ಜನ ಸಾಮಾನ್ಯರ ಪಕ್ಷವೇ ಜೆಡಿಎಸ್‌: ರಾಜೇಂದ್ರ ಐಹೊಳೆ

0
43

ಕನ್ನಡಮ್ಮ ಸುದ್ದಿ- ಪಾಲಬಾವಿ: ಬಿಜೆಪಿ ಹಾಗೂ ಕಾಂಗ್ರೇಸ್‌ ಪಕ್ಷಕ್ಕೆ ಜನರು ಬೇಸತ್ತು ಹೋಗಿದ್ದಾರೆ. ಬರುವ ಚುನಾವಣೆಯಲ್ಲಿ ಜೆಡಿಎಸ್‌ ಪಕ್ಷವು ಅಧಿಕಾರಕ್ಕೆ ಬರಲಿದ್ದು ಎಹ್‌.ಡಿ.ಕುಮಾರಸ್ವಾಮಿ ಅವರು ಮುಂದಿನ ಮುಖ್ಯಮಂತ್ರಿಯಾಗಲಿದ್ದು. ನಾವೆಲ್ಲರೂ ಜೆಡಿಎಸ್‌ ಪಕ್ಷಕ್ಕೆ ಮತ ನೀಡಬೇಕೆಂದು ಕುಡಚಿ ಮತಕ್ಷೇತ್ರದ ಅಭ್ಯರ್ಥಿ ರಾ ಜೇಂದ್ರ ಐಹೊಳೆ ಹೇಳಿದರು. ಗ್ರಾಮದ ಭೀಮಪ್ಪ ಜುಂಜರವಾಡ ಅವರ ತೋಟದಲ್ಲಿ ಹಮ್ಮಿಕೊಂಡ ಜೆಡಿಎಸ್‌ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.
ಈ ಸಂದರ್ಭದಲ್ಲಿ ಮೂಗಳಿಹಾಳ, ಮಲ್ಲಪ್ಪ ಕಾಡಶೆಟ್ಟಿ, ಭೀಮಪ್ಪ ಜುಂಜರವಾಡ, ರಫೀಕ್‌ ಮುಲ್ಲಾ, ರಾಮಪ್ಪ ಬಳಗಾರ, ಶಂಬುಲಿಂಗ ಹೊರಟ್ಟಿ, ಬಸಪ್ಪ ಬುರಡಿ, ದಾವಲಸಾಬ ಮೂಡಲಗಿ, ಸಹದೇವ ಮಾದರ, ಪ್ರಕಾಶ ತೇಗೂರ, ಭರಮಪ್ಪ ಕರಜಗಿ, ಭರಮಪ್ಪ ಸತ್ತಿ, ಅಪ್ಪಾಸಾಬ ಬಬಲಿ ಇದ್ದರು.

loading...