ಜನತಾ ಬಜಾರ್ ಅಭಿವೃದ್ಧಿಗೆ ತ್ವರಿತಗತಿಯಲ್ಲಿ ಕ್ರಮಕೈಗೊಳ್ಳಿ: ಶಾಸಕ ಶೆಟ್ಟರ್

0
18

ಕನ್ನಡಮ್ಮ ಸುದ್ದಿ-ಹುಬ್ಬಳ್ಳಿ: ನಗರದ ಜನತಾ ಬಜಾರ್ ಹಾಗೂ ಮಹಾತ್ಮಾ ಗಾಂಧಿ ಮಾರುಕಟ್ಟೆ ಅಭಿವೃದ್ಧಿಗೆ ತ್ವರಿತಗತಿಯಲ್ಲಿ ಕ್ರಮ ಕೈಗೋಳ್ಳಬೇಕು ಎಂದು ಶಾಸಕ ಜಗದೀಶ ಶೆಟ್ಟರ ಹೇಳಿದರು.
ಸರ್ಕಿಟ್‍ಹೌಸ್‍ನಲ್ಲಿ ಗುರುವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿ, ಮೊದಲ ಹಂತದಲ್ಲಿ ಜನತಾ ಬಜಾರ್ ಅಭಿವೃದ್ಧಿ ಕೈಗೋಳ್ಳಬೇಕು. ಮುಂದಿನ ಹಂತದಲ್ಲಿ ಎಂ.ಜಿ. ಮಾರ್ಕೆಟ್ ಅಭಿವೃದ್ಧಿಗೋಳಿಸಬೇಕು. ಅಲ್ಲಿನ ಎಲ್ಲ ವ್ಯಾಪಾರಸ್ಥರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಯ ಆರಂಭಿಸಬೇಕು ಎಂದರು.
ಎರಡೂ ಮಾರುಕಟ್ಟೆಗಳನ್ನು ಅಭಿವೃದ್ಧಿಪಡಿಸಬೇಕೆಂಬ ಬೇಡಿಕೆ ಬಹುದಿನಗಳಿಂದ ಇದೆ. ಜಿಲ್ಲಾಧಿಕಾರಿ, ಪಾಲಿಕೆ ಆಯುಕ್ತರು ಅಲ್ಲಿನ ವ್ಯಾಪಾರಿಗಳ ಸಭೆ ನಡೆಸಿ ವ್ಯಾಪಾರಿಗಳ ಸಹಕಾರ ಪಡೆದುಕೊಂಡು ಕಾರ್ಯ ಆರಂಭಿಸಬೇಕು. ವ್ಯಾಪಾರಿಗಳಿಗೆ ತಾತ್ಕಾಲಿಕ ವ್ಯವಸ್ಥೆ ಕಲ್ಪಿಸಬೇಕು ಎಂದು ನುಡಿದರು. ನಾನಾ ಸಮಸ್ಯೆ ಬಗೆಹರಿಸಿ ನಾಲಾಗಳ ಸಮೀಕ್ಷೆ ಸಂದರ್ಭದಲ್ಲಿ ನಾಲಾ ಅಕ್ಕ-ಪಕ್ಕದ ಭೂಮಿ ಅತಿಕ್ರಮಣವಾದ ಬಗ್ಗೆ ಕೂಡ ಸಮೀಕ್ಷೆ ನಡೆಸಬೇಕು. ನಮ್ಮ ಜಾಗವನ್ನು ರಕ್ಷಿಸಿಕೋಳ್ಳಬೇಕು. ಆನಂದನಗರ, ಬ್ಯಾಂಕರ್ ಕಾಲೋನಿ ಮೊದಲಾದೆಡೆ ನಾಲಾ ಇಕ್ಕಟ್ಟಾಗಿದ್ದು, ಅತಿಕ್ರಮಣ ನಡೆಯುತ್ತಿದೆ. ದೇಶಪಾಂಡೆ ನಗರದ ನಾಲಾದ ಹೂಳು ತೆಗೆಸಲು ಕ್ರಮ ಕೈಗೋಳ್ಳಬೇಕು. ನಗರದ ಎಲ್ಲ ನಾಲಾಗಳ ಸಮಸ್ಯೆ ಬಗೆಹರಿಸಬೇಕು ಎಂದರು. ಉಣಕಲ್ ಕೆರೆಗೆ ಕೋಳಚೆ ನೀರು ಸೇರುವುದನ್ನು ತಡೆಗಟ್ಟಲು ಭೈರಿದೇವರಕೋಪ್ಪದಲ್ಲಿ ಕೋಳಚೆ ನೀರು ಶುದ್ಧೀಕರಣ ಘಟಕ ಕಳೆದೋಂದು ವರ್ಷದಿಂದ ನಿರ್ಮಾಣವಾಗುತ್ತಿದೆ. ಕಾಮಗಾರಿ ಯಾವ ಹಂತದಲ್ಲಿದೆ ಎಂದು ಜಗದೀಶ ಶೆಟ್ಟರ ಪ್ರಶ್ನಿಸಿದರು. ಆದರೆ ಈಗ ಕೇವಲ ಶೇ.10 ಕಾಮಗಾರಿ ಮಾತ್ರ ಪೂರ್ಣಗೊಂಡಿದೆ ಎಂದು ಅಧಿಕಾರಿ ನೀಡಿದ ಉತ್ತರದಿಂದ ಆಕ್ರೋಶಗೋಂಡ ಶೆಟ್ಟರ, ಹೀಗಾದರೆ ಉಣಕಲ್ ಕೆರೆ ಉದ್ಧಾರವಾಗುವುದಿಲ್ಲ. ಯಾಕೆ ವಿಳಂಬವಾಗುತ್ತಿದೆ? ಉಣಕಲ್ ಕೆರೆಗೆ ಕೊಳಚೆ ನೀರು ಸೇರುವುದನ್ನು ತಡೆಯದಿದ್ದರೆ ಕೆರೆಯಲ್ಲಿ ಜಲಕಳೆ ನಿಯಂತ್ರಿಸಲಾಗುವುದಿಲ್ಲ. ಜನರು ನಮ್ಮನ್ನು ಕೇಳ್ತಾರೆ, ನಿಮ್ಮನ್ನಲ್ಲ. ಕಾಮಗಾರಿ ಪೂರ್ಣಗೊಳಿಸಲು ಇನ್ನೂ ಎಷ್ಟು ಸಮಯ ಬೇಕು ಅದನ್ನಾದರೂ ಹೇಳಿ ಎಂದು ಹರಿಹಾಯ್ದರು.
ಪಾಲಿಕೆ ಹಸ್ತಾಂತರಿಸಿ ಬೆಂಗೇರಿ ಹಾಗೂ ಹಳೇಹುಬ್ಬಳ್ಳಿ ಸಂತೆ ಪೇಟೆ ಅಭಿವೃದ್ಧಿಗೆ ಕ್ರಮ ಕೈಗೋಳ್ಳಬೇಕು. ಬೆಂಗೇರಿಯಲ್ಲಿ ಸಂತೆ ನಡೆಯುವ ಜಾಗ ತೋಟಗಾರಿಕಾ ಇಲಾಖೆಯದಾಗಿದ್ದು, ಅವರಿಗೆ ಬೇರೆ ಜಾಗ ನೀಡಿ ಈ ಜಾಗದಲ್ಲಿ ಮಾರುಕಟ್ಟೆಗೆ ಅನುಕೂಲವಾಗುವಂತೆ ಕಟ್ಟೆಗಳನ್ನು ಕಟ್ಟಬೇಕು ಎಂದರು.
ನೃಪತುಂಗ ಬೆಟ್ಟ, ಕಲಾಭವನ, ಉಣಕಲ್ ಉದ್ಯಾನ ಹಾಗೂ ಇಂದಿರಾ ಗಾಜಿನ ಮನೆಯನ್ನು ಜಿಲ್ಲಾಡಳಿತದಿಂದ ಮಹಾನಗರ ಪಾಲಿಕೆಗೆ ಹಸ್ತಾಂತರಿಸಲು ಜಿಲ್ಲಾಧಿಕಾರಿ ಕ್ರಮ ಕೈಗೋಳ್ಳಬೇಕು ಎಂದರು. ಅತಿಕ್ರಮಣ ತೆರವು ನಡೆಯಲಿ ಶಾಸಕ ಪ್ರಸಾದ ಅಬ್ಬಯ್ಯ ಮಾತನಾಡಿ, ನಾಲಾಗಳನ್ನು ಅತಿಕ್ರಮಣ ಮಾಡಿ ಕಟ್ಟಲಾದ ಮನೆಗಳನ್ನು ತೆರವುಗೋಳಿಸಲು ಕ್ರಮ ಕೈಗೋಳ್ಳಬೇಕು. ಮನೆ ಕಳೆದುಕೊಂಡವರಿಗೆ ಅಪಾರ್ಟ್‍ಮೆಂಟ್‍ಗಳಲ್ಲಿ ವಸತಿ ಕಲ್ಪಿಸಬಹುದು. ಎಂಥ ಪ್ರಭಾವಿಗಳೇ ಆಗಿರಲಿ, ತಪ್ಪು ಮಾಡಿದ ಯಾರನ್ನೂ ಬಿಡಬೇಡಿ. ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೋಳ್ಳಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ವಿಧಾನ ಪರಿಷತ್ ಸದಸ್ಯ ಪ್ರದೀಪ ಶೆಟ್ಟರ, ಮಹಾಪೌರ ಸುಧೀರ ಸರಾಫ, ಜಿಲ್ಲಾಧಿಕಾರಿ ದೀಪಾ ಚೋಳನ್, ಪೊಲೀಸ್ ಆಯುಕ್ತ ಎಂ.ಎನ್. ನಾಗರಾಜ, ಉಪ ಆಯುಕ್ತರಾದ ರೇಣುಕಾ ಸುಕುಮಾರ, ಪಾಲಿಕೆ ಸದಸ್ಯರಾದ ಡಾ| ಪಾಂಡುರಂಗ ಪಾಟೀಲ, ವೀರಣ್ಣ ಸವಡಿ, ಮಹೇಶ ಬುರ್ಲಿ ಇದ್ದರು.

loading...