ಜನ ಬದಲಾವಣೆ ಬಯಸಿದ್ದಾರೆ.. ಗೆಲುವು ಏನಿದ್ದರೂ ನಮ್ಮದೆ..| ಮಾಜಿ ಸಚಿವ ಶಿವರಾಜ ತಂಗಡಗಿ

0
3

ವಿಶೇಷ ಸಂದರ್ಶನ
ಮೌಲಾಹುಸೇನ ಬುಲ್ಡಿಯಾರ್

ಕೊಪ್ಪಳ: ಮಾಜಿ ಸಚಿವ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಶಿವರಾಜ ತಂಗಡಗಿ ಅವರ ಸಂದರ್ಶನ ಲೋಕಸಭಾ ಚುನಾವಣೆಯ ಮತದಾನಕ್ಕೆ ದಿನಗಣನೆ ಆರಂಭವಾಗಿರುವ ಹಿನ್ನಲೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ರಾಜಶೇಖರ್ ಹಿಟ್ನಾಳ ಪರ ಚುನಾವಣಾ ಬಿರುಸಿನ ಪ್ರಚಾರ ಕೈಗೊಂಡಿರುವ ಮಾಜಿ ಸಚಿವ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಶಿವರಾಜ ತಂಗಡಗಿ ಯವರು ಪತ್ರಿಕೆಯೊಂದಿಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಚುನಾವಣೆ ಕುರಿತು ಮಾತನಾಡಿದ್ದಾರೆ. ಲೋಕಸಭಾ ಚುನಾವಣೆಯ ಮತದಾನಕ್ಕೆ ದಿನಗಣನೆ ಆರಂಭವಾಗಿದ್ದು ಕಾಂಗ್ರೆಸ್ ಅಭ್ಯರ್ಥಿ ರಾಜಶೇಖರ್ ಹಿಟ್ನಾಳ ಪರ ಬಿರುಸಿನ ಪ್ರಚಾರ ಕೈಗೊಂಡಿರುವ ಮಾಜಿ ಸಚಿವ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಶಿವರಾಜ ತಂಗಡಗಿ ತಮ್ಮ ಅಭ್ಯರ್ಥಿಯನ್ನು ಗೆಲ್ಲಿಸಿಯೇತಿರುತ್ತೆÃವೆ ಎಂಬ ಪಣದೊಂದಿಗೆ ನಡೆದಿದ್ದಾರೆ. ಪ್ರಚಾರದ ಭರಾಟೆ ನಡುವೆಯೂ ಕನ್ನಡಮ್ಮದೊಂದಿಗೆ ಮಾತನಾಡಿದ ಅವರು ಜನ ಈ ಸಾರಿ ಬದಲಾಣೆ ಬಯಸಿದ್ದಾರೆ, ಯುಪಿಎ ಹಾಗೂ ಸಿದ್ದರಾಮಯ್ಯ ಆಡಳಿತಕ್ಕೆ ಜನಮನ್ನಣೆಯಿಂದ ಕಾಂಗ್ರೆಸ್ ಗೆಲುವಿನ ಬಗ್ಗೆ ಆತ್ಮವಿಶ್ವಾದಿಂದ ಮಾತನಾಡಿದರು.
* ಕ್ಷೆÃತ್ರದಲ್ಲಿ ಕಾಂಗ್ರೆಸ್ ಪರ ವಾತಾವರಣ ಇದೆಯೆ?

