ಜನರಿಗೆ ಪರಿಸರ, ಸ್ವಚ್ಛತೆಯ ಅರಿವು ಮೂಡಿಸುವ ಅಭಿಯಾನ

0
22

ಕನ್ನಡಮ್ಮ ಸುದ್ದಿ-ಹಳಿಯಾಳ: ಇಲ್ಲಿನ ಕೆನರಾ ಬ್ಯಾಂಕ್-ದೇಶಪಾಂಡೆ ಆರ್‍ಸೆಟ್ ಸಂಸ್ಥೆ ವತಿಯಿಂದ ಆದರ್ಶ ಗ್ರಾಮ ಯೋಜನೆಯ ದತ್ತು ಪಡೆದ ದೊಡ್ಡಕೊಪ್ಪ ಗ್ರಾಮದಲ್ಲಿ ಸ್ವಾತಂತ್ರ್ಯೋತ್ಸವದ ಅಂಗವಾಗಿ ಗ್ರಾಮದ ಜನರಿಗೆ ಪರಿಸರ ಹಾಗೂ ಸ್ವಚ್ಛತೆಯ ಅರಿವು ಮೂಡಿಸುವ ಅಭಿಯಾನ ನಡೆಸಲಾಯಿತು.
ಸಾಂಬ್ರಾಣಿ ವಲಯ ಅರಣ್ಯ ಅಧಿಕಾರಿ ದೀಪಕ ನಾಯ್ಕ ಮಾರ್ಗದರ್ಶನದಲ್ಲಿ ಗ್ರಾಮದ ಸರಕಾರಿ ಶಾಲೆಯಲ್ಲಿ ಸಸ್ಯಾರೋಪಣ ಮಾಡಲಾಯಿತು.

ಆರ್‍ಸೆಟ್ ಸಂಸ್ಥೆ ವತಿಯಿಂದ ದೊಡ್ಡಕೊಪ್ಪ ಮತ್ತು ಬಂಟರಗಾಳಿ ಶಾಲಾ ಮಕ್ಕಳಿಗೆ ಉಚಿತವಾಗಿ ಕೊಡೆಗಳನ್ನು ಹಾಗೂ ಗ್ರಾಮದ ಜನರಿಗೆ ಸ್ವಚ್ಛತೆಯ ಕುರಿತು ಅರಿವು ಮೂಡಿಸಿ ಸಂಸ್ಥೆಯಿಂದ ಉಚಿತವಾಗಿ ಒಣಕಸ ಮತ್ತು ಹಸಿಕಸ ವಿಲೇವಾರಿ ಮಾಡಲು ಪ್ರತಿ ಕುಟುಂಭಕ್ಕೆ 2 ಬಕೆಟಗಳನ್ನು ಕೊಡುಗೆಯಾಗಿ ನೀಡಿ ಪ್ರೋತ್ಸಾಹಿಸಲಾಯಿತು.
ಜನಗಾ ಗ್ರಾಮ ಪಂಚಾಯತ ಅಧ್ಯಕ್ಷ ಮಹಾದೇವ ಪವಾರ ಹಾಗೂ ಸದಸ್ಯರು, ಅರಣ್ಯ ಇಲಾಖೆಯ ಸಾಂಬ್ರಾಣಿ ವಲಯ ಸಿಬ್ಬಂದಿಗಳು, ದೊಡ್ಡಕೊಪ್ಪ ಶಾಲೆಯ ಎಸ್.ಡಿ.ಎಮ್.ಸಿ. ಅಧ್ಯಕ್ಷ ಭರಮಾ ಧಾರವಾಡಕರ್, ಆರ್‍ಸೆಟ್ ಸಂಸ್ಥೆಯ ನಿರ್ದೇಶಕ ನಿತ್ಯಾನಂದ ಆರ್ ವೈದ್ಯ, ಯೋಜನಾ ಸಂಯೋಜಕ ವಿನಾಯಕ ಚವ್ವಾಣ ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿದ್ದರು.

loading...