ಜನಾಂದೋಲನ ಜಾಗೃತಿ ಜಾಥಾಕ್ಕೆ ಚಾಲನೆ

0
27

ಕನ್ನಡಮ್ಮ ಸುದ್ದಿ-ಯಲಬುರ್ಗಾ: ಬಯಲು ಬಹಿರ್ದೆಸೆ ಮುಕ್ತ ತಾಲೂಕನ್ನಾಗಿ ಮಾಡುವ ಗುರಿಯಾಗಬೇಕು. ಈ ನಿಟ್ಟಿನಲ್ಲಿ ಜನರಲ್ಲಿ ಶೌಚಾಲಯ ಬಳಕೆ ಮತ್ತು ಸ್ವಚ್ಛತೆ ಕುರಿತು ಸಾರ್ವಜನಿಕರಿಗೆ ಜನ ಜಾಗೃತಿ ಮೂಡಿಸಬೇಕು ಎಂದು ತಾಪಂ ಅಧ್ಯಕ್ಷೆ ಲಕ್ಷ್ಮೀ ಗೌಡರ ಸಲಹೆ ನೀಡಿದರು.
ತಾಪಂ ಅವರಣದಲ್ಲಿ ಬುಧವಾರ ನಡೆದ ಸ್ವಚ್ಛ ಸರ್ವೇಕ್ಷಣ ಜನಾಂದೋಲನ ರಥಕ್ಕೆ ಹಸಿರು ನಿಶಾನೆ ತೋರಿಸಿ ಚಾಲನೆ ನೀಡಿ ಮಾತನಾಡಿದ ಅವರು, ಜನರಲ್ಲಿ ಶುಚ್ಚಿತ್ವ, ಸ್ವಚ್ಚತೆ ಹಾಗೂ ನೈರ್ಮಲ್ಯದ ಮಹತ್ವದ ಬಗ್ಗೆ ಗ್ರಾಮೀಣಾ ಸಮುದಾಯದರಲ್ಲಿ ಅರಿವು ಮೂಡಿಸುವ ಮೂಲಕ ಜನ ಜಾಗೃತಿ ಮೂಡಿಸುವಲ್ಲಿ ಸಹಕರಿಸಬೇಕು ಎಂದರು.
ತಾಪಂ ಉಪಾಧ್ಯಕ್ಷ ವಿಶ್ವನಾಥ ಮರಿಬಸಪ್ಪನವರ್‌, ಸ್ಥಾಯಿ ಸಮಿತಿ ಅಧ್ಯಕ್ಷ ಸುಭಾಸ ಮಾದಿನೂರು, ಸದಸ್ಯರಾದ ಶರಣಪ್ಪ ಈಳಗೇರ, ರುದ್ರಪ್ಪ ಮರಕಟ್ಟ್‌, ಗವಿಸಿದ್ದಪ್ಪ ಜಂತ್ಲಿ, ಮಹಾಂತವ್ವ ನಾಯಕ, ರಾಮಪ್ಪ ಹೊಸಮನೆ, ಓಬಳೇಪ್ಪ ಕುಲಕರ್ಣಿ, ತಾಪಂ ನರೇಗ ಅಧಿಕಾರಿ ಹನಮಂತಗೌಡ ಪಾಟೀಲ, ಪತ್ರಕರ್ತ ಶರಣಪ್ಪ ಪಾಟೀಲ್‌ ಸೇರಿದಂತೆ ಮತ್ತಿತರರು ಇದ್ದರು.

loading...