ಜನನ ಮರಣ ದಾಖಲಾತಿ ನಿಖರವಾಗಿರಲಿ: ಜಿಲ್ಲಾಧಿಕಾರಿ ಹಿರೇಮಠ

0
19

ಕನ್ನಡಮ್ಮ ಸುದ್ದಿ-ಗದಗ: ಜಿಲ್ಲೆಯ ಜನನ ಮತ್ತು ಮರಣ ದಾಖಲೆ ವಾಸ್ತವಿಕ ಹಾಗೂ ನಿಖರವಾಗಿರುವುದು ಎಲ್ಲ ರೀತಿಯಿಂದ ಮಹತದ್ದಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಹೇಳಿದರು.
ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಬುಧವಾರ ಜಿಲ್ಲೆಯ ಜನನ ಮರಣ ದಾಖಲೆಗಳ ಸಮನ್ವಯ ಸಮಿತಿಯ ತ್ರೈಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜನನ ಮರಣ ಅಂಕಿ ಸಂಖ್ಯೆಗಳ ನಿಖರತೆಗಾಗಿ ಸ್ಥಳೀಯ-ಸಂಸ್ಥೆಗಳು, ಖಾಸಗಿ ಹಾಗೂ ಸರಕಾರಿ ಆಸ್ಪತ್ರೆಗಳು ಪ್ರತ್ಯೇಕ ವಹಿ ಇಟ್ಟು ತಿಂಗಳವಾರು ಮಾಹಿತಿ ಕಡ್ಡಾಯವಾಗಿ ನಮೂದಿಸಬೇಕು. ಸಂಬಂಧಿತರಿಗೆ ನಿಯಮಿತವಾಗಿ ನಿಗದಿತ ಅವಧಿಯಲ್ಲಿ ಮಾಹಿತಿ ಕಳುಹಿಸಬೇಕು. ಅಂತರ ಜಿಲ್ಲಾ ಪ್ರಕರಣಗಳಲ್ಲಿ ನಿಯಮಾವಳಿ ಅನ್ವಯ ಕ್ರಮ ಜರುಗಿಸಬೇಕು ಎಂದರು.
1990 ರಿಂದ 2010ರ ಅವಧಿಯಲ್ಲಿ ನೋಂದಣಿಯಾದ ಜನನ-ಮರಣ ನೊಂದಣಿಗಳನ್ನು ಇ-ಜನ್ಮ ತಂತ್ರಾಂಶದಲ್ಲಿ ಅಳವಡಿಸುವ ಕಾರ್ಯವನ್ನು ತೀವ್ರವಾಗಿ ಪೂರ್ಣಗೊಳಿಸಬೇಕು. ಗ್ರಾಮಾಂತರ, ನಗರ ಪಟ್ಟಣ ಪ್ರದೇಶಗಳಲ್ಲಿ ನೋಂದಣಿಯಾಗುವ ಜನನ ಮತ್ತು ಮರಣ ಘಟನೆಗಳನ್ನು ನಿಗದಿತ ಅವಧಿಯಲ್ಲಿ ಹಾಗೂ ಗದಗ ಜಿಲ್ಲೆಯ ನಮೂನೆಯಲ್ಲಿ ದಾಖಲಿಸಬೇಕು. 2016ರಲ್ಲಿ ರಾಜ್ಯದಲ್ಲಿ ಮರಣ ಪ್ರಮಾಣ ಪ್ರತಿಶತ 17.5 ರಷ್ಟಿದ್ದರೆ ಆ ಪೈಕಿ ಜಿಲ್ಲೆಯಲ್ಲಿ ಪ್ರತಿಶತ 15.56ರಷ್ಟು ಇತ್ತು. ಆದರೆ ಮರಣ ಪ್ರಮಾಣದ ಹಾಗೂ ಶಿಶು ಮರಣ ಮಾಹಿತಿ ಕುರಿತಂತೆ ಆರೋಗ್ಯ ಇಲಾಖೆ ಹಾಗೂ ಅಂಕಿ ಸಂಖ್ಯೆಗಳಲ್ಲ ವ್ಯತ್ಯಾಸವಿದ್ದು ಆರೋಗ್ಯ ಇಲಾಖೆಯ ಜೊತೆ ಸಮನ್ವಯತೆ ಸಾಧಿಸಿ ಪರಿಶೀಲಿಸಿ ನಿಖರ ಮಾಹಿತಿ ತಯಾರಿಸಲು ಜಿಲ್ಲಾಧಿಕಾರಿ ಸೂಚಿಸಿದರು.
ಜಿಲ್ಲಾ ಸಾಂಖ್ಯಿಕ ಅಧಿಕಾರಿ ಕಂಬಾಳಿಮಠ ಜಿಲ್ಲೆಯ ಜನನ ಮರಣ ಕುರಿತು ಮಾಹಿತಿಯನ್ನು ಸಭೆಯಲ್ಲಿ ಮಂಡಿಸಿದರು. ಜಿಲ್ಲೆಯಲ್ಲಿ ಒಟ್ಟು 384 ಇ-ಜನ್ಮ ನೋಂದಣಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಜನನ ಹಾಗೂ ಮರಣ ನೋಂದಣಿ ಕುರಿತು ಸಾರ್ವಜ£ಕರಲ್ಲಿ ತಿಳುವಳಿಕೆ ಮೂಡಿಸಲು ಪ್ರಯತ್ನಿಸಲಗುತ್ತಿದೆ ಎಂದರು.
ಉಪ ವಿಭಾಗಾಧಿಕಾರಿ ಪಿ.ಎಸ್‌.ಮಂಜುನಾಥ, ಎಸ್‌.ಎನ್‌.ರುದ್ರೇಶ ಮಾತನಾಡಿ, ಜನನ ಮರಣ ಉತಾರದ ದುರುಪಯೋಗ ತಪ್ಪಿಸಲು ಆಧಾರ ಸಮನ್ವಯತೆಗೆ ಕ್ರಮ ಜರುಗಿಸಲು ಸಲಹೆ ನೀಡಿದರು.
ಮನ್ಸೂರ ಅಲಿ, ಡಾ. ಹೊನಕೇರಿ ಇದ್ದರು.

loading...