ಜನಸಾಮಾನ್ಯರ 55 ಲಕ್ಷ ಹಣವನ್ನ ಪಾಲಿಕೆ ವಿನಾಕಾರಣ ಹಾಳುಮಾಡುತ್ತಿದೆ: ಹರ್ಷವರ್ದನ ಆರೋಪ

0
15

ಜನಸಾಮಾನ್ಯರ 55 ಲಕ್ಷ ಹಣವನ್ನ ಪಾಲಿಕೆ ವಿನಾಕಾರಣ ಹಾಳುಮಾಡುತ್ತಿದೆ: ಹರ್ಷವರ್ದನ ಆರೋಪ

ಕನ್ನಡಮ್ಮ ಸುದ್ದಿ-ಬೆಳಗಾವಿ : ಗಣೇಶೋತ್ಸವದ ಹಬ್ಬಕ್ಕಾಗಿ ನಗರದಲ್ಲಿನ ಎಲ್ಲ ರಸ್ತೆಗಳನ್ನು ದುರಸ್ತಿಗೊಳಿಸುವ ಅವಶ್ಯ ವಿದ್ದರು ರಾಷ್ಟ್ರಪತಿ ಬಂದು ಹೋಗುವ ರಸ್ತೆ ಮಾತ್ರ ಕಾಮಗಾರಿ ಮಾಡಲಾಗುತ್ತಿದೆ ಎಂದು ವಕೀಲ ಹರ್ಷವರ್ದನ ಪಾಟೀಲ ಆರೋಪಿಸದರು.
ಸ್ಥಳೀಯ ಕನ್ನಡ ಸಾಹಿತ್ಯ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು.
ನಗರದ ಪತ್ರಿಗಲ್ಲಿಯ ರಸ್ತೆಗಳು ಆಳವಾದ ಗುಂಡಿಗಳು ಬಿದ್ದಿವೆ ಅದರ ಬಗ್ಗೆ ಗಮನ ಹರಿಸದ ಪಾಲಿಕೆ ರಾಷ್ಟ್ರಪತಿ ಬರುವ
ಕುಂಟು ನೆಪ ಇಂಟುಕೊಂಡು ನಗರದಲ್ಲಿಯ 90 ಕಿ.ಲೋ ಮೀಟರ್ ರಸ್ತೆಗೆ ಸುಮಾರು 55 ಲಕ್ಷ ದುಡ್ಡಿನ್ನ ಪಾಲಿಕೆ ವಿನಾಕಾರಣ ಹಾಳು ಮಾಡುತ್ತಿದೆ.
ಕಾಂಟ್ರಾಕ್ಟರ್ ಕಡೆಗೆ ಸಾಕಷ್ಟೂ ಹಣ ಉಳಿದಿದೆ ಅದನ್ನು ಉಪಯೋಗ ಮಾಡುವುದನ್ನು ಬಿಟ್ಟು ಜನಸಾಮಾನ್ಯರ ದುಡ್ಡಿನಿಂದ ರಸ್ತೆ ಕಾಮಗಾರಿ ಕೈ ಎತ್ತಿಕೋಳಲಾಗಿದೆ. ಕಾಂಗ್ರೆಸ್ ರಸ್ತೆ ಜೊತೆಗೆ ಎಲ್ಲ ರಸ್ತೆಗಳನ್ಮು ಅಭಿವೃದ್ಧಿ ಮಾಡಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

loading...