ಉ- ಕೊಪ್ಪಳ ಕ್ಷೆÃತ್ರದ ಇಡೀ ೮ ವಿಧಾನಸಭಾ ಕ್ಷೆÃತ್ರದಲ್ಲೂ ಕಾಂಗ್ರೆಸ್ ಪರ ಅಲೆ ಇದೆ. ಎಲ್ಲಾ ನಾಯಕರು ಒಗ್ಗಟ್ಟನಿಂದ ನಮ್ಮ ಅಭ್ಯರ್ಥಿ ಪರ ಕೆಲಸ ಮಾಡುತ್ತಿದ್ದೆÃವೆ. ಟಿಕೆಟ್ ಹಂಚಿಕೆಗು ಮುನ್ನ ೮ ಜನ ಆಕಾಂಕ್ಷಿಗಳು ಇದ್ದರು. ಆಗ ಇದ್ದ ಅಸಮಾಧಾನ ಈಗ ಇಲ್ಲ. ಪ್ರಚಾರಕ್ಕೆ ಹೋದ ಕಡೆಯಲ್ಲಿ ನಮ್ಮ ಪರ ಉತ್ತಮ ಪ್ರತಿಕ್ರಿಯೆ ಇದೆ.
* ಬಿಜೆಪಿ ಪರವೂ ವಾತಾವರಣವಿದೆ ಎಂದು ಹೇಳಲಾಗುತ್ತದೆ.. ಅದಕ್ಕೆ ಅಭಿಪ್ರಾಯ?

ಉ- ಕ್ಷೆÃತ್ರದಲ್ಲಿ ಒಂದು ಪಕ್ಷದ ಪರ ವಾತಾವರಣದ ಪ್ರಶ್ನೆಯೆ ಬರುವುದಿಲ್ಲ. ನಾನು ಕ್ಷೆÃತ್ರವ್ಯಾಪ್ತಿ ಅಭ್ಯರ್ಥಿ ಪರ ಎಲ್ಲಡೆ ಚುನಾವಣಾ ಪ್ರಚಾರ ಸಭೆಗಳನ್ನು ಮಾಡಿದ್ದೆÃನೆ ಕಾಂಗ್ರೆಸ್‌ಗೆ ಉತ್ತಮ ಬೆಂಬಲ ವ್ಯಕ್ತವಾಗಿದೆ. ಈ ಹಿಂದಿನ ಯುಪಿಎ, ಸಿದ್ದರಾಮಯ್ಯ ಸರ್ಕಾರ ಮತ್ತು ಈಗಿನ ಸಮ್ಮಿಶ್ರ ಸರ್ಕಾರದ ಆಡಳಿತವನ್ನು ಜನಮೆಚ್ಚಿಕೊಂಡಿದ್ದು, ಮೈತ್ರಿ ಅಭ್ಯರ್ಥಿ ಪರ ವಾತಾವರಣ ಇದೆ. ಬಿಜೆಪಿ ಬರೀ ಸುಳ್ಳು ಹೇಳಿಕೊಂಡು ಹೊರಟಿದೆ. ೨೦ ಪರ್ಸೆಂಟ್ ಸರ್ಕಾರ ಎನ್ನುವ ಮೋದಿ ಆ ಕುರಿತು ಸೂಕ್ತ ತನಿಖೆ ನಡೆಸಲಿ. ಪ್ರಧಾನಿ ಎಂದರೆ ಹಾದಿಬೀದಿಯಲ್ಲಿ ಮಾತನಾಡುವ ವ್ಯಕ್ತಿಯಲ್ಲ. ಜವಾಬ್ದಾರಿಯುತ ಸ್ಥಾನದಲ್ಲಿದ್ದು ದಾಖಲೆ ಸಹಿತ ಮಾತನಾಡಲಿ, ಅದನ್ನು ಬಿಟ್ಟು ದೊಡ್ಡ ಸುಳ್ಳು ಹೇಳುವುದು ತರವಲ್ಲ.
* ಕೊಪ್ಪಳದ ಕಾಂಗ್ರೆಸ್ ಬಗ್ಗೆ ಮುಸ್ಲಿಂರ ಬೇಸರವಿದೆ. ಹೇಗೆ ನಿಭಾಯಿಸುವಿರಿ?

