ಜಗಜೀವನರಾಮ ಭವನ ನಿರ್ಮಾಣಕ್ಕೆ ಚಾಲನೆ

0
24

ಕನ್ನಡಮ್ಮ ಸುದ್ದಿ ಕಾಗವಾಡ 26: ತಾಲೂಕಿನ ಉಗಾರ ಬುದ್ರುಕ ಗ್ರಾಮದ ಮಾತಂಗ ಸಮಾಜದ ಓಣಿಯಲ್ಲಿ, ಚಿಕ್ಕೋಡಿ ಸಂಸದ ಪ್ರಕಾಶ ಹುಕ್ಕೇರಿ ಇವರ ಅನುದಾನದಿಂದ ಮಂಜೂರಗೊಂಡ 12 ಲಕ್ಷ ರೂ. ವೆಚ್ಚದಲ್ಲಿಯ ಬಾಬು ಜಗಜೀವನರಾಮ ಭವನ ಕಟ್ಟಡದ ಭೂಮಿ ಪೂಜೆ ಕಾಗವಾಡ ಶಾಸಕ ಶ್ರೀಮಂತ ಪಾಟೀಲ ನೆರವೇರಿಸಿದರು. . ಸಂಸದ ಪ್ರಕಾಶ ಹುಕ್ಕೇರಿ ಇವರ ಬಳಿ ಸ್ಥಳೀಯ ತಾ.ಪಂ ಸದಸ್ಯ ವಸಂತ ಖೊತ, ಕಾಗವಾಡ ಕಾಂಗ್ರೆಸ್‌ ಪಕ್ಷ ಬ್ಲಾಕ್‌ ಆಧ್ಯಕ್ಷ ವಿಜಯ್‌ ಅಕಿವಾಟೆ ಇವರು ವಿಶೇಷ ಪ್ರಯತ್ನಿಸಿ, ಸಮಾಜ ಕಲ್ಯಾಣ ಇಲಾಖೆವತಿಯಿಂದ ಬಿಡುಗಡೆವಾದ ಭವನಕ್ಕಾಗಿ ಅನುದಾನ ಮಂಜೂರುಗೊಳಿಸಿಕೊಂಡಿದ್ದರಿಂದ, ಶಾಸಕ ಶ್ರೀಮಂತ ಪಾಟೀಲ ಅವರೊಂದಿಗೆ, ಉಭಯರನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು. ಈ ವೇಳೆ ಗ್ರಾ.ಪಂ ಆಧ್ಯಕ್ಷೆ ಶೈನಾಜ ಜಮಖಾನೆ, ಉಪಾಧ್ಯಕ್ಷ ಪ್ರಕಾಶ ಸಾಜನೆ, ಶಿಷೀರ್‌ ಕಾಂಬಳೆ, ಸಚೀನ ಕಾಂಬಳೆ, ವಿಜಯ ಶಿಂದೆ, ಪಾಂಡುರಂಗ ಬಿರಣಗಿ, ಕಲ್ಲಪ್ಪಾ ಬಿರಣಗಿ, ಅಣ್ಣಾಸಾಬ್‌ ಖೋತ, ಶ್ರೀಕಾಂತ ಪಾಟೀಲ, ಶಂಕರ ಗಾಡಿವಡ್ಡರ ಸೇರಿದಂತೆ ಅನೇಕರು ಇದ್ದರು.

loading...