ಜಲಾವೃತವಾದ ಸೇತುವೆ: ಶಾಲೆಗೆ ಹೋಗಲು ತಾರಾಪುರ ಮಕ್ಕಳ ಹರಸಾಹಸ

0
10

ಆಲಮೇಲ: ಮಹಾರಾಷ್ಟçದಿಂದ ಭೀಮಾನದಿಗೆ ಬಿಡಲಾಗಿರುವ ನೀರಿನಿಂದ ಸುಮಾರು ೨೦ದಿನಗಳಿಂದ ಜಲಾವೃತವಾಗಿ ಹೋರ ಸಂಪರ್ಕ ಕಳೆದುಕೊಂಡಿರುವ ಸಿಂದಗಿ ತಾಲೂಕಿನ ತಾರಾಪೂರ ಗ್ರಾಮದ ಶಾಲಾ ಮಕ್ಕಳು ಪ್ರತಿದಿನ ಸೇತುವೆ ಮೇಲಿ ನೀರು ನಿಂತಿದರಿಂದ ಪ್ರತಿದಿನ ನೀರಿನಲ್ಲಿ ನಡೆದುಕೊಂಡು ಹೋಗಬೇಕು ಅಲ್ಲದೆ ಚಿಕ್ಕ ಮಕ್ಕಳು ಸಹೋದರ ಮೇಲೆ ಕುಳಿತುಕೊಂಡು ಹೋಗಬೇಕು ಇಲ್ಲವಾದರೆ ಈಜುಕೊಂಡು ಹೋಗುವ ಸ್ಥಿತಿ ನಿರ್ಮಾವಾಗಿ ೨೦ ದಿನ ಕಳೆದರೂ ಕ್ರಮ ತೆಗೆದುಕೋಳ್ಳದ ಅಧಿಕಾರಿಗಳ ವಿರುದ್ದ ಜನರು ಆಕ್ರೊÃಶ ವ್ಯಕ್ತಪಡಿಸಿದ್ದಾರೆ.
ಆಲಮೇಲ ದಿಂದ ತಾರಾಪೂರಕ್ಕೆ ಸಂಪರ್ಕ ಕಲ್ಪಿಸಿಕೊಡುವ ಈ ರಸ್ತೆಯಲ್ಲಿರುವ ಸೇತುವೆ ಸಂಪೂರ್ಣವಾಗಿ ಮುಳಗಿದೆ,ತಾರಾಪುರ ಗ್ರಾಮದಿಂದ ಹೋರಗಡೆ ಹೋಗಲು ಇರುವ ಈ ಒಂದೆ ರಸ್ತೆಮಾತ್ರ ಇದ್ದು ಅದುಕೂಡಾ ನೀರಿನಲ್ಲಿ ಮುಳಗಿದೆ,ಹೀಗಾಗಿ ಮಕ್ಕಳು ದಿನಾ ಶಾಲೆಗೆ ಹೋಗಬೇಕ್ಕಾದರೆ ಮಹಿಳಿಯರು ಜಮಿನಿಗಳಿಗೆ ಹೋಗಬೇಕಾದರೆ ಈ ಸೇತುವೆ ಮೇಲೆ ಹಾದು ಹೋಗಬೇಕು, ಮಹಿಳಿಯರು ಕೂಡಾ ಬರುವಾಗ ನೀರಿನಲ್ಲಿ ನಡೆದುಕೊಂಡು ಹೋಗಬೇಕು ಪ್ರತಿದಿನ ನೀರಿನಲ್ಲಿ ಮೈ ಹಸಿ ಮಾಡಿಕೊಂಡು ಹೋಗುವದರಿಂದ ಶಾಲಾ ಮಕ್ಕಳಿಗೆ ಹಾಗೂ ಮಹಿಳಿಯರಿಗೆ ಜ್ವರ,ಹಾಗೂ ಇತರೆ ರೋಗಗಳು ಕಾಣಿಸಿಕೊಳ್ಳುತ್ತಿವೆ ನೀರಿನಿ ಮಟ್ಟ ಕಡಿಮೆ ಮಾಡಬೇಕು ಎಂದು ಎಷ್ಟು ಬಾರಿ ಮನವಿ ಮಾಡಿಕೊಂಡರು ನೀರಿನ ಮಟ್ಟ ಕಡಿಮೆ ಮಾಡಿಲ್ಲ ಎಂದು ತಾರಾಪೂರ ಗ್ರಾಮಸ್ಥರು ಆಕ್ರೊÃಶ ವ್ಯಕ್ತಪಡಿಸಿದ್ದಾರೆ.
