ್ಟಿ, ಶೋಭಾ ಪಲ್ಲೆÃದ, ವೀರಪ್ಪ ಕಾಳೆ, ಮಹೇಶ ತಿಲಗರ, ನಿಂಗಬಸಪ್ಪ ಜೋಗಿನ, ಸೋಮಶೇಖರಯ್ಯ ಓದುಸೂಮಠ ಸೇರಿದಂತೆ ಗ್ರಾ.ಪಂ ಇದ್ದರು.

loading...