ಉ- ಹಿಂದಿನಿಂದಲೂ ಕಾಂಗ್ರೆಸ್ ಅಲ್ಪಸಂಖ್ಯಾತರ ಅದರಲ್ಲಿಯೂ ಮುಸ್ಲಿಂರ ಹಿತ ಕಾಪಾಡಿಕೊಂಡು ಬಂದಿದೆ. ಸಾಮಾಜಿಕ ನ್ಯಾಯ ಹಂಚಿಕೆಯಲ್ಲಿ ಯಾವುದೇ ಅನ್ಯಾಯವಾಗಿಲ್ಲ, ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಚುನಾವಣೆ ನಡೆದಿದೆ. ಕೆಲ ಸಂದರ್ಭಗಳಲ್ಲಿ ಆಗಿರುವ ವ್ಯತ್ಯಾಸಗಳನ್ನು ಮುಖಂಡರು ಸರಿಪಡಿಸಿಕೊಂಡಿದ್ದಾರೆ. ಆದರೆ ಬಿಜೆಪಿಯವರು ಇಡೀ ರಾಜ್ಯದಲ್ಲಿ ಒಂದೇ ಒಂದು ಸ್ಥಾನವನ್ನು ಮುಸ್ಲಿಂರಿಗೆ ನೀಡಿಲ್ಲ. ಕೆಲವರು ಗೊಂದಲ ಮೂಡಿಸಲು ಅಪ್ರಚಾರ ಮಾಡುತ್ತದ್ದಾರೆ.
* ಕಾಂಗ್ರೆಸ್‌ನ ಗೆಲುವಿಗೆ ಮಾನದಂಡವೇನು?

ಉ- ನಾವು ಚುನಾವಣೆಯಲ್ಲಿ ಜನತೆಗೆ ನೀಡಿದ ಭರವಸೆಗಳನ್ನು ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದೆÃವೆ. ಆದರೆ ಬಿಜೆಪಿಯವರು ದೇಶದ ಜನತೆಗೆ ಕಪ್ಪು ಹಣ ತಂದು, ಅದನ್ನು ಪ್ರತಿಯೊಬ್ಬರ ಖಾತೆಗೆ ೧೫ ಲಕ್ಷ ಹಾಕುವುದಾಗಿ, ಪ್ರತಿವರ್ಷ ೨ ಕೋಟಿ ಉದ್ಯೊÃಗ, ಹೀಗೆ ಜನರನ್ನು ನಂಬಿಸಿ ಮೋಸ ಮಾಡಿದ್ದಾರೆ. ಕನಿಷ್ಠ ಶೇ. ೫೦ರಷ್ಟು ಭರವಸೆಗಳನ್ನು ಈಡೇರಿಸಿಲ್ಲ, ಕೇವಲ ರಾಜಕೀಯದಲ್ಲಿ ಧರ್ಮ ಬೆರೆಸಿ ಭಾವನಾತ್ಮಕವಾಗಿ ಜನರ ದಿಕ್ಕು ತಪ್ಪಿಸುತ್ತಿದ್ದಾರೆ. ಹೀಗಾಗಿ ಜನ ಬಿಜೆಪಿ ಬಗ್ಗೆ ಬೇಸರಗೊಂಡಿದ್ದು, ಕಾಂಗ್ರೆಸ್‌ನತ್ತ ಒಲವು ತೋರಿಸಿದ್ದಾರೆ. ಯುಪಿಎ ಅವಧಿಯಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೆÃವೆ. ಬಡವರಿಗೆ ಪ್ರತಿವರ್ಷ ೭೨ ಸಾವಿರ ಹಾಕುವುದು ಸೇರಿದಂತೆ ಹಲವು ಕಾರ್ಯಕ್ರಮಗಳೇ ನಮ್ಮ ಗೆಲುವಿಗೆ ಮಾನದಂಡ.
* ಕಾಂಗ್ರೆಸ್‌ಗೆ ಜನತೆ ಯಾಕೇ ಮತ ಹಾಕಬೇಕು?