ಒಂದು ವಾರದ ಹಿಂದೆ ಅಷ್ಟೆ ಇಂಡಿ ಉಫವಿಭಾಗ ಅಧಿಕಾರಿ ಪಿ ರಾಜಾ ಅವರು ಗ್ರಾಮಸ್ಥರ ಸಭೆ ಕರೆದು ಇರುವ ನೀವೇಶದ ಸಮಸ್ಯಗಳು ನೀವೇಶನ ಹಂಚಿಕೆಯಲ್ಲಿ ಆದ ತಾರತಮ್ಯ ಬಗೆಹರಿಸುವದಾಗಿ ಹೇಳಿದರು,ಆಗ ಕೂಡಾ ಅವರಿಗೆ ನೀರಿನ ಮಟ್ಟ ಕಡಿಮೆ ಮಾಡಿಸಬೇಕು ಎಂದು ಮನವಿನ ಮಾಡಿಕೊಂಡಿದ್ದೆವೆ, ಆ ವೇಳೆ ಭೀಮಾಏತನೀರಾವರಿ ಅಧಿಕಾರಿಗಳು ಕೂಡಾ ಅಲ್ಲೆÃ ಇದ್ದರು ಅಲ್ಲಿಯಿಂದ ಇಲ್ಲಿವರೆಗೂ ನೀರಿನ ಮಟ್ಟ ಕಡಿಮೆ ಮಾಡಿಲ್ಲ, ಶಿಕ್ಷಣ ಇಲಾಖೆಯೂ ಕೂಡಾ ಎರಡು ದಿನ ರಜೆ ಘೋಷಣೆ ಮಾಡಿತ್ತು ಮತ್ತೆ ಶಾಲೆ ಪ್ರಾರಂಬಮಾಡಿದೆ ಅಧಿಕಾರಿಗಳು ತಮ್ಮ ಕೆಲಸ ಮಾಡುವದು ಮಾತ್ರ ನೋಡಿಕೊಳ್ಳುತ್ತಾ ನಮ್ಮ ಸಮಸ್ಯೆಗೆ ಸ್ಪಂದಿಸುತ್ತಿಲ್ಲ,ಅಥವಾ ವಿಜಯಪುರ ಜಿಲ್ಲೆಯ ಅಧಿಕಾರಿಗಳ ಮಾತಿಗೆ ಭೀಮಾ ಏತನೀರಾವರಿ ಅಧಿಕಾರಿಗಳು ಕಿಮ್ಮತ್ತು ಕೂಡತಾ ಇಲ್ಲ ಯಾವದು ತಿಳಿಯುತ್ತಿಲ್ಲ,ಹಿಂದೆ ಜಿಲ್ಲಾ ಅಧಿಕಾರಿಗಳು,ಜಿಲ್ಲಾ ಉಸ್ತುವಾರಿ ಸಚಿವರು ಕೂಡಾ ಭೀಮಾ ಏತನೀತರಾವರಿ ಅಧಿಕಾರಿಗಳಿಗೆ ನೀರು ಇಳಿಸಲು ಹೇಳಿದರು ಆಗಲೂ ನೀರಿನ ಮಟ್ಟ ಕಡಿಮೆ ಮಾಡಲಿಲ್ಲ ಹೀಗಾಗಿ ಅವರಿಗೆ ಹೇಳುವರು ಯಾರು ಇಲ್ವಾ,ಅಥವಾ ಅವರು ಯಾರು ಮಾತು ಕೇಳುತ್ತಿಲ್ವಾ, ಗುಲಬಯರ್ಗಾ ಜಿಲ್ಲೆಯ ನೀರಾವರಿಗಾಗಿ ಜಮಿನು ಕೊಟ್ಟಿರುವ ನಮ್ಮ ಜಿಲ್ಲೆಯ ರೈತರು ತಪ್ಪುಮಾಡಿದ್ರಾ, ಇದನು ಕೂಡಲೇ ಅಧಿಕಾರಿಗಳು ಉತ್ತರ ನೀಡಬೇಕು ಎಂದು ಗ್ರಾಮಸ್ಥರಾದ ವಿಶ್ವನಾಥ ಹೀರೆಮಠ ಆಗ್ರಹಿಸಿದ್ದಾರೆ.

 

loading...