ಉ- ದೇಶದ ಸಮಗ್ರತೆ, ಐಕ್ಯತೆ, ಸೌಹಾರ್ದತೆ ಕಾಪಾಡಿಕೊಂಡು, ಸಂವಿಧಾನದ ಆಶೆಯದಂತೆ ಪ್ರಜಾತಂತ್ರ ವ್ಯವಸ್ಥೆಯನ್ನು ಗೌರವಿಸಿ ಅದರಂತೆ ನಡೆದುಕೊಂಡು ಜನರ ಆಶೋತ್ತರಗಳನ್ನು ಈಡೇರಿಸಿದೆ. ಜೊತೆಗೆ ಎಲ್ಲಾ ವರ್ಗದಲ್ಲೂ ಸಮಾನತೆ ಕಂಡಿದ್ದು, ಸಂಪೂರ್ಣ ಬಡತನ ನಿರ್ಮೂಲನೆಗಾಗಿ ಪ್ರಯತ್ನಿಸಿ ಅದಕ್ಕೆ ಹಲವು ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದೆÃವೆ. ಆರ್‌ಟಿಐ, ಆರ್‌ಟಿಇ, ನರೇಗಾ, ಆಧಾರ್ ಸೇರಿದಂತೆ ಹಲವು ದೊಡ್ಡ ದೊಡ್ಡ ಯೋಜನೆಗಳನ್ನು ಜಾರಿಗೆ ತಂದಿದ್ದೆÃವೆ. ಇದಕ್ಕಾಗಿ ಕಾಂಗ್ರೆಸ್‌ಗೆ ಮತ ಹಾಕಬೇಕಿದೆ.
* ಹಿಟ್ನಾಳ ಕುಟುಂಬದ ಬಗ್ಗೆ ಪಕ್ಷದಲ್ಲಿ ಅಸಮಧಾನ ಇದೆ ಎಂಬ ಮಾತಿದೆ

ಉ- ಕೊಪ್ಪಳ ಜಿಲ್ಲೆಯಲ್ಲಿ ಹಿಟ್ನಾಳ ಮತ್ತು ಕರಡಿ ಕುಟುಂಬ ರಾಜಕಾರಣ ಇದೆ. ಆದರೆ ಕೊಪ್ಪಳದಲ್ಲಿ ಹಿಟ್ನಾಳ ಕುಟುಂಬ ಪಕ್ಷವನ್ನು ಕಟ್ಟಿ ಗೆಲ್ಲಿಸಿದೆ. ಸಾಮಾಜಿಕ ನ್ಯಾಯ ಹಂಚಿಕೆಯಲ್ಲಿ ಅವರಿಗೆ ಟಿಕೆಟ್ ಸಿಕ್ಕಿದೆ, ಪಕ್ಷದ ತೀರ್ಮಾನ ಮುಖ್ಯ. ಇಲ್ಲಿ ಯಾರೇ ಅಭ್ಯರ್ಥಿ ಆಗಲಿ ನಾವೆಲ್ಲ ಒಗ್ಗಟ್ಟಿನಿಂದ ದುಡಿಯಬೇಕು, ರಾಜಶೇಖರ ಅವರನ್ನು ಬಿಟ್ಟರೆ ಬೇರೆಯವರು ಆಕಾಂಕ್ಷಿಗಳಿದ್ದರು. ಆದರೆ ಕೆಲ ಮಾನದಂಡಗಳ ಆಧಾರದ ಮೆಲೆ ಅವರನ್ನು ಸ್ಪರ್ಧೆಗೆ ಇಳಿಸಲಾಗಿದೆ. ಯಾರಲ್ಲಿಯೂ ಅಸಮಧಾನ ಇಲ್ಲ, ಅದು ಮಾಧ್ಯಮದಲ್ಲಿ ಬರುವ ಸುಳ್ಳು ಪ್ರಚಾರವಷ್ಟೆ.
* ವಿಧಾನಸಭಾ ಚುನಾವಣೆಯಲ್ಲಿ ಸಿದ್ದರಾಮಯ್ಯ ಸೂಚನೆ ಯಾಕೆ ಇರಲಿಲ್ಲ?

ಉ- ಸಿದ್ದರಾಮಯ್ಯ ಅವರು ನಮ್ಮ ಪಕ್ಷದ ನಾಯಕರು, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಎಲ್ಲಕಡೆ ಪ್ರಚಾರ ನಡೆಸಿ ನಮ್ಮ ಗೆಲುವಿಗಾಗಿ ಶ್ರಮಿಸಿದ್ದಾರೆ. ಆದರೆ ಅದು ಮತದಾರನ ತೀರ್ಪಿಗೆ ನಾವು ತಲೆಬಾಗಲೇಬೇಕು. ಅಂದು ಕೂಡ ಅವರು ಜಿಲ್ಲೆಯ ಐದು ಕ್ಷೆÃತ್ರದಲ್ಲಿ ಪಕ್ಷ ಗೆಲ್ಲಲು ಸೂಚನೆ ನೀಡಿದಂತೆ ಈ ಚುನಾವಣೆಯಲ್ಲಿಯೂ ಎಲ್ಲ ಮುಖಂಡರಿಗೂ ಪಕ್ಷ ಗೆಲ್ಲಿಸಲು ಹೇಳಿದ್ದಾರೆ. ಅದನ್ನು ತಪ್ಪಾಗಿ ಅರ್ಥಸಿಕೊಳ್ಳಬಾರದು.
* ಪಕ್ಷ ಮತ್ತು ಅಭ್ಯರ್ಥಿ ಬಗ್ಗೆ ಕೆಲ ಆರೋಪಗಳು ಇವೆ

ಉ- ಇದು ಸತ್ಯಕ್ಕೆ ದೂರವಾದ ಮಾತು, ಸರ್ಕಾರದ ಕಾರ್ಯಕ್ರಮಗಳನ್ನು ನಾವೆಲ್ಲ ಪ್ರಾಮಾಣಿಕವಾಗಿ ಜನರಿಗೆ ತಲುಪಿಸಿದ್ದೆÃವೆ. ಚುನಾವಣೆ ವೇಳೆ ನನ್ನ ಮೇಲೂ ಕೆಲ ಸುಳ್ಳು ಆರೋಪಗಳನ್ನು ಮಾಡಿದ್ದರು, ಅಭ್ಯರ್ಥಿ ರಾಜಶೇಖರ ಹಿಟ್ನಾಳ ಬಗ್ಗೆ ಯಾವುದೇ ಆರೋಪಗಳು ಇಲ್ಲ, ಅವರು ಜಿಪಂ ಸದಸ್ಯರಾಗಿ, ಅಧ್ಯಕ್ಷರಾಗಿ ಒಳ್ಳೆಯ ಆಡಳಿತ ನೀಡಿದ್ದಾರೆ. ಸಾರ್ವಜನಿಕ ಜೀವನದಲ್ಲಿ ಇದೆಲ್ಲ ಸಹಜ, ನಾವೆಲ್ಲರೂ ಪಕ್ಷದ ಗೆಲುವಿಗಾಗಿ ಶ್ರಮಿಸುತ್ತಿದ್ದೆÃವೆ. ಈ ಚುನಾವಣೆಯಲ್ಲಿ ಗೆಲುವು ನಮ್ಮ ಪಕ್ಷದ ಅಭ್ಯರ್ಥಿಯದ್ದೆ, ಲಕ್ಷ ಮತಗಳ ಅಂತರದಿಂದ ಬಿಜೆಪಿ ಸೋಲು ನಿಶ್ಚಿತವೆಂದರು ೧೬ಕೆಪಿಎಲ್೮ ಮಾಜಿ ಸಚಿವ, ಕೊಪ್ಪಳ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಶಿವರಾಜ ತಂಗಡಗಿ. — @ ಮೌಲಾಹುಸೇನ ಬುಲ್ಡಿಯಾರ್ —

loading...